ರಾಹುಲ್ ಗಾಂಧಿಗಿಂತ ಮೋದಿ ಜನಪ್ರಿಯ ಹೇಳಿಕೆ, ಕಾರ್ತಿ ಚಿದಂಬರಂಗೆ ಕಾಂಗ್ರೆಸ್ ನೋಟಿಸ್!

By Suvarna NewsFirst Published Jan 9, 2024, 5:12 PM IST
Highlights

ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬಂರಂ ಪುತ್ರ ಕಾರ್ತಿ ಚಿದಂಬಂರಂಗೆ ಇದೀಗ ಸ್ವಪಕ್ಷದಿಂದಲೇ ನೋಟಿಸ್ ಜಾರಿಯಾಗಿದೆ. ಕಾರಣ ಇಷ್ಟೇ ರಾಹುಲ್ ಗಾಂಧಿಗಿತಂ ಪ್ರಧಾನಿ ಮೋದಿ ಜನಪ್ರಿಯ ಹಾಗೂ ಇವಿಎಂ ಮಶಿನ್ ಕುರಿತು ನೀಡಿದ ಹೇಳಿಕೆಯೇ ಇದೀಗ ಮುಳುವಾಗಿದೆ.

ಚೆನ್ನೈ(ಜ.09) ಕಾಂಗ್ರೆಸ್ ನಿಷ್ಠಾವಂತ, ಮಾಜಿ ಹಣಕಾಸು ಸಚಿವ ಪಿ ಚಿದಂಬಂರಂ ಪುತ್ರ ಕಾರ್ತಿ ಚಿದಂಬಂರಂ ಕೂಡ ಪಕ್ಷದ ಅತ್ಯಂತ ನಿಷ್ಠಾವಂತ ನಾಯಕ. ಆದರೆ ಇದೇ ಕಾರ್ತಿ ಚಿದಂಬಂರಂಗೆ ಇದೀಗ ಕಾಂಗ್ರೆಸ್ ಶೋಕಾಸ್ ನೋಟಿಸ್ ನೀಡಿದೆ. ಸ್ಥಳೀಯ ಮಾಧ್ಯಮದಲ್ಲಿನ ಸಂದರ್ಶನದಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ಗರಂ ಆಗಿದೆ. ಕಾರ್ತಿ ಚಿದಂರಂಬಂ ಸಂದರ್ಶನದ ವೇಳೆ ಎರಡು ಹೇಳಿಕೆ ನೀಡಿದ್ದಾರೆ. ಈ ಎರಡೂ ಹೇಳಿಕೆಯಿಂದ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಪ್ರಮುಖವಾಗಿ ಪ್ರಧಾನಿ ಮೋದಿ ರಾಹುಲ್ ಗಾಂಧಿಗಿಂತ ಜನಪ್ರಿಯ ಅನ್ನೋ ಹೇಳಿಕೆ, ಮತ್ತೊಂದು ಇವಿಎಂ ಮಶಿನ್ ಕುರಿತು ನೀಡಿದ ಹೇಳಿಕೆ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಾಂಗ್ರೆಸ್ ಶಿಸ್ತು ಸಮಿತಿ ಕಾರ್ತಿ ಚಿದಂಬಂರಂಗೆ ನೋಟಿಸ್ ನೀಡಿದೆ. ಕಾಂಗ್ರೆಸ್ ಶಿಸ್ತು ಸಮಿತಿ ಸದಸ್ಯ ಕೆಆರ್ ರಾಮಸ್ವಾಮಿ ಶೋಕಾಸ್ ನೋಟಿಸ್ ನೀಡಿದ್ದಾರೆ. 10 ದಿನದಲ್ಲಿ ಉತ್ತರಿಸುವಂತೆ ಕಾರ್ತಿ ಚಿದಂರಂಬಂಗೆ ಸೂಚಿಸಲಾಗಿದೆ.ಸದಾ ಪಕ್ಷಕ್ಕೆ ನಿಷ್ಠೆಯಾಗಿದ್ದ ಕಾರ್ತಿ ಚಿದಂರಂಬ ಹೇಳಿಕೆಯಿಂದ ತಮಿಳುನಾಡು ಕಾಂಗ್ರೆಸ್‌ನಲ್ಲಿ ಕೋಲಾಹಲ ಎದ್ದಿದೆ.

Latest Videos

ಟೀಮ್‌ ಇಂಡಿಯಾ ಪ್ಲೇಯರ್‌ಗಳ ಹೆಸರಲ್ಲೂ ಜಾತಿ ಕಂಡ ಚಿದಂಬರಂ ಪುತ್ರ, ಬಿಸಿಸಿಐಗೆ ಮಾಡಿದ್ರು ಈ ರಿಕ್ವೆಸ್ಟ್‌!

ಸಂದರ್ಶನದಲ್ಲಿ ಮಾತನಾಡುತ್ತಾ ಕಾರ್ತಿ ಚಿದಂಬಂರಂ, ರಾಹುಲ್ ಗಾಂಧಿ ಜನಪ್ರಿಯತೆಗಿಂತ ಮೋದಿ ಜನಪ್ರಿಯತೆ ಹೆಚ್ಚು ಎಂದಿದ್ದಾರೆ. ಇಷ್ಟೇ ಅಲ್ಲ ಮತದಾನ ವೇಳೆ ಬಳಸುವ ಇವಿಎಂ ಮಶಿನ್ ಬಗ್ಗೆ ನಂಬಿಕೆ ಇದೆ ಎಂದು ಹೇಳಿದ್ದಾರ. ಈ ಎರಡೂ ಹೇಳಿಕೆ ಕಾಂಗ್ರೆಸ್‌ಗೆ ವಿರುದ್ಧವಾಗಿದೆ.ಕಾರಣ ಇವಿಎಂ ಮಶಿನ್ ಸರಿ ಇಲ್ಲ. ಹ್ಯಾಕ್ ಮಾಡಲಾಗಿದೆ. ಬಿಜೆಪಿ ಪರವಾಗಿದೆ ಅನ್ನೋ ಆರೋಪಗಳನ್ನು ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಹಲವು ಬಾರಿ ದೂರು ನೀಡಿದೆ. ಪ್ರತಿ ಸೋಲಿನ ಬಳಿಕ ಕಾಂಗ್ರೆಸ್ ಇದೇ ಇವಿಎಂ ವಿಚಾರ ಮುಂದಿಟ್ಟು ಬಾರಿ ಕೋಲಾಹಲ ಸೃಷ್ಟಿಸುವ ಪ್ರಯತ್ನ ಮಾಡಿದೆ. ಆದರೆ ಇದೇ ಇವಿವಿನಿಂದ ಯಾವುದೇ ಸಮಸ್ಯ ಇಲ್ಲ ಎಂದು ವ್ಯತಿರಿಕ್ತ ಹೇಳಿಕೆ ನೀಡಿರುವ ಕಾರ್ತಿ ಚಿದಂಬಂರಂ ನಡೆ ಕಾಂಗ್ರೆಸ್ ಕೋಪಕ್ಕೆ ಕಾರಣವಾಗಿದೆ.

ಇತ್ತ ಪ್ರಧಾನಿ ಮೋದಿ ಪ್ರತಿಸ್ಪರ್ಧಿ ರಾಹುಲ್ ಗಾಂಧಿಯನ್ನು ಎಂದು ಕಾಂಗ್ರೆಸ್ ಬಿಂಬಿಸುತ್ತಾ ಬಂದಿದೆ. ರಾಹುಲ್ ಗಾಂಧಿ ಜನಪ್ರಿಯತೆಯನ್ನು ಹೆಚ್ಚಿಸಲು ಕಾಂಗ್ರೆಸ್ ಎಲ್ಲಾ ಪ್ರಯತ್ನ ಮಾಡಿದೆ. ಇದರ ನಡುವೆ ಕಾಂಗ್ರೆಸ್ ಪ್ರಮುಖ ನಾಯಕರೇ ರಾಹುಲ್ ಗಾಂಧಿಗಿಂತ ಮೋದಿ ಜನಪ್ರಿಯತೆ ಹೆಚ್ಚು ಎಂದು ಬಹಿರಂಗ ಹೇಳಿಕೆಯನ್ನು ಕಾಂಗ್ರೆಸ್ ಸುತಾರಂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಎರಡು ಕಾರಣಗಳಿಂದ ಕಾರ್ತಿ ಚಿದಂರಂಬಂ ಇದೀಗ ಕಾಂಗ್ರೆಸ್‌ನಲ್ಲಿ ಬಿಸಿ ತುಪ್ಪವಾಗಿದ್ದಾರೆ.

ನನ್ನ ಗೌಪ್ಯ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ ಕಾರ್ತಿ ಚಿದಂಬರಂ!
 

click me!