Hyundai Issue : ವಿಷಾದ ವ್ಯಕ್ತಪಡಿಸಿದ ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ

Suvarna News   | Asianet News
Published : Feb 08, 2022, 04:17 PM IST
Hyundai Issue : ವಿಷಾದ ವ್ಯಕ್ತಪಡಿಸಿದ ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ

ಸಾರಾಂಶ

ಹ್ಯುಂಡೈ ವಿಚಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ದಕ್ಷಿಣ ಕೊರಿಯಾ ವಿದೇಶಾಂಗ ಸಚಿವ ಕಾಶ್ಮೀರ ಪ್ರತ್ಯೇಕತೆ ಕುರಿತಾಗಿ ಟ್ವೀಟ್ ಮಾಡಿದ್ದ ಹ್ಯುಂಡೈ ಪಾಕಿಸ್ತಾನ ಈ ಕುರಿತಾಗಿ ಭಾರತದಲ್ಲಿ #BoycottHyundai ಅಭಿಯಾನ ನಡೆದಿತ್ತು.

ನವದೆಹಲಿ (ಫೆ.8): ಕಾಶ್ಮೀರ (Kashmir) ಪ್ರತ್ಯೇಕತೆ ವಿಚಾರವಾಗಿ ಹ್ಯುಂಡೈ ಪಾಕಿಸ್ತಾನ (Hyundai Pakistan) ಮಾಡಿರುವ ಟ್ವೀಟ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದ್ದು, ಹ್ಯುಂಡೈ ಇಂಡಿಯಾದ ಕ್ಷಮೆಯ ಬೆನ್ನಲ್ಲಿಯೇ ದೇಶದ ಪ್ರಖ್ಯಾತ ಕಾರ್ ಕಂಪನಿಯ ಮೂಲ ದೇಶವಾದ ದಕ್ಷಿಣ ಕೊರಿಯಾದಿಂದಲೂ ವಿಷಾದ ವ್ಯಕ್ತವಾಗಿದೆ. ಮಂಗಳವಾರ ಬೆಳಗ್ಗೆ ದಕ್ಷಿಣ ಕೊರಿಯಾದ ವಿದೇಶಾಂಗ ಇಲಾಖೆಯ ಸಚಿವ ಚುಂಗ್ ಇಯು-ಯೋಂಗ್ (South Korean Foreign Minister Chung Eui yong)ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಗೆ (External Affairs Minister Jaishankar) ಕರೆ ಮಾಡಿದ್ದು, ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿಗೆ ಭಾರತ ಸಮನ್ಸ್ ಜಾರಿ ಮಾಡಿದ್ದು, ತೀವ್ರ ಬೇಸರ ವ್ಯಕ್ತಪಡಿಸಿದೆ.

ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ, ಎಸ್ ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿದ್ದು ಹ್ಯುಂಡೈ ವಿಷಯ ಸೇರಿದಂತೆ ವಿವಿಧ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ಚರ್ಚಿಸಿದರು. ಆ ಬಳಿಕ ವಿದೇಶಾಂಗ ವ್ಯವಹಾರಗಳ ಇಲಾಖೆಯು ಪ್ರಕಟಣೆಯನ್ನು ಹೊರಡಿಸಿದ್ದು, "ಭಾರತ ಸರ್ಕಾರಕ್ಕೆ ಹಾಗೂ ಭಾರತದ ಜನರಿಗೆ ಬೇಸರ ತಂದ ಕುರಿತಾಗಿ ನಾವು ವಿಷಾದ ವ್ಯಕ್ತಪಡಿಡುತ್ತೇವೆ' ಎಂದು ದಕ್ಷಿಣ ಕೊರಿಯಾದ ಪರವಾಗಿ ಚುಂಗ್ ಹೇಳಿದ್ದಾರೆ ಎಂದು ಹೇಳಿದೆ.

ಹ್ಯುಂಡೈ ಪಾಕಿಸ್ತಾನವು ಕಾಶ್ಮೀರ ಸಾಲಿಡಾರಿಟಿ ದಿನಕ್ಕೆ  ಬೆಂಬಲ ಸೂಚಿಸಿ ಸಾಮಾನಿಕ ಜಾಲ ತಾಣದದಲ್ಲಿ ಪೋಸ್ಟ್ ಮಾಡಿದ ತಕ್ಷಣವೇ ಇದನ್ನು ಗಮನಿಸಿದ್ದ ಸಿಯೋಲ್ ನಲ್ಲಿರುವ ಭಾರತದ ರಾಯಭಾರ ಕಚೇರಿ, ಹ್ಯುಂಡೈ ಪ್ರಧಾನ ಕಚೇರಿಯನ್ನು ಸಂಪರ್ಕ ಮಾಡಿದ್ದು ಮಾತ್ರವಲ್ಲದೆ ಇದಕ್ಕೆ ವಿವರಣೆ ನೀಡುವಂತೆ ಸೂಚಿಸಿತ್ತು ಎಂದು ಸಚಿವಾಲಯ ತಿಳಿಸಿದೆ. ಇದಲ್ಲದೆ, ಸಚಿವಾಲಯವು ಭಾರತದಲ್ಲಿನ ದಕ್ಷಿಣ ಕೊರಿಯಾದ ರಾಯಭಾರಿಗೂ (South Korea's ambassador in India)ಸಮನ್ಸ್ ಜಾರಿ ಮಾಡಿತ್ತು.
 


"ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಾಗದ ಸಾಮಾಜಿಕ ಮಾಧ್ಯಮ ಪೋಸ್ಟ್‌ನ ಬಗ್ಗೆ ಸರ್ಕಾರದ ತೀವ್ರ ಅಸಮಾಧಾನವನ್ನು ಅವರಿಗೆ ತಿಳಿಸಲಾಗಿದೆ. ಇದು ಭಾರತದ ಪ್ರಾದೇಶಿಕ ಸಮಗ್ರತೆಗೆ ಸಂಬಂಧಿಸಿದ ವಿಷಯವಾಗಿದೆ, ಇದರಲ್ಲಿ ಯಾವುದೇ ರಾಜಿ ಇಲ್ಲ" ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

Kashmir Tweet Row: ಪಾಕಿಸ್ತಾನಿ ಡೀಲರ್‌ನ ವಿವಾದಾತ್ಮಕ ಪೋಸ್ಟ್‌ಗೆ ವಿಷಾದ ವ್ಯಕ್ತಪಡಿಸಿದ ಹುಂಡೈ ಇಂಡಿಯಾ!
ಇನ್ನೊಂದೆಡೆ ಹ್ಯುಂಡೈ ಮೋಟಾರ್ಸ್ ಕೂಡ ಈ ಕುರಿತಾಗಿ ಸ್ಪಷ್ಟವಾದ ಪ್ರಕಟಣೆಯನ್ನು ನೀಡಿದ್ದು, ಭಾರತದ ಜನರಿಗೆ ತಮ್ಮ ವಿಷಾದವನ್ನು ತಿಳಿಸಿದೆ. ರಾಜಕೀಯ ಹಾಗೂ ಧಾರ್ಮಿಕ ವಿಚಾರಗಳ ಬಗ್ಗೆ ಹ್ಯುಂಡೈ ಮೋಟಾರ್ಸ್ ಎಂದಿಗೂ ಪ್ರತಿಕ್ರಿಯೆ ನೀಡುವುದಿಲ್ಲ ಅದನ್ನು ಈ ಹಂತದಲ್ಲಿ ಕಂಪನಿ ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಇದಲ್ಲದೆ, "ವಿವಿಧ ವಲಯಗಳಲ್ಲಿ ವಿದೇಶಿ ಕಂಪನಿಗಳ ಹೂಡಿಕೆಯನ್ನು ಭಾರತ ಸ್ವಾಗತಿಸುತ್ತದೆ. ಆದರೆ, ಅಂತಹ ಕಂಪನಿಗಳು ಅಥವಾ ಅವುಗಳ ಅಂಗಸಂಸ್ಥೆಗಳು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ವಿಷಯಗಳ ಬಗ್ಗೆ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಕಾಮೆಂಟ್‌ಗಳಿಂದ ದೂರವಿರಬೇಕು ಎನ್ನುವುದನ್ನೂ ನಿರೀಕ್ಷೆ ಮಾಡುತ್ತೇವೆ" ಎಂದು ಸಚಿವಾಲಯ ಹೇಳಿದೆ.

Hyundai India apology ಬಾಯ್‌ಕಾಟ್ ಟ್ರೆಂಡಿಂಗ್ ಬೆನ್ನಲ್ಲೇ ಕ್ಷಮೆ ಕೇಳಿದ ಹ್ಯುಂಡೈ ಇಂಡಿಯಾ!
ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ ನಿಂದ ಖಂಡನೆ: ಹ್ಯುಂಡೈ ಪಾಕಿಸ್ತಾನ ಹಾಗೂ ಕಿಯಾ ಪಾಕಿಸ್ತಾನ ಕಂಪನಿಗಳು ಕಾಶ್ಮೀರ ಪ್ರತ್ಯೇಕತೆ ಕುರಿತಾಗಿ ಪೋಸ್ಟ್ ಮಾಡಿದ ಬೆನ್ನಲ್ಲಿಯೇ ಈ ಕಂಪನಿಗಳ ಕ್ರಮವನ್ನು ಭಾರತದ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (FADA) ಖಂಡಿಸಿದೆ. FADA ದೇಶದ ಆಟೋಮೊಬೈಲ್ ಚಿಲ್ಲರೆ ಉದ್ಯಮದ ಅತ್ಯುನ್ನತ ರಾಷ್ಟ್ರೀಯ ಸಂಸ್ಥೆಯಾಗಿದೆ. ಕಾಶ್ಮೀರದ ಕುರಿತು ಟ್ವೀಟ್ ಮಾಡಿರುವ ಹುಂಡೈ ಪಾಕಿಸ್ತಾನ ಮತ್ತು ಕಿಯಾ ಪಾಕಿಸ್ತಾನದ ಕೃತ್ಯವನ್ನು ನಾವು ಕಟ್ಟುನಿಟ್ಟಾಗಿ ಖಂಡಿಸುತ್ತೇವೆ. ನಾವು ನಮ್ಮ ತಾಯ್ನಾಡಿಗೆ ಬದ್ಧರಾಗಿದ್ದೇವೆ ಮತ್ತು ಭಾರತದ ಎರಡೂ ಕಂಪನಿಗಳಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪತ್ರ ಬರೆದಿದ್ದೇವೆ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ