
ಅಂತರ್ಜಾಲದಲ್ಲಿ (Internet) ಹಲವಾರು ವಿಡಿಯೋಗಳು (Video) ವಿವಿಧ ಕಾರಣಗಳಿಗಾಗಿ ನೆಟ್ಟಿಗರ (Netizens) ಗಮನ ಸೆಳೆಯುತ್ತವೆ. ಇದು ಪ್ರಾಣಿಗಳ ವಿಡಿಯೋ ಆಗಿರಲಿ ಅಥವಾ ಯಾರಾದರೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿರಲಿ, ಅನೇಕ ವಿಷಯಗಳು ನಮ್ಮನ್ನು ನಗಿಸುತ್ತದೆ. ಇಂತಹ ವೈರಲ್ ವಿಡಿಯೋಗಳ ಪಟ್ಟಿಗೆ ಇತ್ತೀಚೆಗೆ ಪೈಲಟ್ (Pilot) ಒಬ್ಬರು ತಮ್ಮ ಪ್ರಯಾಣಿಕರಿಗೆ ಕಾವ್ಯಾತ್ಮಕ ಘೋಷಣೆ ಮಾಡುತ್ತಿರುವುದು ಕಂಡುಬಂದಿದೆ. ಫ್ಲೈಟ್ ಪ್ರಕಟಣೆಗಳು, ಮುಖ್ಯವಾದರೂ, ಅವುಗಳು ಸಾಮಾನ್ಯವಾಗಿ ಏಕತಾನತೆಯಿಂದ ಕೂಡಿರುತ್ತವೆ. ಆದರೆ, ಇತ್ತೀಚಿಗೆ ದೆಹಲಿಯಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ (Flight), ಪೈಲಟ್ ಒಬ್ಬರು ಹಿಂದಿ ಕವಿತೆಯ ರೂಪದಲ್ಲಿ ಅದನ್ನು ಹೇಳುವ ಮೂಲಕ ಸ್ವಲ್ಪ ಮಸಾಲೆ ಸೇರಿಸಲು ಪ್ರಯತ್ನಿಸಿದ್ದಾರೆ.
ಸ್ಪೈಸ್ ಜೆಟ್ ಪೈಲಟ್ ಮೋಹಿತ್ ಕುಮಾರ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುವುದನ್ನು ನೀವು ನೋಡಬಹುದು. ಅವರು ಹಿಂದಿಯಲ್ಲಿ ಹೇಳುತ್ತಿರುವ ಕವಿತೆಯಲ್ಲಿ, ಅವರು ಎಲ್ಲರಿಗೂ ಆತ್ಮೀಯ ಸ್ವಾಗತವನ್ನು ನೀಡುತ್ತಾರೆ. ಬಳಿಕ, ಅವರು ತಮ್ಮ ಸಹ-ಪೈಲಟ್ ಮತ್ತು ಕ್ಯಾಬಿನ್ ಸಿಬ್ಬಂದಿಯ ಬಗ್ಗೆ ತಿಳಿಸಿದ್ದು, ಎಲ್ಲ ಪ್ರಯಾಣಿಕರೂ ಈಗ ಅವರ ಆರೈಕೆಯಲ್ಲಿರುತ್ತಾರೆ ಎಂದೂ ಹೇಳಿದರು. ಇನ್ನು, ಪೈಲಟ್‌ಗೆ ಜನರು ಚಪ್ಪಾಳೆ ತಟ್ಟುವುದನ್ನು ಸಹ ಈ ವಿಡಿಯೋದಲ್ಲಿ ನೋಡಬಹುದು.
ಇದನ್ನು ಓದಿ: ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಕರ ನಡುವೆ ಮಾರಾಮಾರಿ: ವಿಡಿಯೋ ವೈರಲ್
ಈ ವೈರಲ್ ವಿಡಿಯೋವನ್ನು ಇಲ್ಲಿ ನೋಡೋಣ:
ಈ ವಿಡಿಯೋವನ್ನು 3 ದಿನಗಳ ಹಿಂದೆ ಶೇರ್ ಮಾಡಲಾಗಿತ್ತು. ಅಪ್‌ಲೋಡ್ ಮಾಡಿದ ನಂತರ, ಇದನ್ನು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ಮತ್ತು 14 ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದ್ದೆ. ಅಲ್ಲದೆ, ಹಲವು ನೆಟ್ಟಿಗರು ಅವರ ಕವಿತೆಯನ್ನು ಮೆಚ್ಚಿಕೊಂಡಿದ್ದಾರೆ.
ಕೆಳಗಿನ ಕೆಲವು ಪ್ರತಿಕ್ರಿಯೆಗಳನ್ನು ನೋಡೋಣ:
ಇದನ್ನೂ ಓದಿ: ವಿಮಾನಗಳು ಏಕೆ ಬಿಳಿ ಬಣ್ಣದಲ್ಲಿರುತ್ತೆ?
ಇನ್‌ಸ್ಟಾಗ್ರಾಮ್ ಕಾಮೆಂಟ್‌ಗಳಲ್ಲಿ ಒಬ್ಬರು, “ನೀವು ಬಾಲಿವುಡ್‌ನಲ್ಲಿ ಕಲಾವಿದರಾಗಿ ಇನ್ನೂ ಉತ್ತಮವಾಗಿ ನಟಿಸಬಲ್ಲಿರಿ. ಸುಂದರವಾದ ಕಾವ್ಯಾತ್ಮಕ ಅಂದಾಜು” ಎಂದು ಬರೆದಿದ್ದಾರೆ. ಹಾಗೆ, ಎರಡನೆಯ ವ್ಯಕ್ತಿ, "ಹಹ್ಹಹ್ಹಾ ಅದು ಕ್ಯೂಟ್ ಆಗಿತ್ತು" ಎಂದು ಹೇಳಿದ್ದಾರೆ. ಅಲ್ಲದೆ, ಮತ್ತೊಬ್ಬರು “ಸೌಂದರ್ಯದೊಂದಿಗೆ ಮೆದುಳಿನ ಪರಿಪೂರ್ಣ ಉದಾಹರಣೆ’’ ಎಂದೂ ಬರೆದಿದ್ದಾರೆ.
ಇನ್ನೊಂದೆಡೆ, ಈ ವಿಡಿಯೋವನ್ನು ಡಿಸೆಂಬರ್ 16 ರಂದು ಟ್ವಿಟ್ಟರ್ ಬಳಕೆದಾರರಾದ ಈಪ್ಸಿತಾ (@Eepsita) ಡಿಸೆಂಬರ್ 16 ರಂದು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದರು. “ದೆಹಲಿಯಿಂದ ಶ್ರೀನಗರಕ್ಕೆ @flyspicejet ವಿಮಾನದಲ್ಲಿ ಹಾಗೂ ಓ ಮೈ ಗಾಡ್, captain killed it. ಅವರು ಇಂಗ್ಲಿಷ್‌ನಲ್ಲಿ ಪ್ರಾರಂಭಿಸಿದರು, ಆದರೆ ನಾನು ನಂತರ ರೆಕಾರ್ಡಿಂಗ್ ಪ್ರಾರಂಭಿಸಿದೆ. ಇದು ಹೊಸ ಮಾರ್ಕೆಟಿಂಗ್ ಟ್ರ್ಯಾಕ್ ಆಗಿದೆಯೋ ಅಥವಾ ಅದು ಸ್ವತಃ ಕ್ಯಾಪ್ಟನ್ ಅವರು ಈ ರೀತಿ ಮಾಡಿದ್ದಾರೋ ನನಗೆ ಗೊತ್ತಿಲ್ಲ, ಆದರೆ ಇದು ತುಂಬಾ ಮನರಂಜನೆ ಮತ್ತು ಪ್ರಿಯವಾಗಿತ್ತು!" ಎಂದು ಅವರು ಬರೆದುಕೊಂಡಿದ್ದರು.
ಇದನ್ನೂ ಓದಿ: : Indigo Airlines ಪ್ರಯಾಣಿಕರು -ಗಗನಸಖಿ ನಡುವೆ ವಾಗ್ವಾದ: ವಿಡಿಯೋ ವೈರಲ್
ಆಕೆಯ ಟ್ವೀಟ್ ಅನ್ನು ಈವರೆಗೆ 3 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇನ್ನು, ಪೈಲಟ್ ಅವರ ಸೃಜನಶೀಲ ವಿಧಾನಕ್ಕಾಗಿ ಶ್ಲಾಘಿಸಿದ ಟ್ವಿಟ್ಟರ್ ಬಳಕೆದಾರರೊಬ್ಬರು "ಅವರು ಹಾಸ್ಯ ನಟನಾಗಲು ಬಯಸಿದ್ದರು, ಆದರೆ ಪೈಲಟ್ ಆಗಿ ಕೊನೆಗೊಂಡರು." ಎಂದು ಹಾಸ್ಯಮಯವಾಗಿ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ