ನಿಫಾ ವೈರಸ್ ಖಚಿತಗೊಂಡ ಬೆನ್ನಲ್ಲೇ ಕೇರಳದ 14ರ ಬಾಲಕ ಸಾವು, ಕರ್ನಾಟಕದಲ್ಲಿ ಅಲರ್ಟ್!

By Chethan Kumar  |  First Published Jul 21, 2024, 4:53 PM IST

ನಿಫಾ ವೈರಸ್ ಭೀತಿ ಹೆಚ್ಚಾಗತೊಡಗಿದೆ. ಕೇರಳದಲ್ಲಿ 14 ವರ್ಷದ ಬಾಲಕನಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು. ತೀವ್ರ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಕೇರಳಕ್ಕೆ ಗಡಿ ಹಂಚಿಕೊಂಡಿರುವ ಕರ್ನಾಟಕ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
 


ತಿರುವನಂತಪುರಂ(ಜು.21) ಕೇರಳದ 14ರ ಬಾಲಕನಲ್ಲಿ ಮಾರಣಾಂತಿಕ ನಿಫಾ ವೈರಸ್ ಖಚಿತಗೊಂಡ ಮರುದಿನವೇ ಆತಂಕ ಹೆಚ್ಚಾಗಿದೆ. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ನಿಫಾ ವೈರಸ್‌ಗೆ ಬಲಿಯಾಗಿದ್ದಾನೆ. ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕನಿಗೆ ನಿಫಾ ಸೋಂಕು ದೃಋಪಟ್ಟಿತ್ತು. ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ನೆರವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಬಾಲಕನನ್ನು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಇಂದು ಬಾಲಕ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಕೇರಳಕ್ಕೆ ಗಡಿ ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.  ನಿಫಾ ವೈರಸ್‌ನಿಂದ ಈ ಬಾಲಕ ಮೃತಪಟ್ಟಿದ್ದಾನೋ ಅಥವಾ ಇತರ ಕಾರಣಗಳಿಂದ ಮೃತಪಟ್ಟಿದ್ದಾನೋ ಅನ್ನೋದು ಶೀಘ್ರದಲ್ಲ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಲಿದೆ.

ಕೇರಳದ ನಿಫಾ ವೈರಸ್ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಚಿತಪಡಿಸಿದ್ದರು. ಬಾಲಕನ ಮಾದರಿಯನ್ನು ಪುಣೆ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಈ ವರದಿ ಕೇರಳವನ್ನು ಬೆಚ್ಚಿ ಬೀಳಿಸಿತ್ತು. ಬಾಲಕನಲ್ಲಿ ನಿಫಾ ಸೋಂಕು ಖಚಿತವಾಗಿತ್ತು. ಈ ವರದಿ ಕೇರಳ ತಲುಪುತ್ತಿದ್ದಂತೆ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ತಕ್ಷಣ ಬಾಲಕನನ್ನು ಖಾಸಗಿ ಆಸ್ಪತ್ರೆಯಿಂದ ಕಲ್ಲಿಕೋಟೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು.

Tap to resize

Latest Videos

ಕೇರಳದ 14 ವರ್ಷದ ಬಾಲಕನಲ್ಲಿ ಪತ್ತೆಯಾದ ನಿಫಾ ವೈರಸ್, ಹೈ ಅಲರ್ಟ್ ಘೋಷಣೆ!

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವೀಣಾ ಜಾರ್ಜ್, ಬಾಲಕನಲ್ಲಿ ನಿಫಾ ವೈರಸ್ ಖಚಿತವಾಗಿದೆ. ಪುಣೆ ವೈರಾಲಜಿ ಸಂಸ್ಥೆ ವರದಿ ಖಚಿತಪಡಿಸಿದೆ. ಬಾಲಕನ ಮೊದಲ ಸಂಪರ್ಕಿತರನ್ನು ಐಸೋಲೇಶನ್ ಮಾಡಲಾಗಿದೆ. ಇದೀಗ ಬಾಲಕನ ಸಂಪರ್ಕಿತರ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ. ಐಸೋಲೇಶನ್ ಮಾಡಿರುವ ವ್ಯಕ್ತಿಗಳ ಮಾದರಿಗಳನ್ನು ಸಂಗ್ರಹಿಸಿ ಕಳುಹಿಸಲಾಗಿದೆ ಎಂದಿದ್ದರು.

ನಿಫಾ ವೈರಲ್ ಹರದಂತೆ ಮುನ್ನಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರು ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದರು. ಇದೇ ವೇಳೆ ಆಸ್ಪತ್ರೆಯಲ್ಲಿ ರೋಗಿಗಳ ಬೇಟಿಗೆ ತೆರಳುವ ವ್ಯಕ್ತಿಗಳು ಮಾಸ್ಕ್ ಧರಿಸಲು ಸೂಚನೆ ನೀಡಿದ್ದರು. ಇನ್ನು ಮನೆಗಳ ಪಕ್ಕ ಬಾವಲಿಗಳು ವಾಸವಿದ್ದರೆ ಓಡಿಸಲು ಮನವಿ ಮಾಡಿದ್ದಾರೆ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನಬೇಡಿ. ಯಾವುದೇ ಹಣ್ಣುಗಳನ್ನು ಸ್ವಚ್ಚವಾಗಿ ತೊಳೆದು ಸೇವಿಸುವಂತೆ ಮನವಿ ಮಾಡಿದ್ದಾರೆ. 

ಕೋವಿಡ್‌ನಿಂದ ಭಾರತದಲ್ಲಿ ಸಾವು ಆಗಿದ್ದೆಷ್ಟು? ಆಕ್ಸಫರ್ಡ್‌ ವಿವಿ ವರದಿಯಲ್ಲಿ ಆತಂಕಕಾರಿ ಮಾಹಿತಿ

ಕೇರಳದಲ್ಲಿ ಕಳೆದ ಕೆಲ ವರ್ಷಗಳಿಂದ ನಿಫಾ ವೈರಸ್ ಆತಂಕ ಸೃಷ್ಚಿಸುತ್ತಿದೆ. 2018, 2019, 2021 ಹಾಗೂ 2023ರಲ್ಲೂ ಕೆರಳದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿತ್ತು

click me!