
ನವದೆಹಲಿ(ಮೇ.21): ಕೊರೋನಾ ವೈರಸ್ ವಿರುದ್ಧದ ಹೋರಾಟ ಗೆಲ್ಲಲು ಭಾರತ ಸರ್ಕಾರ ಎಲ್ಲಾ ದಾರಿಗಳನ್ನು ಬಳಸಿಕೊಳ್ಳುತ್ತಿದೆ. ಸದ್ಯ ಕೊರೋನಾ ಲಸಿಕೆ ಅಭಾವದಿಂದ ಮೊದಲ ಡೋಸ್ ಪಡೆದವರಿಗೆ 2ನೇ ಡೋಸ್ ಸಿಗುತ್ತಿಲ್ಲ. ಈ ಕೊರತೆ ನೀಗಿಸಲು ಇದೀಗ ಮಿಶ್ರ ಲಸಿಕೆ ನೀಡುವಿಕೆ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.
ಆಸೀಸ್ ಕೋವಿಡ್ ಔಷಧ ಇಲಿಗಳ ಮೇಲೆ ಯಶಸ್ವಿ: ವೈರಸ್ 99.9% ಕಡಿಮೆ ಮಾಡಿದ ಔಷಧ!
ಮಿಶ್ರ ಲಸಿಕೆ ನೀಡುವ ಕುರಿತು ರೋಗ ನಿರೋಧಕ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ((NTAGI) ಈ ಕುರಿತು ಅಧ್ಯಯನ ವರದಿಗಳ ಪರಿಶೀಲನೆಯಲ್ಲಿ ತೊಡಗಿದೆ. ಯುಕೆ ಹಾಗೂ ಸ್ಪೇನ್‌ನಲ್ಲಿ ಈ ರೀತಿ ಬೇರೆ ಬೇರೆ ಕಂಪನಿಗಳ ಲಸಿಕೆಯನ್ನು ಯಶಸ್ವಿಯಾಗಿ ನೀಡಲಾಗಿದೆ.
ಸ್ಪಾನೀಶ್ ಆರೋಗ್ಯ ಇಲಾಖೆ ಫೈಜರ್ ಹಾಗೂ ಬಯೋಎನ್‌ಟೆಕ್ ಲಸಿಕೆಯನ್ನು ಮಿಶ್ರವಾಗಿ ನೀಡಿದೆ. ಮೊದಲ ಡೋಸ್ ಫೈಜರ್ ನೀಡಿದ್ದರೆ, ಎರಡನೇ ಡೋಸ್ ಬಯೋಎನ್‌ಟೆಕ್ ಲಸಿಕೆ ನೀಡಿದೆ. 400 ಮಂದಿಗೆ ಈ ರೀತಿ ಲಸಿಕೆ ನೀಡಲಾಗಿದೆ. ಇದರಲ್ಲಿ 200 ಮಂದಿಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.
ಕೊರೋನಾ ಲಸಿಕೆ ಕೊರತೆ ನೀಗಿಸಲು ಸರ್ಕಾರದ ನೂತನ ಹೆಜ್ಜೆ: ಗಡ್ಕರಿ ಮೆಚ್ಚುಗೆ!.
ರಕ್ತ ಹೆಪ್ಪುಗಟ್ಟುವಿಕೆ ಸೇರಿದಂತೆ ಹಲವು ಅಡ್ಡಪರಿಣಾಮಗಳ ಕುರಿತು ಸಂಶೋಧನೆ ಹಾಗೂ ಅಧ್ಯಯನ ನಡೆಸಲಾಗಿದೆ. ಮಿಶ್ರ ಲಸಿಕೆ ಪಡೆದವರಲ್ಲಿ ಹೆಚ್ಚಿನ ಸಮಸ್ಯೆಗಳೇನು ಕಂಡುಬಂದಿಲ್ಲ. ಇತ್ತ ಯುಕೆಯಲ್ಲೂ ಇದೇ ರೀತಿ ಪ್ರಯೋಗಳನ್ನು ನಡೆಸಲಾಗಿದೆ.
ಈ ವರದಿಗಳೇ ಇದೀಗ ಭಾರತದಲ್ಲೂ ಪ್ರಯೋಗ ಮಾಡಲು ಚಿಂತನೆ ನಡೆಸಿದೆ. ಆದರೆ ಸದ್ಯ ಲಸಿಕೆ ಅಭಾವವಿದ್ದರೂ ಇನ್ನು 3 ತಿಂಗಳಲ್ಲಿ ಎಲ್ಲಾ ರಾಜ್ಯಗಳಿಗೆ ಲಸಿಕೆ ಪೂರೈಕೆಯಾಗಲಿದೆ. ಇತ್ತ ಮಿಶ್ರ ಲಸಿಕೆ ಪ್ರಯೋಗ ಹಾಗೂ ಅನುಮೋದನೆ ಪಡೆಯಲು ಭಾರತದಲ್ಲಿ ಕನಿಷ್ಠ 4 ರಿಂದ 6 ತಿಂಗಳ ಅವಶ್ಯಕತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ