ಪಾರ್ಕ್ ಸೇರಿದಂತೆ ಕೆಲ ಸಾರ್ವಜನಿಕ ಪ್ರದೇಶದಲ್ಲಿ ಜೋಡಿಗಳ ರೊಮ್ಯಾನ್ಸ್, ಅಶ್ಲೀಲ ನಡೆಗಳ ದೃಶ್ಯಗಳು ಭಾರಿ ಕೋಲಾಹಲ ಸೃಷ್ಟಿಸಿದೆ. ಇದೀಗ ದೇವಸ್ಥಾನದ ಒಳಗೆ, ಗರ್ಭಗುಡಿ ಪಕ್ಕದಲ್ಲೇ ಜೋಡಿ ರೊಮ್ಯಾನ್ಸ್ ಮಾಡಿ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಎಫ್ಐಆರ್ ದಾಖಲಾಗಿದೆ.
ಇಂದೋರ್(ಜು,21) ಮಹಡಿ ಮೇಲೆ, ಪಾರ್ಕ್, ಸಿನಿಮಾ ಥಿಯೇಟರ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜೋಡಿಗಳು ಮೈಮರೆತು ಅಶ್ಲೀಲವಾಗಿ ನಡೆದುಕೊಂಡು ಪ್ರಕರಣಗಳು ಹಲವಿದೆ. ಈ ಪೈಕಿ ದೂರು ದಾಖಲಾಗಿದೆ. ವಿಡಿಯೋಗಳು ವೈರಲ್ ಆಗಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಪಾರ್ಕ್, ಸಾರ್ವಜನಿಕ ಪ್ರದೇಶ ಸೇಫ್ ಅಲ್ಲ ಎಂದು ಜೋಡಿ ನೇರವಾಗಿ ದೇವಸ್ಥಾನಕ್ಕೆ ತೆರಳಿ ಗರ್ಭಗುಡಿ ಪಕ್ಕದಲ್ಲೇ ರೊಮ್ಯಾನ್ಸ್ ಮಾಡಿದ ಘಟನೆ ಮಧ್ಯಪ್ರದೇಶ ಐತಿಹಾಸಿಕ ಕೃಷ್ಣಾಪುರ ಛಾತ್ರಿಯ ಶಿವ ದೇವಸ್ಥಾನದಲ್ಲಿ ನಡೆದಿದೆ. ಗರ್ಭಗುಡಿ ಪಕ್ಕದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುತ್ತಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಈ ಘಟನೆಯನ್ನು ವಕೀಲ ಅಭಿಜಿತ್ ಪಾಂಡೆ ಚಿತ್ರೀಕರಿಸಿ ದೂರು ನೀಡಿದ್ದಾರೆ.
ಅನಾಮಕಿ ಜೋಡಿ ದೇವಸ್ಥಾನಕ್ಕೆ ಆಗಮಿಸಿದೆ. ಬಳಿಕ ನೇರವಾಗಿ ಗರ್ಭಗುಡಿ ಪಕ್ಕಕ್ಕೆ ತೆರಳಿ ಮಹಡಿ ಹತ್ತಿದ್ದಾರೆ. ಮಹಡಿ ಮೇಲೆ ಬಂದ ಈ ಜೋಡಿ ಸುತ್ತ ಮುತ್ತ ನೋಡಿದ್ದಾರೆ. ಸಾಮಾನ್ಯವಾಗಿ ಈ ಮಹಡಿ ಮೇಲೆ ಸಿಬ್ಬಂಧಿಗಳು ಶುಚಿ ಕಾರ್ಯ, ಅಲಂಕಾರ ಸೇರಿದಂತೆ ಇತರ ಕೆಲಸಗಳಿಗೆ ಮಾತ್ರ ತೆರಳುತ್ತಾರೆ. ಹೀಗಾಗಿ ಇದೇ ಸೇಫ್ ಸ್ಥಳ ಎಂದು ಖಚಿತಪಡಿಸಿದ ಜೋಡಿ ನೇರವಾಗಿ ರೊಮ್ಯಾನ್ಸ್‌ನಲ್ಲಿ ಬ್ಯೂಸಿಯಾಗಿದೆ.
ಮಳೆಯಲಿ ಜೊತೆಯಲಿ ಕದ್ದು ಮುಚ್ಚಿ ಮಹಡಿ ಮೇಲೆ ಕಿಸ್ಸಿಂಗ್, ರೋಮ್ಯಾನ್ಸ್ ವಿಡಿಯೋ ವೈರಲ್!
ಚುಂಬನ, ಆಲಿಂಗನದಿಂದ ಆರಂಭಗೊಂಡ ಈ ಜೋಡಿಯ ರೊಮ್ಯಾನ್ಸ್ ಬಳಿಕ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಇದೇ ದೇವಸ್ಥಾನದ ದರ್ಶನಕ್ಕೆ ಆಗಮಿಸಿದ್ದ ವಕೀಲ ಅಭಿಜಿತ್ ಪಾಂಡೆ ದೂರದಿಂದ ಜೋಡಿಯ ರೊಮ್ಯಾನ್ಸ್ ಗಮನಿಸಿದ್ದಾರೆ. ದೂರದಿಂದಲೇ ಗದರಿದ್ದಾರೆ. ಆದರೆ ರೊಮ್ಯಾನ್ಸ್‌ನಲ್ಲಿ ಮೈಮರೆತ ಈ ಜೋಡಿಗೆ ಅದ್ಯಾವುದು ಕೇಳಿಸಿಲ್ಲ. ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿದ ಪಾಂಡೆ, ಬಳಿಕ ಗರ್ಭಗುಡಿ ಪಕ್ಕದ ಮಹಡಿ ಹತ್ತಿ ಜೋಡಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ತಕ್ಷಣವೇ ಸ್ಥಳದಿಂದ ಜೋಡಿಗಳು ಕಾಲ್ಕಿತ್ತಿದ್ದಾರೆ. ಇತ್ತ ಅಭಿಜಿತ್ ಪಾಂಡೆ, ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇದೇ ವೇಳೆ ಅತ್ಯಂತ ಪವಿತ್ರ ಸ್ಥಳದಲ್ಲಿ ಯುವಕ ಹಾಗೂ ಯುವತಿ ಅಸಭ್ಯವಾಗಿ ವರ್ತಿಸಿದ್ದಾರೆ. ದೇವಸ್ಥಾನ ಪಾವಿತ್ರ್ಯತೆ, ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಇದು ಅತ್ಯಂತ ಗಂಭೀರ ವಿಚಾರ. ಹೀಗಾಗಿ ಈ ಜೋಡಿಯನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕಾಗಿ ಅಭಿಜಿತ್ ಪಾಂಡೆಆಗ್ರಹಿಸಿದ್ದಾರೆ. ಶಾಂತವಾಗಿರುವ ಈ ದೇವಸ್ಥಾನದಲ್ಲಿನ ಸಿಸಿಟಿವಿಗಳನ್ನು ಪರಿಶೀಲಿಸಲು ವಕೀಲರು ಆಗ್ರಹಿಸಿದ್ದಾರೆ. ಇದೇ ರೀತಿ ಹಲವು ಘಟನೆಗಳು ನಡೆದಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ರೈಲಿನಲ್ಲಿ ಖುಲ್ಲಂ ಖುಲ್ಲಾ ಸೀನ್, ಜೋಡಿಯ ರೋಮ್ಯಾನ್ಸ್‌ಗೆ ಸುಸ್ತಾದ ಪ್ರಯಾಣಿಕರು!