ಉದ್ದ ಕೂದಲಿಗೆ ಜುಟ್ಟು ಕಟ್ಟಿ ಪರೇಡ್ ಮಾಡಿದ ಶಿಕ್ಷಕ, ಅವಮಾನದಿಂದ ಖಿನ್ನತೆಗೆ ಜಾರಿದ ವಿದ್ಯಾರ್ಥಿ!

By Chethan KumarFirst Published Jul 21, 2024, 6:01 PM IST
Highlights

4ನೇ ತರಗತಿ ವಿದ್ಯಾರ್ಥಿ ಕೂದಲನ್ನು ಒಂದಿಷ್ಟು ಉದ್ದ ಬಿಟ್ಟಿದ್ದಾನೆ. ಇದಕ್ಕೆ ಗರಂ ಆದ ಟೀಚರ್ ಸಣ್ಣ ಜುಟ್ಟು ಕಟ್ಟಿ ಶಾಲಾ ಆವರಣದಲ್ಲಿ ಪರೇಡ್ ಮಾಡಿದ್ದಾರೆ. ಆದರೆ ಈ ಅವಮಾನದಿಂದ ಬಾಲಕ ಇದೀಗ ಖಿನ್ನತೆಗೆ ಜಾರಿದ್ದಾನೆ.
 

ಕಾನ್ಪುರ(ಜು.21) ಶಾಲೆ ಮಕ್ಕಳಿಗೆ ವಿದ್ಯೆ ಜೊತೆಗೆ ಶಿಸ್ತು ಕಲಿಸುವ ದೇಗುಲ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಟೀಚರ್ ಪಾತ್ರ ಅತ್ಯಂತ ಮುಖ್ಯ. ಹಲವರು ಬಾರಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಸ್ತಿನ ವಿಚಾರದಲ್ಲಿ ಗದರಿಸಿ, ಹೊಡೆದು, ಬಡಿದ ಊದಾಹರಣೆಗಳಿವೆ. ಆದರೆ ಇತ್ತೀಚೆಗೆ ಹಲವು ಘಟನೆಗಳು ಕ್ಷುಲ್ಲಕ ಕಾರಣಗಳಿಗೆ ಅತೀರೇಖದ ಶಿಕ್ಷೆ ನೀಡುತ್ತಿರುವುದು ವಿಪರ್ಯಾಸ. ಇದೀಗ 4ನೇ ತರಗತಿ ಬಾಲಕ ಕೂದಲ ಕೊಂಚ ಉದ್ದ ಬಂದಿದೆ. ಶಿಸ್ತು ಪಾಲಿಸಿಲ್ಲ ಎಂದು ಟೀಚರ್, ಆತನ ಕೂದಲಿಗೆ ಜುಟ್ಟು ಕಟ್ಟಿ ಶಾಲಾ ಆವರಣದಲ್ಲಿ ಪರೇಡ್ ನಡೆಸಿದ ಘಟನೆ ಉತ್ತರ ಪ್ರದೇಶದ ಕಾನ್ಪರದಲ್ಲಿ ನಡದಿದೆ. ಇದರ ಪರಿಣಾಮ 9ರ ಹರೆಯದ ಬಾಲಕ ಖಿನ್ನತೆಗೆ ಜಾರಿದ್ದಾನೆ. ಈ ಘಟನೆ ಬೆನ್ನಲ್ಲೇ ಟೀಚರನ್ನು ಅಮಾನತು ಮಾಡಲಾಗಿದೆ.

ಮಹರಾಜಪುರದ ಆಕ್ಸ್‌ಫರ್ಡ್ ಮಾಡೆಲ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಉದ್ಯಮಿ ರಾಮ್ಜಿ ಗುಪ್ತಾ ಪುತ್ರ ವಿನಾಯಕ್ ಈ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಕಳೆದ ವಾರ ಕ್ಲಾಸ್ ಟೀಚರ್ ಉತ್ಕರ್ಷ, ಮಗನ ಕೂದಲ ಉದ್ದವಾಗಿದೆ. ಶಿಸ್ತು ಪಾಲಿಸಿಲ್ಲ ಎಂದು ಗದರಿದ್ದಾರೆ. ಪುತ್ರ ವಿನಾಯಕನ ಕೂದಲು ಕೊಂಚ ಉದ್ದ ಬಂದಿದೆ ನಿಜ. ತರಗತಿಯಲ್ಲಿ ಟೀಚರ್ ಹಿಗ್ಗಾ ಮುಗ್ಗ ಗದರಿದ್ದಾರೆ.

Latest Videos

8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ ಕಳುಹಿಸಿ ಮಂಚಕ್ಕೆ ಕರೆದ ಶಿಕ್ಷಕಿ ಅರೆಸ್ಟ್!

ಇಷ್ಟಕ್ಕೆ ನಿಲ್ಲಿಸಿದ ಟೀಚರ್, ಬಳಿಕ ಬಾಲಕನ ಹಿಂಭಾಗದ ಉದ್ದ ಕೂದಲನ್ನು ಜುಟ್ಟು ಕಟ್ಟಿದ್ದಾರೆ. ಶಾಲಾ ಆವರಣದಲ್ಲಿ ಬಾಲಕನ ಕೈ ಹಿಡಿದು ಪರೇಡ್ ನಡೆಸಿದ್ದಾರೆ. ಇದರಿಂದ ಇತರ ವಿದ್ಯಾರ್ಥಿಗಳ ಮುಂದೆ ಅವಮಾನವಾಗಿದೆ. ಇಷ್ಟೇ ಅಲ್ಲ ಈ ಘಟನೆಯನ್ನು ಪೋಷಕರಿಗೆ ತಿಳಿಸಿದರೆ ಶಾಲೆಯಿಂದ ಅಮಾನತು ಮಾಡುವುದಾಗಿ ಬೆದರಿಸಿದ್ದಾರೆ ಎಂದು ಬಾಲಕನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಾಲಕನ ಕಳೆದವಾರದಿಂದ ಶಾಲೆಗೆ ತೆರಳಲು ನಿರಾಕರಿಸುತ್ತಿದ್ದ, ಮೌನಕ್ಕೆ ಜಾರಿದ್ದಾನೆ. ಆಹಾರ, ನಿದ್ದೆ ಸರಿಯಾಗಿ ಮಾಡುತ್ತಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಆಸ್ಪತ್ರೆ ದಾಖಲಿಸಿದಾಗ ಖಿನ್ನತೆಗೆ ಜಾರಿರುವುದಾಗಿ ವೈದ್ಯರು ಹೇಳಿದ್ದಾರೆ. ಹೀಗಾಗಿ ಟೀಚರ್ ವಿರುದ್ಧ ದೂರು ನೀಡಿರುವುದಾಗಿ ಉದ್ಯಮಿ ಹೇಳಿದ್ದಾರೆ. 

ಶಿಸ್ತು ಅತೀ ಮುಖ್ಯ. ಆದರೆ ಎಳೆ ಮಕ್ಕಳಿಗೆ ಯಾವ ಮಟ್ಟದ ಶಿಕ್ಷೆ ನೀಡಬೇಕು ಅನ್ನೋ ಪರಿಜ್ಞಾನ ಶಿಕ್ಷಕರಿಗೆ ಇರಬೇಕು. ಇದು ಅತೀರೇಖದ ಶಿಕ್ಷೆಯಾಗಿದೆ. ಉದ್ದ ಕೂದಲಿಗೆ ಕತ್ತರಿ ಹಾಕಲು ಸೂಚಿಸುವುದು, ವಾರ್ನಿಂಗ್ ನೀಡುವುದು ತಪ್ಪಲ್ಲ, ಆದರೆ ಪರೇಡ್ ನಡೆಸಿ ಅಪಮಾನ ಮಾಡಿರುವುದು ತಪ್ಪು ಎಂದು ಬಾಲಕನ ತಂದೆ ಆರೋಪಿಸಿದ್ದಾರೆ. ದೂರಿನ ಬೆನ್ನಲ್ಲೇ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.

ಹಣ ನೀಡದ್ದಕ್ಕೆ ಸ್ಫೂರ್ತಿ ಕರಿಯರ್ ಮಾಲೀಕನಿಗೆ ಚಾಕು ಇರಿದ ವಿದ್ಯಾರ್ಥಿ!

click me!