Yogini Stolen Statue : ಮೇಕೆ ಮುಖದ ಯೋಗಿನಿಯ ವಿಗ್ರಹ ಭಾರತಕ್ಕೆ ವಾಪಸ್!

Suvarna News   | Asianet News
Published : Jan 14, 2022, 11:45 PM ISTUpdated : Jan 15, 2022, 12:07 AM IST
Yogini Stolen Statue : ಮೇಕೆ ಮುಖದ ಯೋಗಿನಿಯ ವಿಗ್ರಹ ಭಾರತಕ್ಕೆ ವಾಪಸ್!

ಸಾರಾಂಶ

40 ವರ್ಷಗಳ ಹಿಂದೆ ಉತ್ತರ ಪ್ರದೇಶದಿಂದ ಕಳುವಾಗಿತ್ತು ಮೇಕೆಯ ತಲೆಯನ್ನು ಹೋಲುವ ಯೋಗಿನಿಯ ವಿಗ್ರಹ 10ನೇ ಶತಮಾನದ ಈ ವಿಗ್ರಹ ಯುಪಿಯ ಲೋಖಾರಿ ದೇವಾಲಯದಲ್ಲಿತ್ತು

ನವದೆಹಲಿ (ಜ. 14): ಅಂದಾಜು 40 ವರ್ಷಗಳ ಹಿಂದೆ ಉತ್ತರ ಪ್ರದೇಶದ (Uttar Pradesh) ಲೋಖಾರಿ (Lokhari) ದೇವಸ್ಥಾನದಿಂದ ಕಳುವಾಗಿದ್ದ 10ನೇ ಶತಮಾನದ ಮೇಕೆ ಮುಖದ ಯೋಗಿನಿಯ (Goat Headed Yogini Statue) ವಿಗ್ರಹ ಕೊನೆಗೂ ಭಾರತಕ್ಕೆ ಹಸ್ತಾಂತರವಾಗಿದೆ. ಒಮ್ಮೆ ಪ್ರಖ್ಯಾತ ಸೋಥೆಬಿ ಆಕ್ಷನ್ ಹೌಸ್ ನಲ್ಲಿ (Sotheby's auction house) ಇನ್ನೇನು ಮಾರಾಟವಾಗುವ ಹಂತದಲ್ಲಿದ್ದ ಅಪರೂಪದ ವಿಗ್ರಹವನ್ನು ಶುಕ್ರವಾರ ಲಂಡನ್ ನಲ್ಲಿರುವ ಭಾರತೀಯ ಹೈ ಕಮೀಷನ್‌ (), ಬ್ರಿಟನ್ ಹಸ್ತಾಂತರ ಮಾಡಿದೆ. ಭಾರತಕ್ಕೆ ವಿಗ್ರಹವನ್ನು ವಾಪಾಸ್ ತಂದ ಬಳಿಕ ನವದೆಹಲಿಯಲ್ಲಿರುವ ಭಾರತೀಯ ಪುರಾತತ್ವ ಇಲಾಖೆಯ (Archaeological Survey of India) ಕಚೇರಿಯಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

2021ರ ಅಕ್ಟೋಬರ್ ನಲ್ಲಿ ಈ ವಿಗ್ರಹದ ಕುರಿತಾಗಿ ಲಂಡನ್ ನಲ್ಲಿರುವ ಭಾರತೀಯ ಕೈ ಕಮೀಷನ್ ಗೆ ಮಾಹಿತಿ ದೊರಕಿತ್ತು. ಲಂಡನ್ ನ ಖಾಸಗಿ ವ್ಯಕ್ತಿಯ ಉದ್ಯಾನವನದಲ್ಲಿ ಈ ವಿಗ್ರಹ ಇರುವುದನ್ನು ಪತ್ತೆ ಹಚ್ಚಲಾಗಿತ್ತು. ಆ ಬಳಿಕ ಈ ವಿಗ್ರಹದ ಕುರಿತಾದ ಸಂಪೂರ್ಣ ದಾಖಲೆಗಳು ಹಾಗೂ ಅದರ ವಿವರಗಳನ್ನು ಬ್ರಿಟನ್ ಗೆ ಹಸ್ತಾಂತರ ಮಾಡಿದ ಬಳಿಕ ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಇದನ್ನು ಭಾರತಕ್ಕೆ ಹಸ್ತಾಂತರ ಮಾಡಲು ಒಪ್ಪಿಕೊಂಡಿತ್ತು.

1980ರ ಆರಂಭದಲ್ಲಿ ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಲೋಖಾರಿ ಗ್ರಾಮದ ದೇವಸ್ಥಾನದಿಂದ ಈ ವಿಗ್ರಹವನ್ನು ಕದ್ದು ಅಕ್ರಮವಾಗಿ ಬ್ರಿಟನ್ ಗೆ ಸಾಗಾಟ ಮಾಡಲಾಗಿತ್ತು. ಈ ಪುರಾತನ ಹಾಗೂ ಅಪರೂಪದ ವಿಗ್ರಹವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಡಿಸೆಂಬರ್ ಆರಂಭದಲ್ಲಿಯೇ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದವು ಎಂದು ಭಾರತೀಯ ಹೈಕಮೀಷನ್ ದೃಢಪಡಿಸಿದೆ.
 


ಪತ್ತೆಯಾಗಿದ್ದು ಹೇಗೆ: ವಿಶ್ವದಾದ್ಯಂತ ಕದ್ದ, ಲೂಟಿ ಅಥವಾ ಕಾಣೆಯಾದ ಕಲಾಕೃತಿಗಳನ್ನು ಮರಳಿ ಆಯಾ ದೇಶಕ್ಕೆ ಅಥವಾ ವ್ಯಕ್ತಿಗೆ ಒಪ್ಪಿಸುವ ಕಾರ್ಯ ನಡೆಸುವ  ಆರ್ಟ್ ರಿಕವರಿ ಇಂಟರ್ ನ್ಯಾಷನಲ್ ಸಂಸ್ಥೆಯ ಸಂಸ್ಥಾಪಕ ಹಾಗೂ ವಕೀಲರೂ ಆಗಿರುವ ಕ್ರಿಸ್ಟೋಫರ್ ಮರಿನೆಲ್ಲೋ (Christopher Marinello,  lawyer and founder of Art Recovery International) ಅವರಿಗೆ 2021ರ ಅಕ್ಟೋಬರ್ ನಲ್ಲಿ ವಿಧವೆಯೊಬ್ಬರು ಕರೆಮಾಡಿದ್ದರು. ಯೋಗಿನಿಯ ವಿಗ್ರಹವನ್ನೂ ಒಳಗೊಂಡಂತೆ ತಮ್ಮ ಮನೆಯಲ್ಲಿರುವ ಇತರ ವಸ್ತುಗಳನ್ನು ಮಾರಾಟ ಮಾಡಲು ಸಹಾಯ ಕೇಳಿದ್ದರು. ಆಗ ಈ ಅಪರೂಪದ ಪ್ರತಿಮೆಯು ಮರಿನೆಲ್ಲೋ ಅವರ ಗಮನಸೆಳೆದಿದೆ.

ನಾನು ಈ ವಿಗ್ರಹವನ್ನು ನೋಡಿದ ಬೆನ್ನಲ್ಲಿಯೇ ಇದು ಕದ್ದ ವಿಗ್ರಹ ಎಂದು ಹೇಳಿದ್ದೆ. ಆದರೆ, ಆಕೆಗೆ ಇದರ ಯಾವ ಮಾಹಿತಿಯೂ ಇದ್ದಿರಲಿಲ್ಲ. ಈ ಕುರಿತಾಗಿ ಅವರಿಗೆ ಎಲ್ಲಾ ಮಾಹಿತಿಯನ್ನು ನೀಡಿದಾಗ ಅದನ್ನು ಒಪ್ಪಿಕೊಂಡರು ಎಂದು ಮರಿನೆಲ್ಲೋ ಹೇಳತ್ತಾರೆ. ಆ ಬಳಿಕ ಮರಿನೆಲ್ಲೋ ಭಾರತದಿಂದ ಅಕ್ರಮವಾಗಿ ಸಾಗಣೆಯಾಗಿರುವ ಸಾಂಸ್ಕೃತಿಕ ವಸ್ತುಗಳನ್ನು ಮರುಪಡೆಯಲು ಮೀಸಲಾಗಿರುವ ಲಾಭ ಉದ್ದೇಶವಿಲ್ಲದ ಸಂಸ್ಥೆ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ ನ (India Pride Project) ಸಹ ಸಂಸ್ಥಾಪಕ ವಿಜಯ್ ಕುಮಾರ್ (Vijay Kumar) ಅವರನ್ನು ಸಂಪರ್ಕಿಸಿದ್ದರು.

1915ರಲ್ಲಿ ಕಳವಾದ ವಿಗ್ರಹ ಗೋಡೆಯಲ್ಲಿ ಪತ್ತೆ!
ಇದರ ಕೂಲಂಕಷ ಪರಿಶೀಲನೆ ಮಾಡಿದ ವಿಜಯ್ ಕುಮಾರ್, 1978 ರಿಂದ 1980ರ ಅವಧಿಯಲ್ಲಿ ಉತ್ತರ ಪ್ರದೇಶದ ಲೋಖಾರಿ ಗ್ರಾಮದ ದೇವಸ್ಥಾನದಿಂದ 8 ರಿಂದ 10ನೇ ಶತಮಾನದ ಕಾಲದ ಸಾಕಷ್ಟು ಪ್ರತಿಮೆಗಳು ಕಳ್ಳತನವಾಗಿದ್ದವು. ಇದರಲ್ಲಿ ಮೇಕೆ ತಲೆಯ ಯೋಗಿನಿಯ ಪ್ರತಿಮೆಯೂ ಕೂಡ ಒಂದು ಎಂದಿದ್ದರು. 1988ರಲ್ಲಿ ಈ ಪ್ರತಿಮೆಯು ಪ್ರತಿಷ್ಠಿತ ಸೋಥಬೆ ಆಕ್ಷನ್ ಹೌಸ್ ನ ಕ್ಯಾಟ್ ಲಾಗ್ ನಲ್ಲಿತ್ತು ಎಂದಿರುವ ವಿಜಯ್ ಕುಮಾರ್, ಅದರ ಅಂದಿನ ಮೂಲಬೆಲೆ ಅಂದಾಜು 16 ಲಕ್ಷ ರೂಪಾಯಿ ಆಗಿತ್ತು ಎಂದು ಹೇಳಿದ್ದಾರೆ. ಬಹುಶಃ ಸೋಥೆಬೆ ಆಕ್ಷನ್ ಹೌಸ್ ಗೂ ಇದು ಕದ್ದಿರುವು ವಿಗ್ರಹ ಎಂದು ಗೊತ್ತಾಗಿ ಕೊನೇ ಕ್ಷಣದಲ್ಲಿ ಇದನ್ನು ಹರಾಜಿನಿಂದ ವಾಪಸ್ ತೆಗೆದುಕೊಂಡಿದ್ದರು. ಆದರೆ, ಅದರ ಕುರಿತಾಗಿ ಸೂಕ್ತ ತನಿಖೆಯನ್ನು ಸಂಸ್ಥೆ ಕೈಗೊಂಡಿರಲಿಲ್ಲ ಎಂದು ಹೇಳಿದ್ದಾರೆ. 

ಆ ಬಳಿಕ ಲಂಡನ್ ನಲ್ಲಿರುವ ಭಾರತೀಯ ಹೈ ಕಮೀಷನರ್ ಕಚೇರಿಗೆ ವಿಜಯ್ ಕುಮಾರ್ ಹಾಗೂ ಮರಿನೆಲ್ಲೋ ಅವರು ತೆರಳಿ ಈ ಮಾಹಿತಿ ನೀಡಿದ್ದರು. ಬಳಿಕ ಸರ್ಕಾರದ ಮಟ್ಟದಲ್ಲಿ ಮಾತುಕತೆಗಳು ನಡೆದು ಈಗ ಈ ಮೂರ್ತಿ ಭಾರತಕ್ಕೆ ವಾಪಸಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ