ಮಹಾರಾಷ್ಟ್ರ ಜಿಂದಾಲ್‌ ಕಂಪನಿಯಲ್ಲಿ ಬಾಯ್ಲರ್‌ ಸ್ಫೋಟ, 3 ಸಾವು , 17 ಮಂದಿಗೆ ಗಾಯ

By Gowthami K  |  First Published Jan 1, 2023, 8:17 PM IST

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್‌ಪುರಿಯಲ್ಲಿರುವ ಕಾರ್ಖಾನೆಯಲ್ಲಿ ಭಾನುವಾರ ಬಹುದೊಡ್ಡ ಅಗ್ನಿ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಈವರೆಗೆ  ಮೂವರು  ಸಾವನ್ನಪ್ಪಿ , 17 ಮಂದಿ ಗಾಯಗೊಂಡಿದ್ದಾರೆ. 


ಮುಂಬಯಿ (ಜ.1): ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್‌ಪುರಿಯಲ್ಲಿರುವ ಕಾರ್ಖಾನೆಯಲ್ಲಿ ಭಾನುವಾರ ಬಹುದೊಡ್ಡ ಅಗ್ನಿ ದುರಂತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಈವರೆಗೆ ಮೂವರು ಸಾವನ್ನಪ್ಪಿ , 17 ಮಂದಿ ಗಾಯಗೊಂಡಿದ್ದಾರೆ.  ನಾಸಿಕ್‌ನ ಇಗತ್‌ಪುರಿ ತಾಲೂಕಿನ ಮುಂಢೆಗಾಂವ್‌ ಬಳಿಯ ಜಿಂದಾಲ್‌ ಕಂಪನಿಯ  ಬಾಯ್ಲರ್‌ನಲ್ಲಿ ಭಾರಿ ಸ್ಫೋಟ ಸಂಭವಿಸಿದ ನಂತರ ಬೆಂಕಿ ಕಾಣಿಸಿಕೊಂಡು ಈ ದುರಂತ ನಡೆದಿದೆ. ಬೆಳಗ್ಗೆ 11.30ರ ಸುಮಾರಿಗೆ ಕೆಲವು ಕಾರ್ಮಿಕರು ಆವರಣದಲ್ಲಿದ್ದಾಗ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.

ಸ್ಫೋಟವು ಎಷ್ಟು ಪ್ರಭಾವಿತವಾಗಿತ್ತೆಂದರೆ ಸ್ಥಳೀಯ 20 ರಿಂದ 25 ಹಳ್ಳಿಗಳಲ್ಲಿ ಬಾಯ್ಲರ್‌ ಸ್ಫೋಟದ ಅನುಭವಾಗಿದೆ. ಅಗ್ನಿಶಾಮಕ ದಳಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.  ಸಾಮಾನ್ಯವಾಗಿ 20ರಿಂದ 25 ಮಂದಿ ಸ್ಥಾವರದಲ್ಲಿ ಕೆಲಸ ಮಾಡುತ್ತಾರೆ. ಆದರೆ, ಹೊಸ ವರ್ಷದ ಮೊದಲ ದಿನವಾದ್ದರಿಂದ ಭಾನುವಾರ ಈ ಸಂಖ್ಯೆ ಕಡಿಮೆಯಾಗಿತ್ತು. ಇದು ಸ್ವಯಂಚಾಲಿತ ಸ್ಥಾವರವಾದ್ದರಿಂದ, ಸ್ಫೋಟದ ಸಮಯದಲ್ಲಿ ಹೆಚ್ಚಿನ ಸಿಬ್ಬಂದಿ ಇರಲಿಲ್ಲ. 

Tap to resize

Latest Videos

Chikkamagaluru News: ಹೊಸಕೆರೆ ಸರ್ಕಾರಿ ಶಾಲೆಯಲ್ಲಿ ಸಿಲಿಂಡರ್‌ ಸ್ಫೋಟ, ಗೋಡೆ ಕುಸಿತ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ನಾಸಿಕ್ ರಾಸಾಯನಿಕ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿರುವ ಸುಯಾಶ್ ಆಸ್ಪತ್ರೆಗೆ  ಭೇಟಿ ಮಾಡಿದ್ದು, ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಘಟನೆ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಸಿಎಂ ಶಿಂಧೆ ಹೇಳಿದ್ದಾರೆ. ಬೆಂಕಿ ಅನಾಹುತಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.

China Weapons: 'ಪಾಕ್' ಉಗ್ರರ ನಿಗೂಢ ಸಂಚು: ಕಾಶ್ಮೀರದ ಗುಹೆಯಲ್ಲಿ 'ಚೀನಾ' ಆಯುಧಗಳು

click me!