Law And Order ಯೋಗಿ ನಾಡಲ್ಲಿ ಅನುಮತಿ ಇಲ್ಲದೆ ಧರ್ಮದ ಮೆರವಣಿಗೆ ಇಲ್ಲ, ಧ್ವನಿವರ್ಧಕಕ್ಕೂ ಹೊಸ ನಿಯಮ!

Published : Apr 19, 2022, 07:39 PM IST
Law And Order ಯೋಗಿ ನಾಡಲ್ಲಿ ಅನುಮತಿ ಇಲ್ಲದೆ ಧರ್ಮದ ಮೆರವಣಿಗೆ  ಇಲ್ಲ, ಧ್ವನಿವರ್ಧಕಕ್ಕೂ ಹೊಸ ನಿಯಮ!

ಸಾರಾಂಶ

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತಷ್ಟು ಕಠಿಣ ಕೋಮು ಸೌಹಾರ್ದ ಕದಡದಂತೆ ತಡೆಯಲು ಹೊಸ ನಿಯಮ ಜಾರಿ ಯಾವುದೇ ಧರ್ಮಗಳ ಮೆರವಣಿಗೆಗೆ ಪರವಾನಗಿ ಕಡ್ಡಾಯ

ಲಖನೌ(ಏ.19): ದೇಶದ ಬಹುತೇಕ ರಾಜ್ಯಗಳಲ್ಲಿ ಕೋಮು ಸೌಹಾರ್ದ ಕದಡುವ ಕೆಲ ಘಟನೆಗಳು ನಡಿದಿದೆ. ಪರಿಣಾಮ ಹಿಂಸಾಚಾರ, ಗಲಭೆಗಳು ಸೃಷ್ಟಿಯಾಗಿದೆ. ಪರಿಸ್ಥಿತಿ ಕೈಮೀರುತ್ತಿರುವ ಕಾರಣ ಇದೀಗ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೊಸ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ನೂತನ ನಿಯಮದ ಪ್ರಕಾರ ಉತ್ತರ ಪ್ರದೇಶದಲ್ಲಿ ಯಾವುದೇ ಧರ್ಮದ ಮೆರವಣಿಗೆಗೆ ಅನುಮತಿ ಕಡ್ಡಾಯ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಗಲಭೆ ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಮಹತ್ವದ ಸಭೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು, ಭದ್ರತಾ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹೊಸ ನಿಯಮ ಜಾರಿಗೆ ನಿರ್ಧರಿಸಲಾಗಿದೆ. ಯಾವುದೇ ಧರ್ಮದ ಆಚರಣೆಗಳ ಮೆರವಣಿಗೆಗೆ ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಕಡ್ಡಾಯ ಮಾಡಲಾಗಿದೆ. ಅನುಮತಿ ಇಲ್ಲದ ಯಾವುದೇ ಮೆರವಣಿಗೆಯನ್ನು ನಿರ್ಬಂಧಿಸಲು ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.

ಹಿಂದೂ ಹುಡುಗಿ ಪ್ರೀತಿಸಿ ಕಿಡ್ನಾಪ್ ಆರೋಪ, ಎರಡು ಮುಸ್ಲಿಮ್ ಮನೆಗೆ ಬೆಂಕಿ!

ಮುಂದಿನ ತಿಂಗಳು ಈದ್ ಹಬ್ಬ, ಅಕ್ಷಯ ತೃತೀಯ ಸೇರಿದಂತೆ ಹಲವು ಹಬ್ಬಗಳಿವೆ. ಹೀಗಾಗಿ ಮತ್ತೊಂದು ಧರ್ಮ ಸಂಘರ್ಷಕ್ಕೆ ಕಾರಣವಾಗಬಾರದು ಎಂದು ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಉತ್ತರ ಪ್ರದೇಶದ ಪ್ರತಿಯೊಬ್ಬ ನಾಗರೀಕರಿಗೆ ಅವರ ಧರ್ಮ ಆಚರಣೆಗೆ ಅವಕಾಶವಿದೆ. ಅದು ಅವರ ಹಕ್ಕು. ಆದರೆ ಆ ಆಚರಣೆಗಳು ಸಂಘರ್ಷಕ್ಕೆ ಕಾರಣವಾಗಬಾರದು ಅನ್ನೋದು ಮಾತ್ರ ಸರ್ಕಾರದ ಉದ್ದೇಶ ಎಂದು ಯೋಗಿ ಹೇಳಿದ್ದಾರೆ.

ಇನ್ನು ದ್ವನಿವರ್ಧಕಗಳು ಇತರರಿಗೆ ಕಿರಿಕಿರಿ, ಸಮಸ್ಯೆ ಉಂಟುಮಾಡುವಂತಿರಬಾರದು. ದ್ವನಿವರ್ಧಕ ಬಳಸುವ ಆವರಣದಿಂದ ಧ್ವನಿ ಹೊರಗೆ ಹೋಗಬಾರದು ಎಂದು ಯೋಗಿ ಹೇಳಿದ್ದಾರೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಹೊಸ ನಿಯಮ ಕಟ್ಟು ನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ.

ಮೆರವಣಿಗೆ ಆಯೋಜಿಸುವವರು ಅಫಿದವಿತ್ ಮೂಲಕ ಮೆರೆವಣಿಗೆ ಯಾವುದೇ ಭಾಗದಲ್ಲಿ ಹಿಂಸೆಗೆ ಪ್ರಚೋದನೆ, ಗಲಭೆ ಸೃಷ್ಟಿಸುವುದಿಲ್ಲ. ಶಾಂತಿ ಸೌಹಾರ್ದಯುತವಾಗಿ ಮೆರವಣಿಗೆ ಮಾಡುವುದಾಗಿ ಅಫಿದವಿತ್‌ನಲ್ಲಿ ಉಲ್ಲೇಖಿಸಬೇಕು. ಮೆರವಣಿಗೆ ಹಾದು ಹೋಗುವ ಮಾರ್ಗ, ಪಾಲ್ಗೊಳ್ಳುವ ಸರಿಸುಮಾರು ಸಂಖ್ಯೆ ಸೇರಿದಂತೆ ಎಲಲಾ ಮಾಹಿತಿಗಳನ್ನು ಉಲ್ಲೇಖಿಸಬೇಕು. ಈ ರೀತಿ ಅಫಿದವಿತ್ ಸಲ್ಲಿಸಿ ಪರವಾನಿಗೆ ಪಡೆದ ಮೆರವಣಿಗೆಗೆ ಮಾತ್ರ ಅವಕಾಶ ನೀಡಲಾಗುತ್ತದೆ. 

ಗೋರಖ್‌ಪುರ ದೇಗುಲದ ಮೇಲೆ ದಾಳಿ, ಶಾಕಿಂಗ್ ರಹಸ್ಯ ಬಾಯ್ಬಿಟ್ಟ ಅಹ್ಮದ್‌ ಮುರ್ತಜಾ!‌

ಧರ್ಮದ ಆಚರಣೆಗಳಿಗೆ ನಿರ್ದಿಷ್ಟ ಪ್ರದೇಶಗಳಿವೆ. ಆಚರಣೆ, ಪ್ರಾರ್ಥನೆಗಳನ್ನು ಆ ನಿರ್ದಿಷ್ಟ ಪ್ರದೇಶಗಳಲ್ಲೇ ಮಾಡಬೇಕು. ಏಕಾಏಕಿ ರಸ್ತೆಯಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಆಚರಣೆಗಳು ನಿಷಿದ್ದ. ಈ ರೀತಿಯ ಯಾವುದೇ ಆಚರಣೆ ಇದ್ದರೂ ಮೊದಲೇ ಅನುಮತಿ ಪಡೆಯಬೇಕು. 

ಕೋಮು ಗಲಭೆಕೋರರರ ಮನೆ ಧ್ವಂಸ ವಿರುದ್ಧ ಸುಪ್ರೀಂಗೆ ಜಮೈತ್‌ ಮೊರೆ
ಕ್ರಿಮಿನಲ್‌ ಪ್ರಕರಣಗಳಲ್ಲಿ, ಆರೋಪಿಗಳ ಮನೆಗಳನ್ನು ಹಠಾತ್‌ ಧ್ವಂಸ ಮಾಡದಂತೆ ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ ಕೆಲವು ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಜಮೈತ್‌ ಉಲಾಮಾ-ಎ-ಹಿಂದ್‌ ಮುಸ್ಲಿಂ ಸಂಘಟನೆಯು ಸುಪ್ರೀಂಕೋರ್ಚ್‌ ಮೆಟ್ಟಿಲೇರಿದೆ.

ಇತ್ತೀಚೆಗೆ ಮಧ್ಯಪ್ರದೇಶದ ರಾಮನವಮಿ ಸಂಭ್ರಮಾಚರಣೆ ಗಲಭೆ ಪ್ರಕರಣದ ಆರೋಪಿಗಳ ಮನೆಯನ್ನು ಬುಲ್ಡೋಜರ್‌ ಬಳಸಿ ನೆಲಸಮ ಮಾಡಲಾಗಿದೆ. ಗುಜರಾತ್‌, ಉತ್ತರಪ್ರದೇಶದಲ್ಲೂ ಇಂಥದ್ದೇ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಈ ವಿಷಯದ ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಮನವಿ ಮಾಡಿದೆ.

ಅಲ್ಲದೆ ಕ್ರಿಮಿನಲ್‌ ಪ್ರಕರಣಗಳಲ್ಲಿ ಆಪಾದಿತರ ಮನೆಯನ್ನು ಧ್ವಂಸಗೊಳಿಸುವ ಶಿಕ್ಷೆ ಕ್ರಿಮಿನಲ್‌ ಕಾನೂನಿನಲ್ಲಿ ಇಲ್ಲ. ಹಾಗಾಗಿ ಮನೆ ಅಥವಾ ಯಾವುದೇ ವಾಣಿಜ್ಯ ಆಸ್ತಿಯನ್ನು ಕೆಡುವವಂತಿಲ್ಲ ಎಂದು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ. ಹಾಗೆಯೇ ಕೋಮು ಗಲಭೆ ಮತ್ತಿತರ ಸನ್ನಿವೇಶಗಳನ್ನು ನಿರ್ವಹಿಸಲು ಪೊಲೀಸ್‌ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಬೇಕು ಎಂದು ಮನವಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!