ಈಶಾನ್ಯ ರಾಜ್ಯಗಳನ್ನು ಪ್ರಧಾನಿ ಮೋದಿ ಭಾರತದ ‘ಅಷ್ಟಲಕ್ಷ್ಮೀ’ಯರು ಎಂದಿದ್ದು ಏಕೆ?

Kannadaprabha News   | Asianet News
Published : Feb 08, 2022, 03:33 PM ISTUpdated : Feb 08, 2022, 05:33 PM IST
ಈಶಾನ್ಯ ರಾಜ್ಯಗಳನ್ನು ಪ್ರಧಾನಿ ಮೋದಿ ಭಾರತದ ‘ಅಷ್ಟಲಕ್ಷ್ಮೀ’ಯರು ಎಂದಿದ್ದು ಏಕೆ?

ಸಾರಾಂಶ

ಈ ಬಜೆಟ್‌ನಲ್ಲಿ ಹಸಿರು ಆರ್ಥಿಕತೆಯ ಮೇಲೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ, ಪರ್ವತಮಾಲ ರೋಪ್‌ವೇ ಅಭಿವೃದ್ಧಿ ಯೋಜನೆಯು ಸಮೂಹ ಸಾರಿಗೆಯಲ್ಲಿ ಕ್ರಾಂತಿ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ

ಭಾರತವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ದೇಶವು ತನ್ನ ಸ್ವಾತಂತ್ರ್ಯದ 100ನೇ ವರ್ಷದಲ್ಲಿ ಹೇಗಿರಬೇಕು ಎಂಬ ದೃಷ್ಟಿಕೋನದ ಬಗ್ಗೆ ಗೌರವಾನ್ವಿತ ಪ್ರಧಾನ ಮಂತ್ರಿಯವರು ಆಗಾಗ್ಗೆ ಮಾತನಾಡುತ್ತಾರೆ. ಅಮೃತಕಾಲಕ್ಕೆ ಈ ವರ್ಷದಿಂದ ಪ್ರಾರಂಭವಾಗಬೇಕಾದ ಯೋಜನೆ ಮತ್ತು ತಳಪಾಯ ಹಾಗೂ 2022-23ರ ಹಣಕಾಸು ವರ್ಷದ ಬಜೆಟ್‌, ಆರ್ಥಿಕ ಮತ್ತು ಸಾಮಾಜಿಕ ಆದ್ಯತೆಗಳನ್ನು ಅದ್ಭುತವಾಗಿ ಸಮತೋಲನಗೊಳಿಸುವುದು ಮತ್ತು ಭಾರತದ ಆರ್ಥಿಕತೆಯಲ್ಲಿ ನಾವೀನ್ಯತೆ ಮತ್ತು ಉತ್ಸಾಹವನ್ನು ಹೊರಹೊಮ್ಮಿಸುವ ಅಪಾರ ಸಾಧ್ಯತೆಗಳಿಗೆ ಸೂಕ್ತ ಅಡಿಪಾಯವನ್ನು ಒದಗಿಸಿದೆ.

ಅಷ್ಟಲಕ್ಷ್ಮೀ ರಾಜ್ಯಗಳು

ನಿಸ್ಸಂದೇಹವಾಗಿ, ಈಶಾನ್ಯ ಪ್ರದೇಶದ ಅಷ್ಟಲಕ್ಷ್ಮೇ ರಾಜ್ಯಗಳು 2022-23ರ ಬಜೆಟ್‌ನಿಂದ ಮಹತ್ತರವಾದ ಲಾಭವನ್ನು ಪಡೆಯುತ್ತವೆ. ಭಾರತದ ಬೆಳವಣಿಗೆಯ ಎಂಜಿನ್‌ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ಆಸಿಯಾನ್‌)ಕ್ಕೆ ಗೇಟ್‌ ವೇ ಎಂದು ಕರೆಯಲಾಗುವ 8 ರಾಜ್ಯಗಳು ಸರ್ಕಾರದ ಆತ್ಮನಿರ್ಭರ ಭಾರತ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಕೇಂದ್ರಬಿಂದು ವಾಗಿವೆ. ಈ ಬಜೆಟ್‌ ಬೆಳವಣಿಗೆಯ ಹಾದಿಯನ್ನು ಮತ್ತಷ್ಟುಉಜ್ವಲಗೊಳಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆತ್ಮನಿರ್ಭರ ಅರ್ಥವ್ಯವಸ್ಥೆಯನ್ನು ಸ್ಥಾಪಿಸುವ ಎಲ್ಲಾ ಅಭಿವೃದ್ಧಿ ಪ್ರಯತ್ನಗಳಿಗೆ ಹೆಚ್ಚಿನ ಬಲ ನೀಡುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲೂ ಈಶಾನ್ಯ ಪ್ರದೇಶದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ ಮತ್ತು 2014ರಿಂದ ಈ ಪ್ರದೇಶದ ಅಭಿವೃದ್ಧಿಗೆ ಮಿಷನ್‌ ಮೋಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದು 75 ವರ್ಷಗಳಲ್ಲಿ ಮಣಿಪುರಕ್ಕೆ ಮೊದಲ ಸರಕು ರೈಲು ಸಂಪರ್ಕವಾಗಲಿ, ಅರುಣಾಚಲ ಪ್ರದೇಶ ಮತ್ತು ಮೇಘಾಲಯವನ್ನು ಮೊದಲ ಬಾರಿಗೆ ರೈಲ್ವೆ ಭೂಪಟದಲ್ಲಿ ಸೇರಿಸುವುದಾಗಲಿ, ಭಾರತದ ಅತಿ ಉದ್ದದ ರೈಲ್ರೋಡ್‌ ಸೇತುವೆಯಾದ ಬೋಗಿಬೀಲ್‌ ಸೇತುವೆ ನಿರ್ಮಾಣವಾಗಲಿ, ಮಣಿಪುರದಲ್ಲಿ ವಿಶ್ವದ ಅತಿ ಎತ್ತರದ ಸೇತುವೆ (ಜಿರಿಬಾಮ್ -ಇಂಫಾಲ್) ನಿರ್ಮಾಣವಾಗಲಿ, ಅಸ್ಸಾಂನಲ್ಲಿ ಉದ್ಘಾಟನೆಯಾಗಿರುವ ಈಶಾನ್ಯದ ಮೊದಲ ಪೆಟ್ರೋಕೆಮಿಕಲ್ ಯೋಜನೆಯಾಗಲಿ, ಸಿಕ್ಕಿಂನ ಮೊದಲ ವಿಮಾನ ನಿಲ್ದಾಣ ಅಥವಾ ಇತ್ತೀಚಿನ ಅಗರ್ತಲಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಉದ್ಘಾಟನೆಯಾಗಲಿ, ಪ್ರಧಾನಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಈಶಾನ್ಯವು ಅಭೂತಪೂರ್ವ ಬೆಳವಣಿಗೆ ಮತ್ತು ಸಮೃದ್ಧಿಯ ಹಾದಿಯಲ್ಲಿದೆ.

Presidential Election: ಸಂಭ್ಯಾವ್ಯರ ರೇಸ್‌ನಲ್ಲಿ ಕನ್ನಡತಿ ಸುಧಾಮೂರ್ತಿ, ಸಚಿವೆ ನಿರ್ಮಲಾ ಸೀತಾರಾಮನ್?

ಈಶಾನ್ಯಕ್ಕೆ 2.65 ಕೋಟಿ

2022-23ರ ಬಜೆಟ್‌ ಈ ಮಿಷನ್‌ಗೆ ಇನ್ನಷ್ಟುಶಕ್ತಿ ತುಂಬುತ್ತದೆ. 2014ರಿಂದ, ಈ ಸರ್ಕಾರವು ಬೆಳವಣಿಗೆ ಮತ್ತು ಅಭಿವೃದ್ಧಿಯತ್ತ ತನ್ನ ನಡಿಗೆಯನ್ನು ವೇಗಗೊಳಿಸಲು ಈಶಾನ್ಯ ಪ್ರದೇಶದಲ್ಲಿ 2.65 ಲಕ್ಷ ಕೋಟಿ ರು. ವೆಚ್ಚ ಮಾಡಿದೆ. ಕಳೆದ ಏಳೂವರೆ ವರ್ಷಗಳಲ್ಲಿ ಈಶಾನ್ಯ ಪ್ರದೇಶದ ಬಜೆಟ್‌ ಶೇ.110ರಷ್ಟುಹೆಚ್ಚಳವಾಗಿದೆ, ಅಂದರೆ 2014-15ರಲ್ಲಿ 36,108 ಕೋಟಿ ರು ಇದ್ದ ಅನುದಾನ 2022-23ನೇ ಆರ್ಥಿಕ ವರ್ಷದಲ್ಲಿ 76,040.07 ಕೋಟಿ ರು.ಗೆ ಏರಿಕೆಯಾಗಿದೆ; ಇದು ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿಯನ್ನು ಸಾಬೀತುಪಡಿಸುತ್ತದೆ.

ಒಂದು ಆರ್ಥಿಕ ವರ್ಷದಲ್ಲಿ ಅಂದರೆ, ಕಳೆದ ವರ್ಷದಲ್ಲಿ ಬಜೆಟ್‌ ಹಂಚಿಕೆ 68,020.24 ಕೋಟಿ ರು.ಗಳಿಂದ, ಶೇ.12ರಷ್ಟುಏರಿಕೆಯಾಗಿ 76,040.07 ಕೋಟಿ ರು.ತಲುಪಿದೆ. ಮೂಲಸೌಕರ್ಯಕ್ಕೆ ಒತ್ತು ನೀಡುವ ಸಲುವಾಗಿ, ಈ ಹಂಚಿಕೆಯ ಶೇ.15ಕ್ಕಿಂತ ಹೆಚ್ಚು ಅನುದಾನವನ್ನು ಹೆದ್ದಾರಿಗಳು, ಮಾಹಿತಿ ಮಾರ್ಗಗಳು, ರೈಲು ಮಾರ್ಗಗಳು ಮತ್ತು ವಾಯು ಮಾರ್ಗಗಳಿಗೆ ಮೀಸಲಿಡಲಾಗಿದೆ. ವಾಸ್ತವವಾಗಿ, ಈಶಾನ್ಯದಲ್ಲಿ ಕೇವಲ ರೈಲು ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು 2014ರಿಂದ 2021ರ ನಡುವೆ 39,000 ಕೋಟಿ ರು. ವೆಚ್ಚ ಮಾಡಲಾಗಿದೆ.

ಕ್ಷಿಪ್ರ ಅಭಿವೃದ್ಧಿಗೆ ಹೆಜ್ಜೆ

ಇತ್ತೀಚಿನ ಬಜೆಟ್‌ನಲ್ಲಿ 1,500 ಕೋಟಿ ರು.ಗಳ ಆರಂಭಿಕ ಹಂಚಿಕೆಯೊಂದಿಗೆ ಈಶಾನ್ಯಕ್ಕೆ ಪ್ರಧಾನ ಮಂತ್ರಿಯವರ ಅಭಿವೃದ್ಧಿ ಉಪಕ್ರಮ (Pಋ-ಈಛಿvಐNಉ) ಎಂಬ ಹೊಸ ಯೋಜನೆಯನ್ನು ಆರಂಭಿಸಿರುವುದು ಈಶಾನ್ಯದ ಕ್ಷಿಪ್ರ ಅಭಿವೃದ್ಧಿ ಪಯಣದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಈ ಯೋಜನೆಯು ಈಶಾನ್ಯ ಪ್ರದೇಶದ ಅಭಿವೃದ್ಧಿಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುತ್ತದೆ. ಅಲ್ಲದೇ, ಕ್ಷಿಪ್ರ ಉದ್ಯೋಗ ಸೃಷ್ಟಿಗೆ ಮತ್ತು ಈ ಪ್ರದೇಶದಲ್ಲಿ ಜೀವನೋಪಾಯಕ್ಕೆ ಬೆಂಬಲವನ್ನು ಹೆಚ್ಚಿಸುವುದರ ಜೊತೆಗೆ ವೈವಿಧ್ಯಮಯ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುತ್ತದೆ.

ಗುವಾಹಟಿಯಲ್ಲಿ ಮಕ್ಕಳ ಮತ್ತು ವಯಸ್ಕರ ಹೆಮಟೊಲಿಂಫಾಯಿಡ್‌ ಕ್ಯಾನ್ಸರ್‌ ನಿರ್ವಹಣೆ ಕೇಂದ್ರ ಮತ್ತು ಈಶಾನ್ಯ ತಂತ್ರಜ್ಞಾನ ಅಪ್ಲಿಕೇಶನ್‌ ಮತ್ತು ರೀಚ್‌ ಕೇಂದ್ರ (ಎನ್‌ಇಸಿಟಿಎಆರ್‌) ದಂತಹ ಜೀವನೋಪಾಯ ಸುಧಾರಣೆ ಯೋಜನೆಗಳು ಈಶಾನ್ಯ ಪ್ರದೇಶದ ಜನರ ಕಲ್ಯಾಣಕ್ಕೆ ಅಪಾರ ಕೊಡುಗೆ ನೀಡುತ್ತವೆ.

UP Election: ಅಭಿವೃದ್ಧಿ ನಗಣ್ಯ, ಜಾತಿ ಲೆಕ್ಕಾಚಾರದಲ್ಲೇ ಮುಳುಗಿರುವ ರಾಜಕೀಯ ಪಕ್ಷಗಳು

ಪರ್ವತಮಾಲಾದಿಂದ ಕ್ರಾಂತಿ

ಈ ಬಜೆಟ್‌ನಲ್ಲಿ ಹಸಿರು ಆರ್ಥಿಕತೆಯ ಮೇಲೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ, ಪರ್ವತಮಾಲ ರೋಪ್‌ವೇ ಅಭಿವೃದ್ಧಿ ಯೋಜನೆಯು ಸಮೂಹ ಸಾರಿಗೆಯಲ್ಲಿ ಕ್ರಾಂತಿ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಪರಿಸರ ಸ್ನೇಹಿ ಮತ್ತು ಈಶಾನ್ಯದ ಕಷ್ಟಕರ ಭೂಪ್ರದೇಶಕ್ಕೆ ತಲುಪಲು ಹೆಚ್ಚು ಅನುಕೂಲಕರವಾಗಿದೆ. ಈಶಾನ್ಯ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತೊಂದು ಮಾರ್ಗವಾಗಿದೆ.

ಭಾರತದ ಭದ್ರತೆ ಮತ್ತು ಆರ್ಥಿಕ ದೃಷ್ಟಿಕೋನದಿಂದ ಈಶಾನ್ಯ ರಾಜ್ಯಗಳು ಅಪಾರವಾದ ಕಾರ್ಯತಂತ್ರದ ಮೌಲ್ಯವನ್ನು ಹೊಂದಿವೆ. 5,182 ಕಿಲೋಮೀಟರ್‌ಗಿಂತಲೂ ಹೆಚ್ಚು ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದ್ದು, ಅವು ಸರ್ಕಾರದ ಆ್ಯಕ್ಟ್ ಈಸ್ಟ್‌ ನೀತಿಯ ಕೇಂದ್ರ ಬಿಂದುವಾಗಿವೆ. ಇತ್ತೀಚಿನ ಬಜೆಟ್‌ನ ಗ್ರಾಮಗಳ ಯೋಜನೆಯು ಈಶಾನ್ಯ ಸೇರಿದಂತೆ ದೇಶದ ಗಡಿಯಲ್ಲಿನ ಗ್ರಾಮಗಳಲ್ಲಿ ದೇಶದ ಇತರ ಭೂಭಾಗದ ಹಳ್ಳಿಗಳಂತೆಯೇ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಮಾನ ಅವಕಾಶಗಳನ್ನು ನೀಡುತ್ತದೆ. ಅಪಾರ ಅಂತರ್ಗತ ಸಾಮರ್ಥ್ಯ ಮತ್ತು ಶತಕೋಟಿ ಜನಸಂಖ್ಯೆಯ ಭಾರತದ ಪ್ರಗತಿಯ ಉಜ್ವಲ ಭವಿಷ್ಯದಲ್ಲಿ ಇವುಗಳ ಅನಿವಾರ್ಯತೆಯಿಂದಾಗಿಯೇ ಪ್ರಧಾನಿಯವರು ಈ ಎಂಟು ಈಶಾನ್ಯ ರಾಜ್ಯಗಳನ್ನು ಭಾರತದ ‘ಅಷ್ಟಲಕ್ಷ್ಮೀ’ಯರು ಎಂದು ಸೂಕ್ತ ವಿಶೇಷಣದಿಂದ ಕರೆದಿದ್ದಾರೆ. 2022-23ರ ಪ್ರಗತಿಪರ ಮತ್ತು ಸಕಾರಾತ್ಮಕ ಬಜೆಟನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಈಶಾನ್ಯ ಪ್ರದೇಶದ ಬೆಳವಣಿಗೆ ಮತ್ತು ಸಮೃದ್ಧಿಗೆ ಇದು ಸೂಕ್ತ ಸಮಯವಾಗಿದೆ.

- ಜಿ.ಕಿಶನ್‌ ರೆಡ್ಡಿ

ಕೇಂದ್ರ ಈಶಾನ್ಯ ಪ್ರದೇಶ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ
ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು