Breaking: ಪದ್ಮಶ್ರೀ ಪುರಸ್ಕೃತ ಉಸ್ತಾದ್‌ ರಶೀದ್‌ ಖಾನ್‌ ನಿಧನ

Published : Jan 09, 2024, 04:49 PM ISTUpdated : Jan 09, 2024, 05:06 PM IST
Breaking: ಪದ್ಮಶ್ರೀ ಪುರಸ್ಕೃತ ಉಸ್ತಾದ್‌ ರಶೀದ್‌ ಖಾನ್‌ ನಿಧನ

ಸಾರಾಂಶ

ಪದ್ಮಶ್ರಿ ಪ್ರಶಸ್ತಿ ಹಾಗೂ 2006ರಲ್ಲಿ ಸಂಗೀತ್‌ ನಾಟಕ್‌ ಅಕಾಡೆಮಿ ಗೌರವ ಪಡೆದುಕೊಂಡಿದ್ದ ಉಸ್ತಾದ್‌ ರಶೀದ್‌ ಖಾನ್‌ ಮಂಗಳವಾರ ತಮ್ಮ 55ನೇ ವರ್ಷದಲ್ಲಿ ನಿಧನರಾದರು.  

ನವದೆಹಲಿ (ಜ.9): ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಅವರು 55 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಕೋಲ್ಕತ್ತಾದ ಪೀರ್ಲೆಸ್ ಆಸ್ಪತ್ರೆಯಲ್ಲಿ ಸಂಜೆ 6 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತದೆ. ಅವರ ಪಾರ್ಥಿವ ಶರೀರವನ್ನು ರಾತ್ರಿ ಕೋಲ್ಕತ್ತಾದ ಪೀಸ್ ಹೆವನ್‌ಗೆ ಕಳುಹಿಸಲಾಗುವುದು. ಅವರ ಅಂತ್ಯಕ್ರಿಯೆ ಜನವರಿ 10 ರಂದು ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.2022ರಲ್ಲಿ ಕೇಂದ್ರ ಸರ್ಕಾರ ಇವರಿಗೆ ದೇಶದ ಮೂರನೇ ಅತ್ಯುನ್ನತ ನಾಗರೀಕ ಪುರಸ್ಕಾರವಾದ ಪದ್ಮಭೂಷಣ ಪ್ರಶಸ್ತಿ ನೀಡಿಯೂ ಗೌರವಿಸಿತ್ತು. 1968ರ ಜುಲೈ 1 ರಂದು ಜನಿಸಿದ್ದ ಉಸ್ತಾದ್‌ ರಶೀದ್‌ ಖಾನ್‌, ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತ್ರೀಯ ಸಂಗೀತಗಾರರಾಗಿದ್ದರು.  ಅವರು ರಾಂಪುರ-ಸಹಸ್ವಾನ್ ಘರಾನಾಗೆ ಸೇರಿದವರು ಮತ್ತು ಘರಾನಾ ಸಂಸ್ಥಾಪಕ ಇನಾಯತ್ ಹುಸೇನ್ ಖಾನ್ ಅವರ ಮೊಮ್ಮಗ. ಭಾರತರತ್ನ ಪಂಡಿತ್‌ ಭೀಮ್‌ಸೇನ್‌ ಜೋಶಿ ಅವರೇ ಒಮ್ಮೆ, ರಶೀದ್‌ ಖಾನ್‌ ಅವರ ದನಿಯನ್ನು ಕೇಳಿ ಭಾರತೀಯ ಗಾಯನ ಸಂಗೀತದ ಭವಿಷ್ಯದ ಭರವಸೆ ಎಂದು ಹೊಗಳಿದ್ದರು. 

2007ರಲ್ಲಿ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಜಬ್‌ ವೀ ಮೆಟ್‌ ಚಿತ್ರದ ಮೂಲಕ ಶಾಹಿದ್‌ ಕಪೂರ್‌ ಹಾಗೂ ಕರೀನಾ ಕಪೂರ್‌ ಮಾತ್ರವಲ್ಲದೆ, ಉಸ್ತಾದ್‌ ರಶೀದ್‌ ಖಾನ್‌ ಕೂಡ ತಮ್ಮ ಹಾಡಿಗೆ ಸಾಕಷ್ಟು ಮನ್ನಣೆ ಪಡೆದಿದ್ದರು. ಈ ಚಿತ್ರದಲ್ಲಿ ಅವರು 'ಆವೋಗೆ ಜಬ್‌ ತುಮ್‌..' ಎನ್ನುವ ಹಾಡನ್ನು ಹಾಡಿದ್ದರು. ಕ್ಯಾನ್ಸರ್‌ ಕಾಯಿಲೆಯ ಕಾರಣದಿಂದಾಗಿ ಟಾಟಾ ಸ್ಮಾರಕ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಇವರು ಚಿಕಿತ್ಸೆಗೂ ಒಳಗಾಗಿದ್ದರು. ಅದಾದ ಬಳಿಕ ಅವರು ಕೋಲ್ಕತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ ತಿಂಗಳಷ್ಟೇ ಅವರನ್ನು ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೂ ಅವರು ಸ್ಪಂದಿಸುತ್ತಿದ್ದರು. ಅಲ್ಲದೆ, ಅವರ ಪರಿಸ್ಥಿತಿ ಚೇತರಿಕೆ ಕಾಣುತ್ತಿರುವುದಕ್ಕೆ ವೈದ್ಯರು ಕೂಡ ಸಂತಸ ವ್ಯಕ್ತಪಡಿಸಿದ್ದರು.

ಬಡತನಕ್ಕೆ ದೂಡಿದ ಅಪ್ಪನ ಸಾವು, ಹಿಂದೂ ಧರ್ಮ ತೊರೆದು ಮುಸ್ಲಿಂ ಆದ ಸ್ಟಾರ್‌ , ಈಗ 1748 ಕೋಟಿ ರೂ ಆಸ್ತಿ ಒಡೆಯ!

ಕಳೆದ ತಿಂಗಳು ಅವರು ಆಸ್ಪತ್ರೆಗೆ ದಾಖಲಾಗುವವರೆಗೂ ಪ್ರತಿದಿನ ಅವರು ಕ್ಲಾಸಿಕಲ್‌ ಮ್ಯೂಸಿಕ್‌ ಅಭ್ಯಾಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ರಶೀದ್‌ ಖಾನ್‌ ಸಾಕಷ್ಟು ಪ್ರಸಿದ್ಧ ಬಾಲಿವುಡ್‌ ಗೀತೆಗಳನ್ನು ಹಾಡಿದ್ದಾರೆ. ಮೈ ನೇಮ್‌ ಈಸ್‌ ಖಾನ್‌ ಚಿತ್ರದಲ್ಲಿ ಅಲ್ಲಾ ಹೀ ರಹೀಮ್‌, ಮೌಸಮ್‌ ಚಿತ್ರದಲ್ಲಿ ಪೂರೇ ಸೆ ಝರಾ ಸಾ, ಶಾದಿ ಮೇ ಝರೂರ್‌ ಆನಾ ಚಿತ್ರದಲ್ಲಿ ಅವರೇ ಮೂರು ಗೀತೆಗಳನ್ನು ಹಾಡಿದ್ದಲ್ಲದೆ, ನಟಿಸಿಯೂ ಇದ್ದರು. 2004ರಲ್ಲಿ ಬಿಡುಗಡೆಯಾಗಿದ್ದ ಕಿಸ್ನಾ: ದಿ ವಾರಿಯರ್‌ ಪೋಯೆಟ್‌ ಚಿತ್ರದಲ್ಲಿ ಅವರು ಹಾಡಿದ್ದ  ಕಹೇ ಉಜಾದಿ ಮೂರಿ ನೀಂದ್‌, ತೋರೆ ಬಿನಾ ಮೋಹೇ ಚಾಹೀನ್‌ ನಹೀ ಹಾಡುಗಳೊಂದಿಗೆ ಅವರು ತಮ್ಮ ಬಾಲಿವುಡ್‌ ಜರ್ನಿ ಆರಂಭಿಸಿದ್ದರು. ತಮ್ಮ 11ನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಚೇರಿ ನೀಡಿದ್ದ ರಶೀದ್‌ ಖಾನ್‌, ಮರು ವರ್ಷವೇ ದೆಹಲಿಯಲ್ಲಿಯೇ ತಮ್ಮ ಕಾರ್ಯಕ್ರಮ ನೀಡಿದ್ದರು. 

ಬಾಬಿ ಡಿಯೋಲ್ 'ಜಮಾಲ್ ಕುಡು' ಹಾಡಿನ ಅರ್ಥ ಇದೇ ನೋಡಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್