
ನವದೆಹಲಿ(ಮೇ.21): ಕೊರೋನಾ ವೈರಸ್ ವಿರುದ್ಧ ಜನ ಇನ್ನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಜನರ ನೆರವಿಗೆ ಬರಬೇಕು. ಆದರೆ ಇದು ಭಾರತದ ರಾಜಕೀಯ ಇತಿಹಾಸದಲ್ಲೇ ಇಲ್ಲ. ಅದು ಉಗ್ರರ ದಾಳಿಯಾಗಲಿ, ಪ್ರಾಕೃತಿಕ ವಿಕೋಪವಾಗಲಿ ಅಥವಾ ಈಗಿನ ಕೊರೋನಾ.. ಎಲ್ಲಾ ಪರಿಸ್ಥಿತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಜಾಯಮಾನ ಹೊಸದಲ್ಲ. ಹೀಗೆ ಕಾಂಗ್ರೆಸ್ ಟೂಲ್ ಕಿಟ್ ಪಿತೂರಿಯನ್ನು ಬಿಡುಗಡೆ ಮಾಡಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾಗೆ ಇದೀಗ ಟ್ವಿಟರ್ ಶಾಕ್ ನೀಡಿದೆ.
ಭಾರತ ಹಾಗೂ ಪ್ರಧಾನಿ ಮೋದಿ ಇಮೇಜ್ ಕೆಡಿಸಲು ಕಾಂಗ್ರೆಸ್ ಟೂಲ್ ಕಿಟ್ ಷಡ್ಯಂತ್ರ
ಇದೀಗ ಕೊರೋನಾ ಕುರಿತು ಕಾಂಗ್ರೆಸ್ -ಬಿಜೆಪಿ ನಡುವಿ ರಾಜಕೀಯ ಮತ್ತೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಧಾನಿ ಮೋದಿ ಹಾಗೂ ದೇಶದ ಮಾನ ಹರಾಜು ಹಾಕಲು ಕಾಂಗ್ರೆಸ್ ಟೂಲ್ ಕಿಟ್ ಬಿಡುಗಡೆ ಎಂದು ಆರೋಪಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಟ್ವಿಟರ್ ಮೂಲಕ ದಾಖಲೆ ಬಿಡುಗಡೆ ಮಾಡಿದ್ದರು. ಆದರೆ ಪಾತ್ರ ತಿರುಚಿರುವ ಹಾಗೂ ಖಚಿತ ದಾಖಲೆಗಳಿಲ್ಲದ ಟೂಲ್ ಕಿಟ್ ಹಂಚಿಕೊಂಡಿದ್ದಾರೆ ಎಂದು ಟ್ವಿಟರ್ ಹೇಳಿದೆ.
ಕೊರೋನಾ ಮಧ್ಯೆ ಟೂಲ್‌ಕಿಟ್ ಬಾಂಬ್: ಮೋದಿ ವಿರುದ್ಧ ಕುತಂತ್ರ?: ಸೌಮ್ಯಾ ವರ್ಮಾ ಯಾರು?.
ಮೇ 18 ರಂದು ಪಾತ್ರ ಟ್ವಿಟರ್ ಮೂಲಕ ಕಾಂಗ್ರೆಸ್ ಷಡ್ಯಂತ್ರದ ಟೂಲ್ ಕಿಟ್ ತಯಾರಿಸಿ ದೇಶದ ಇಮೇಜ್ ಕೆಡಿಸಲು ಕಾಂಗ್ರೆಸ್ ಈ ಮಾರ್ಗ ಅನುಸರಿಸಿದೆ ಎಂದು ಸಂಬಿತ್ ಪಾತ್ರ ಆರೋಪಿಸಿದ್ದರು.
ಟ್ವಿಟ್ಟರ್ ನೀತಿಯ ಪ್ರಕಾರ, ಪಾತ್ರ ತಿರುಚಿತ ದಾಖಲೆ ಎಂದು ಟ್ವಿಟರ್ ಹೇಳಿದೆ. ಈ ದಾಖಲೆ ಸತ್ಯಕ್ಕೆ ದೂರವಾಗಿದೆ ಎಂದು ಟ್ವಿಟರ್ ಹೇಳಿದೆ. ಸಾರ್ವಜನಿಕ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಅಥವಾ ಹಾನಿಯನ್ನುಂಟು ಮಾಡುವ ರೀತಿಯಲ್ಲಿ ದಾಖಲೆಗಳನ್ನು ನಿರ್ಮಿಸಲಾಗಿದೆ ಎಂದು ಟ್ವಿಟರ್ ಹೇಳಿದೆ. ದಾಖಲೆಗಳ ಅಥವಾ ಮಾಹಿತಿಗಳ ಸತ್ಯಾಸತ್ಯತೆಯನ್ನು ಬಳಕೆದಾರರಿಗೆ ನೀಡಲು ಟ್ವಿಟರ್ ವಿಶ್ಲೇಷಣೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ