ಕೋಜಿಕೋಡ್(ಜ.14): ಸಮುದ್ರದಲ್ಲಿ ಕೊಚ್ಚಿ ಹೋಗಿ ದಡ ಸೇರಲಾರದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಎಮ್ಮೆಯೊಂದನ್ನು ಮೀನುಗಾರರ ಗುಂಪು ರಕ್ಷಣೆ ಮಾಡಿದ್ದು, ಈ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಕೋಜಿಕೋಡ್ ಸಮೀಪದ ಸಮುದ್ರದಲ್ಲಿ ಈ ಘಟನೆ ನಡೆದಿದೆ.
ದಡದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಎಮ್ಮೆಯೊಂದು ಸಿಲಕಿರುವುದನ್ನು ಮೀನುಗಾರರು ಗಮನಿಸಿದ್ದಾರೆ. ಕೂಡಲೇ ಈ ಎಮ್ಮೆ ಮುಳುಗುವ ಸಾಧ್ಯತೆ ಇದೆ ಎಂದು ಗ್ರಹಿಸಿದ ಮೀನುಗಾರರು ಅದನ್ನು ರಕ್ಷಿಸಲು ಕಾರ್ಯಾಚರಣೆ ಶುರು ಮಾಡಿದರು.. ತಕ್ಷಣ ಮತ್ತೊಂದು ಬೋಟ್ ವ್ಯವಸ್ಥೆ ಮಾಡಿ ರಕ್ಷಣಾ ಕಾರ್ಯ ಆರಂಭಿಸಿದರು. ಎಮ್ಮೆಯ ಮುಳುಗದಂತೆ ಅದರ ದೇಹಕ್ಕೆ ಪ್ಲಾಸ್ಟಿಕ್ ಖಾಲಿ ಡ್ರಮ್‌ಗಳನ್ನು ಕಟ್ಟಿದ್ದರು.
ಅಸಹಾಯಕ ಸ್ಥಿತಿಯಲ್ಲಿದ್ದ ಎಮ್ಮೆಯನ್ನು ಮೀನುಗಾರರು ದಡಕ್ಕೆ ಎಳೆದು ತರುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಎಮ್ಮೆ ರಕ್ಷಣೆ ಕಾರ್ಯಾಚರಣೆ ಎರಡು ಗಂಟೆ ಸಮಯವನ್ನು ಮೀನುಗಾರರು ವ್ಯಯಿಸಿದರು. ಆದರೆ ಈ ಎಮ್ಮೆ ಅದ್ಹೇಗೆ ಸಮುದ್ರಕ್ಕೆ ಹೋಯಿತು ಎಂಬ ಬಗ್ಗೆ ಮಾಹಿತಿ ಇಲ್ಲ.
ಮಾಲೀಕನ ರಕ್ಷಣೆಗೆ ಧಾವಿಸಿದ ನಾಯಿ
ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇಂಗ್ಲೆಂಡ್‌ನ ನ್ಯೂ ಹಂಪ್‌ಶೈರ್‌ನಲ್ಲಿ ನಾಯಿಯೊಂದು ತನ್ನ ಮಾಲೀಕ ಅಪಾಯದಲ್ಲಿರುವುದನ್ನು ತಿಳಿದು ಆ ಸ್ಥಳಕ್ಕೆ ಧಾವಿಸಿ ಆತನ ಜೀವ ಉಳಿಸಿದೆ. ಟಿನ್ಸ್‌ಲಿ (Tinsley) ಹೆಸರಿನ ಜರ್ಮನ್ ಶೆಫರ್ಡ್ ನಾಯಿ ಹೀಗೆ ಮಾಲೀಕನ ರಕ್ಷಣೆಗೆ ಧಾವಿಸಿ ಬಂದ ಶ್ವಾನ. ಈತನ ಮಾಲೀಕ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಪಲ್ಟಿ ಹೊಡೆದಿದೆ. ಪರಿಣಾಮ ಮಾಲೀಕ ಅಪಾಯಕ್ಕೊಳಗಾಗಿದ್ದಾರೆ. ಕಾರು ಹಾಗೂ ಟ್ರಕ್‌ನಲ್ಲಿದ್ದವರಿಗೂ ಈ ಅಪಘಾತದಲ್ಲಿ ಗಾಯಗಳಾಗಿತ್ತು. ಆದರೆ ಶ್ವಾನ ಟಿನ್ಸ್‌ಲಿ ನೆರವಿನಿಂದ ಅವರು ಶೀಘ್ರದಲ್ಲೇ ವೈದ್ಯಕೀಯ ಸಹಾಯ ಪಡೆಯುವಂತಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Viral Video : ಆಮೆ ಪ್ರಾಣ ಕಾಪಾಡಿದ ಎಮ್ಮೆ..ಮನುಷ್ಯರಿಗಿಂತ ಪ್ರಾಣಿಗಳೇ ಮೇಲು!
ನಾಯಿಯ ವರ್ತನೆಯಿಂದ ಅದು ನಮಗೇನೋ ಹೇಳಲು, ತೋರಿಸಲು ಬಯಸುತ್ತಿತ್ತು ಎಂದು ನಮಗನಿಸುತ್ತಿತ್ತು ಎಂದು ನ್ಯೂ ಹಂಪ್‌ಶೈರ್‌ನ ರಾಜ್ಯ ಪೊಲೀಸ್ ಆದ ಲೆಫ್ಟಿನೆಂಟ್ ಡೇನಿಯಲ್ ಬಾಲ್ಡಸ್ಸರ್ (Daniel Baldassarre) ಹೇಳಿದರು. ಅದು ನನ್ನನ್ನು ಹಿಂಬಾಲಿಸಿ ನನ್ನನ್ನು ಹಿಂಬಾಲಿಸಿ ಅನ್ನುವಂತಿತ್ತು. ಹಾಗಾಗಿ ನಾವು ಅದರ ಹಿಂದೆಯೇ ಹೋದೆವು. ಅದು ನಮ್ಮನ್ನು ಕರೆದುಕೊಂಡು ಹೋದ ಸ್ಥಳವನ್ನು ತಲುಪಿದಾಗ ನಮಗೆ ಅಚ್ಚರಿಯಾಗಿತ್ತು. ಅಲ್ಲಿ ರಸ್ತೆ ಬದಿ ಹಾಕಿದ ಗಾರ್ಡ್‌ರೈಲ್ ಹಾನಿಗೊಳಗಾಗಿತ್ತು. ಹಾಗೂ ಅಲ್ಲಿ ಕೆಳಗೆ ನಾಯಿ ನೋಡಲು ಶುರು ಮಾಡಿತ್ತು. ನಂತರ ನಾವು ಅಲ್ಲಿ ನೋಡಿದಾಗ ಅಪಘಾತವಾಗಿರುವುದು ಕಂಡು ಬಂತು ಎಂದು ಡೇನಿಯಲ್ ಬಾಲ್ಡಸ್ಸರ್ ಹೇಳಿದರು. ನಂತರ ಅಲ್ಲಿಗೆ ಸಮೀಪದ ಪೊಲೀಸರು ಹಾಗೂ ಹಂಪ್‌ಶೈರ್ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯ ನಡೆಸಿದರು ಎಂದು ತಿಳಿದು ಬಂದಿದೆ.
Buffalo Milk: ಎಮ್ಮೆಗೂ ಪೊಲೀಸರ ಭಯ, ಹಾಲು ಕೊಡುತ್ತಿಲ್ಲ ಎಂದು ರೈತನ ದೂರು, ಮರು ದಿನವೇ ಲೀಟರ್‌ಗಟ್ಟಲೆ ಹಾಲು!
ಇತ್ತೀಚೆಗೆ ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯ ಲೋರ್ಮಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿತ್ತು. ಇಲ್ಲಿ ನವಜಾತ ಹೆಣ್ಣು ಶಿಶುವನ್ನು ಜನ್ಮ ಕೊಟ್ಟ ತಾಯಿಯೇ ಬೀದಿಗೆಸೆದಿದ್ದಳು. ಆದರೆ ಕಂದನ ಕಂಡ ನಾಯಿಗಳು ಸುತ್ತಲೂ ನಿಂತು ರಕ್ಷಣೆ ನೀಡಿದ್ದವು. ಕೆಲ ಸಮಯದ ಬಳಿಕ ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ನಡುವೆ ಇದ್ದರೂ ಈ ಮುಗ್ಧ ನವಜಾತ ಶಿಶು ಸಂಪೂರ್ಣವಾಗಿ ಆರೋಗ್ಯಕರ ಮತ್ತು ಸುರಕ್ಷಿತವಾಗಿತ್ತು.