ಧಿರಿಸಿನಿಂದಾಗಿ ಕಿರುಕುಳಕ್ಕೊಳಗಾದ ಯುವಕ: ಗಂಡಸರಂತೆ ಬಟ್ಟೆ ಧರಿಸಿ ಎಂದ ಕಾಲೇಜು

Published : Apr 19, 2022, 08:01 PM IST
ಧಿರಿಸಿನಿಂದಾಗಿ ಕಿರುಕುಳಕ್ಕೊಳಗಾದ ಯುವಕ: ಗಂಡಸರಂತೆ ಬಟ್ಟೆ ಧರಿಸಿ ಎಂದ ಕಾಲೇಜು

ಸಾರಾಂಶ

ತನಗಿಷ್ಟ ಬಂದಂತೆ ಬಟ್ಟೆ ಧರಿಸಿದ್ದಕ್ಕೆ ಕಿರುಕುಳ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡ ಯುವಕ ಪುಲ್ಕಿತ್ ಮಿಶ್ರಾ ಎಂಬ ಯುವಕನ ಪೋಸ್ಟ್ ವೈರಲ್

ತನಗಿಷ್ಟ ಬಂದಂತೆ ಬಟ್ಟೆ ಧರಿಸಿದ್ದಕ್ಕೆ ಯುವಕನೋರ್ವ ಕಾಲೇಜಿನಲ್ಲಿ ಕಿರುಕುಳಕ್ಕೊಳಗಾದ ಘಟನೆ ನಡೆದಿದ್ದು, ಇದನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಆತನ ಪೋಸ್ಟ್ ಈಗ ವೈರಲ್ ಆಗಿದೆ.

ನಾಗರಿಕ ಸಮಾಜದಲ್ಲಿ ಬದುಕುವ ನಾವು ನಮ್ಮ ವೇಷಭೂಷಣದ ಬಗ್ಗೆ ಜನರಿಂದ ಒಳ್ಳೆಯ ಹಾಗೂ ಕೆಟ್ಟ ಎರಡೂ ಅಭಿಪ್ರಾಯಗಳನ್ನು ಕೇಳುತ್ತೇವೆ. ಎಲ್ಲರ ಅಭಿರುಚಿ ಒಂದೇ ರೀತಿ ಇರಲು ಸಾಧ್ಯವಿಲ್ಲ. ಎಲ್ಲರೊಂದಿಗೆ ಬದುಕುವ ನಾವು ಕೆಲ ಕಟ್ಟುಪಾಡುಗಳಿಂದಾಗಿ ನಮಗಿಷ್ಟ ಬಂದಂತೆ ಕೆಲವೊಮ್ಮ ಬಟ್ಟೆ ಧರಿಸಲಾಗದಂತಹ ಸ್ಥಿತಿಯನ್ನು ಕೆಲವರು ಅನುಭವಿಸಿರಲೂಬಹುದು. ಪುರುಷರು ಇದೇ ರೀತೀಯ ಬಟ್ಟೆ ಧರಿಸಬೇಕು ಹಾಗೆಯೇ ಮಹಿಳೆಯರ ಧಿರಿಸು ಇದೇ ರೀತಿ ಇರಬೇಕು ಎಂಬ ಅಲಿಖಿತ ನಿಯಮವೊಂದು ಈ ಸಮಾಜದಲ್ಲಿದೆ. ಅದನ್ನು ಮೀರಿದಲ್ಲಿ ಜನ ವಿಲಕ್ಷಣವಾಗಿ ನೋಡುವಂತಹ ಪರಿಸ್ಥಿತಿ ನಮ್ಮ ಇಂದಿನ ಸಮಾಜದಲ್ಲಿದೆ. ಇಲ್ಲೊರ್ವ ಕಾಲೇಜು ಯುವಕನಿಗೆ ಅದೇ ರೀತಿಯ ಅನುಭವವಾಗಿದೆ.

 

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪುರುಷರ ಧಿರಿಸು ಧರಿಸಿದರೆ ಇಂದು ಬಹುತೇಕ ಯಾರೂ ಕೂಡ ಕೇಳುವುದಿಲ್ಲ. ಅದೂ ಫ್ಯಾಷನ್‌ ಎಂಬ ಹೆಸರಿನಲ್ಲಿ ಬದಲಾಗಿದ್ದು, ಆ ಲೆಕ್ಕದಲ್ಲಿ ಹೇಳುವುದಾದರೆ ಇಂದಿನ ಹೆಣ್ಣು ಮಕ್ಕಳು ಪುಣ್ಯವಂತರು. ಆದರೆ ಪುರುಷರ ಸ್ಥಿತಿ. ಧಿರಿಸಿನ ವಿಚಾರದಲ್ಲಿ ಪುರುಷರ ಬಟ್ಟೆ ಹೀಗೆಯೇ ಇರಬೇಕು ಎಂಬ ಅಲಿಖಿತ ನಿಯಮ ದಟ್ಟವಾಗಿದ್ದು, ಹೆಣ್ಣು ಮಕ್ಕಳಂತೆ ಪುರುಷರು ಬಟ್ಟೆ ತೊಟ್ಟರೆ ಅವಮಾನವಾಗುವುದಂತು ಖಂಡಿತ. ಈ ನಿಯಮವನ್ನು ಬದಲಿಸುವ ಸಲುವಾಗಿಯೇ ಪುಲ್ಕಿತ್‌ ಮಿಶ್ರಾ (Pulkit mishra) ಯುವಕನೋರ್ವ ಹೆಣ್ಣು ಮಕ್ಕಳೇ ಧರಿಸುವ ಬಟ್ಟೆಯನ್ನು ಧರಿಸಿ ಕಾಲೇಜಿಗೆ ಹೋಗಿದ್ದಾನೆ. ಆದರೆ ಅಲ್ಲಿ ಆತನನ್ನು ಸೆಕ್ಯೂರಿಟಿ ಗಾರ್ಡ್‌ (security Guard) ತಡೆದು ನಿಲ್ಲಿಸಿದ್ದಾನೆ.

ನಂತರ ಏನಾಯಿತು ಎಂಬುದನ್ನು ಆ ಯುವಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಹೀಗೆ ಹೆಣ್ಣು ಮಕ್ಕಳಂತೆ ಬಟ್ಟೆ ಧರಿಸಿ ಹೋದ ನನ್ನನ್ನು ಕಾಲೇಜು ದ್ವಾರದಲ್ಲೇ ಸೆಕ್ಯೂರಿಟಿ ಗಾರ್ಡ್‌ ತಡೆದು ನಿಲ್ಲಿಸಿದರು. ನನ್ನನ್ನು ನೋಡಿದ ಅವರ ಮುಖದ ಭಾವನೆಯೇ ಬದಲಾಯಿತು. ಅಲ್ಲದೇ ಅವರು ಇನ್ನೊಬ್ಬ ಗಾರ್ಡ್‌ನ್ನು ಕರೆದರು. ಐದು ಆರು ಜನ ಗಾರ್ಡ್‌ಗಳು ನನ್ನ ಸುತ್ತುವರೆದರು. ಬಳಿಕ ನನ್ನ ಐಡಿ ಕಾರ್ಡ್‌ನ್ನು ಅವರು ಕೇಳಿದರು. ಆಮೇಲೆ ಐಡಿ ಕಾರ್ಡ್ ತೋರಿಸಿದ ನಂತರ ಯಾಕೆ ಹೆಣ್ಣು ಮಕ್ಕಳಂತೆ ಬಟ್ಟೆ ಧರಿಸಿರುವೆ ಎಂದು ಕೇಳಿದರು. ಅದಕ್ಕೆ ಇದು ನನ್ನ ಆಯ್ಕೆ ನಾನು ನಾನು ಏನು ಬೇಕಾದರೂ ಧರಿಸುವೆ ಎಂದು ನಾನು ಉತ್ತರಿಸಿದೆ. ಆದರೆ ಕಾಲೇಜಿನಲ್ಲಿ (College) ಅದಕ್ಕೆ ಅವಕಾಶವಿಲ್ಲ, ನೀನು ಹುಡುಗ ಹಾಗಾಗಿ ಅದನ್ನು ಧರಿಸುವಂತಿಲ್ಲ ಎಂದು ಹೇಳಿದರು. 

ಜೀನ್ಸ್ ಪ್ಯಾಂಟ್ ಜೇಬಿನ ಸೈಜಲ್ಲೂ ತಾರತಮ್ಯ!

ಹುಡುಗಿಯರು ಮಾತ್ರ ಅದನ್ನು ಧರಿಸಬಹುದು ಮತ್ತು ನೀವು ಪುರುಷನಂತೆ ಬಟ್ಟೆ ಧರಿಸಬೇಕು ಎಂದು ಅವರು ಹೇಳಿದರು. ನಾನು ಆ ಶ್ರಗ್ ಅನ್ನು ಸಂಪೂರ್ಣವಾಗಿ ನನ್ನ ಭುಜದ ಮೇಲೆ ಧರಿಸಬಹುದೇ ಎಂದುಅವರನ್ನು ಕೇಳಿದೆ, ಆದರೆ ನನ್ನ ಆಫ್ ಶೋಲ್ಡರ್ ಶ್ರಗ್‌ನಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ, ನಾನು ಗಂಡಸೇ ಎಂಬ ವಿಷಯದಲ್ಲಿ ಅವರಿಗೆ ನಿರ್ದಿಷ್ಟವಾಗಿ ಸಮಸ್ಯೆ ಇತ್ತು. ಕೆಲವು ಹಾದು ಹೋಗುವ ವಿದ್ಯಾರ್ಥಿಗಳು ಇಡೀ ದೃಶ್ಯವನ್ನು ನೋಡುತ್ತಾ ನಿಂತರು ಮತ್ತು ನಾನು ನಿಜವಾಗಿಯೂ ಮುಜುಗರಕ್ಕೊಳಗಾದೆ. ಕಾವಲುಗಾರರು ನನ್ನನ್ನು ಕಾಲೇಜಿಗೆ ಪ್ರವೇಶಿಸಲು ಬಿಡಲಿಲ್ಲ. ನನ್ನ ಮೊದಲ ಉಪನ್ಯಾಸವು ಅವರಿಂದ ವ್ಯರ್ಥವಾಯಿತು. 

ಅಸಭ್ಯ ಧಿರಿಸು ಆರೋಪ: ಟ್ರೋಲ್ ಗೆ ಬೇಸತ್ತು ದೇಶ ಬಿಟ್ಟ ವರದಿಗಾರ್ತಿ!
ಹಾಗಾಗಿ ನನ್ನ ಸ್ನೇಹಿತನೊಬ್ಬನಿಗೆ ಕರೆ ಮಾಡಿ ಆ ಉಡುಪನ್ನು ಕವರ್ ಮಾಡಲು ಶರ್ಟ್ ಕೇಳಲು ನಿರ್ಧರಿಸಿದೆ. ನಾನು ನನ್ನ ಸ್ನೇಹಿತನಿಗಾಗಿ ಕಾಯುತ್ತಿರುವಾಗ, ಕಾವಲುಗಾರರು ಬಹಳ ದೂರದಿಂದ ನನ್ನತ್ತ ತೋರಿಸಿದರು ಮತ್ತು ಅವರು ನನ್ನ ಬಗ್ಗೆ ಮಾತನಾಡುತ್ತಿದ್ದರು. ನನಗೆ ಅಸಹ್ಯ ಅನಿಸಿತು. ನನ್ನ ಸ್ನೇಹಿತ ಅಂಗಿಯೊಂದಿಗೆ ಬಂದ ತಕ್ಷಣ, ನಾನು ಆ ಶ್ರಗ್‌ ತೆಗೆದು ಆ ಅಂಗಿಯನ್ನು ಧರಿಸಿದೆ, ಆದರೆ ನಾನು ಗುಂಡಿಯನ್ನು ಮುಚ್ಚಲಿಲ್ಲ. ಕಾವಲುಗಾರರು ಮತ್ತೆ ನನ್ನನ್ನು ತಡೆದರು ಮತ್ತು ನಾನು ಎಲ್ಲಾ ಗುಂಡಿಗಳನ್ನು ಮುಚ್ಚುವವರೆಗೂ ನನ್ನನ್ನು ಕಾಲೇಜು ಪ್ರವೇಶಿಸಲು ಬಿಡಲಿಲ್ಲ. ನಾನು ಹತಾಶೆ ಅನುಭವಿಸಿದೆ ಹೀಗೆ ಅವರು ತಮ್ಮ ನೋವನ್ನು ಬರೆದುಕೊಂಡಿದ್ದು, ಈ ಸಮಾಜ ನಮ್ಮನ್ನು ನಮ್ಮಿಷ್ಟದಂತೆ ಬದುಕಲು ಬಿಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!