ನೆಹರೂಗೆ ತನ್ನ ಘನತೆಯ ಚಿಂತೆ, ಇದೇ ಕಾರಣಕ್ಕೆ ಗೋವಾಗೆ 15 ವರ್ಷ ಸ್ವಾತಂತ್ರ್ಯ ಸಿಗಲಿಲ್ಲ: ಮೋದಿ

Published : Feb 08, 2022, 02:20 PM ISTUpdated : Feb 08, 2022, 02:22 PM IST
ನೆಹರೂಗೆ ತನ್ನ ಘನತೆಯ ಚಿಂತೆ, ಇದೇ ಕಾರಣಕ್ಕೆ ಗೋವಾಗೆ 15 ವರ್ಷ ಸ್ವಾತಂತ್ರ್ಯ ಸಿಗಲಿಲ್ಲ: ಮೋದಿ

ಸಾರಾಂಶ

* ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ * ನೆಹರೂ, ಇಂಧಿರಾ ವಿರುದ್ಧ ಮೋದಿ ಕಿಡಿ * ಗೋವಾ ತಡವಾಗಿ ಸ್ವಾತಂತ್ರ್ಯ ಪಡೆದಿದ್ದಕ್ಕೆ ನೆಹರೂ ಕಾರಣ ಎಂದ ಪ್ರಧಾನಿ

ನವದೆಹಲಿ(ಫೆ.08): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಮಂಗಳವಾರ ರಾಜ್ಯಸಭೆಯಲ್ಲಿ (Rajya Sbaha) ಗೋವಾ ಸ್ವಾತಂತ್ರ್ಯದ ವಿಷಯವನ್ನು ಪ್ರಸ್ತಾಪಿಸಿದರು. ಗೋವಾ ವಿಮೋಚನೆಯಾಗಿ 60 ವರ್ಷ ಪೂರೈಸಿದೆ.  ಆದರೆ ಪಂಡಿತ್ ನೆಹರೂ ಅವರು ಸರ್ದಾರ್ ಪಟೇಲ್‌ರಂತೆ ತಂತ್ರವನ್ನು ರೂಪಿಸಿದ್ದರೆ, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಗೋವಾದ ಜನರು 15 ವರ್ಷಗಳಿಗಿಂತ ಹೆಚ್ಚು ಕಾಲ ಗುಲಾಮಗಿರಿಯನ್ನು ಅನುಭವಿಸಬೇಕಾಗಿರಲಿಲ್ಲ ಎಂದು ಗುಡುಗಿದ್ದಾರೆ.

ಪಿಎಂ ರ‍್ಯಾಲಿ ಬಗ್ಗೆ ಏನಂತೀರಿ? ಆಗ ಕೊರೋನಾ ಹಬ್ಬಿಲ್ಲವೇ? ಮೋದಿಗೆ ಪ್ರಿಯಾಂಕಾ ತಿರುಗೇಟು!

ಅಷ್ಟಕ್ಕೂ ಇದು ಮೋದಿ ಸುಖಾಸುಮ್ಮನೆ ಮಾಡಿದ ಆರೋಪವಲ್ಲ. ಪಿಎಂ ಮೋದಿ ಈ ಸಂದರ್ಭದಲ್ಲಿ 1955ರ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯನ್ನು ಉಲ್ಲೇಖಿಸಿದ್ದಾರೆ. ಆಗ ನೆಹರೂರವರು (Jawahar Lal Nehru) ಗೋವಾದ ಜನರ ಸ್ವಾತಂತ್ರ್ಯಕ್ಕಿಂತ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಘನತೆ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದರು. ಪಂಡಿತ್ ನೆಹರೂ ಗೋವಾದ ವಸಾಹತುಶಾಹಿ ಸರ್ಕಾರದ ಮೇಲೆ ದಾಳಿ ಮಾಡುವುದರಿಂದ ತಮ್ಮ ಇಮೇಜ್ ಹಾಳಾಗುತ್ತದೆ ಎಂದು ಭಾವಿಸಿದ್ದರು. ಗೋವಾದಲ್ಲಿ ಏನೇ ನಡೆದರೂ, ಗೋವಾದವರು ನರಳಿದರೂ ತನಗೂ ಅದಕ್ಕೂ ಸಂಬಂಧ ಇಲ್ಲ ಎಂಬಂತಿದ್ದರು ಎಂದಿದ್ದಾರೆ.

ಕೆಂಪು ಕೋಟೆಯಿಂದ ಸತ್ಯಾಗ್ರಹಿಗಳನ್ನು ಅವಮಾನಿಸಿದ್ದ ನೆಹರೂ

ನಮ್ಮ ಸತ್ಯಾಗ್ರಹಿಗಳು ಆಂದೋಲನ ನಡೆಸುತ್ತಿದ್ದರು, ಆದರೆ ನೆಹರೂ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ ಮೋದಿ, 1955ರ ಆಗಸ್ಟ್ 15ರಂದು ಕೆಂಪು ಕೋಟೆಯಯಿಂದ ನೆಹರೂ ಅವರು ಗೋವಾ ಕುರಿತು ಮಾಡಿದ ಭಾಷಣವನ್ನು ಉಲ್ಲೇಖಿಸಿದರು. ಈ ಭಾಷಣದಲ್ಲಿ ನೆಹರೂ ಅಲ್ಲಿ ಮಿಲಿಟರಿ ಕ್ರಮ ಕೈಗೊಳ್ಳುತ್ತೇವೆ ಎಂಬ ಭ್ರಮೆ ಯಾರಿಗೂ ಬೇಡ. ಗೋವಾದ ಸುತ್ತ ಯಾವ ಸೇನೆಯೂ ಇಲ್ಲ. ಸೈನ್ಯವನ್ನು ಕಳುಹಿಸಲು ಒತ್ತಾಯಿಸುತ್ತೇವೆ ಎಂದು ಒಳಗಿರುವ ಜನರು ಸ್ವಲ್ಪ ಗಲಾಟೆ ಮಾಡಿ ಅಂತಹ ಪರಿಸ್ಥಿತಿಯನ್ನು ಸೃಷ್ಟಿಸಲು ಬಯಸುತ್ತಾರೆ. ನಾವು ಸೈನ್ಯವನ್ನು ಕಳುಹಿಸುವುದಿಲ್ಲ. ನಾವು ಅದನ್ನು ಶಾಂತಿಯುತವಾಗಿ ನಿರ್ಧರಿಸುತ್ತೇವೆ, ಪ್ರತಿಯೊಬ್ಬರೂ ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲಿಗೆ ಹೋಗುವವರಿಗೆ ಅಲ್ಲಿಗೆ ಹೋಗುವುದು ಸಂತೋಷ. ಆದರೆ ನೀವು ನಿಮ್ಮನ್ನು ಸತ್ಯಾಗ್ರಹಿ ಎಂದು ಕರೆದರೆ, ಸತ್ಯಾಗ್ರಹದ ತತ್ವಗಳು ಮತ್ತು ಮಾರ್ಗಗಳನ್ನು ಸಹ ನೆನಪಿಡಿ. ಸೇನೆಯು ಸತ್ಯಾಗ್ರಹಿಯನ್ನು ಅನುಸರಿಸುವುದಿಲ್ಲ ಮತ್ತು ಸೈನ್ಯದ ಕರೆಯನ್ನೂ ಅನುಸರಿಸುವುದಿಲ್ಲ ಎಂದಿದ್ದರು. 

PM Modi Speech ಟುಕ್ಡೇ ಗ್ಯಾಂಗ್‌ಗೆ ಕಾಂಗ್ರೆಸ್‌ ಲೀಡರ್‌, ಮೋದಿ ವಾಗ್ದಾಳಿಗೆ ಬಳಲಿ ಬೆಂಡಾದ ವಿಪಕ್ಷ!

ವಾಕ್ ಸ್ವಾತಂತ್ರ್ಯ ಎಷ್ಟಿತ್ತೆಂದರೆ ಸಾವರ್ಕರ್ ಅವರ ಹಾಡು ಹಾಕಿದ್ದಕ್ಕೆ ಲತಾಜೀ ಅವರ ಸಹೋದರನನ್ನು ರೇಡಿಯೊದಿಂದ ತೆಗೆದುಹಾಕಲಾಯಿತು.

ಕಾಂಗ್ರೆಸ್ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದೆ. ಆದರೆ ಅವರ ಕಾಲದಲ್ಲಿ ಅದನ್ನು ಹೇಗೆ ನೀಡಲಾಯಿತು ಎಂಬುದಕ್ಕೆ ನಾನು ಉದಾಹರಣೆ ನೀಡುತ್ತೇನೆ. ಲತಾ ಮಂಗೇಶ್ಕರ್ (Lata Mangeshkar) ಅವರ ನಿಧನದಿಂದ ಇಡೀ ದೇಶವೇ ದುಃಖಿತವಾಗಿದೆ. ಅವರ ಕುಟುಂಬ ಗೋವಾದಿಂದ ಬಂದಿದೆ. ಆದರೆ ಅದನ್ನು ಅವರ ಕುಟುಂಬವನ್ನು ಹೇಗೆ ನಡೆಸಿಕೊಂಡರು ಎಂಬುದನ್ನೂ ದೇಶಕ್ಕೆ ತಿಳಿಯಬೇಕು. ಲತಾ ಜಿಯವರ ಕಿರಿಯ ಸಹೋದರ ಪಂಡಿತ್ ಹೃದಯ ನಾಥ್ ಮಂಗೇಶ್ಕರ್ ಅವರು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರನ್ನು ರೇಡಿಯೊದಿಂದ ವಜಾ ಮಾಡಲಾಯಿತು. ಆಲ್ ಇಂಡಿಯಾ ರೇಡಿಯೊದಲ್ಲಿ ವೀರ್ ಸಾವರ್ಕರ್ ಅವರ ದೇಶಭಕ್ತಿಯ ಕವಿತೆಯನ್ನು ಪ್ರಸ್ತುತಪಡಿಸಿದ್ದು ಅವರ ಏಕೈಕ ಅಪರಾಧ. ಇದನ್ನು ಹೃದಯನಾಥ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಕವನ ಹಾಡಿದ್ದಕ್ಕಾಗಿ ಅವರನ್ನು 8 ದಿನಗಳಲ್ಲಿ ರೇಡಿಯೊದಿಂದ ಹೊರಹಾಕಲಾಯಿತು. ಇದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವೇ ಎಂದು ಮೋದಿ ಮೋದಿ ಪ್ರಶ್ನಿಸಿದ್ದಾರೆ.

ಇಂದಿರಾಜಿಯವರ ಮುಂದೆ ತಲೆಬಾಗದ ಕಾರಣಕ್ಕೆ ಕಿಶೋರ್ ಕುಮಾರ್‌ಗೆ ಶಿಕ್ಷೆ

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಜಿ ಎದುರು ತಲೆಬಾಗದ ಕಾರಣ ಕಿಶೋರ್ ಕುಮಾರ್ ಅವರನ್ನು ವಜಾಗೊಳಿಸಲಾಗಿತ್ತು. ನಿರ್ದಿಷ್ಟ ಕುಟುಂಬದ ವಿರುದ್ಧ ಯಾರಾದರೂ ಧ್ವನಿ ಎತ್ತಿದರೆ ಏನಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸೀತಾರಾಮ್ ಕೇಸರಿ ಬಗ್ಗೆ ಎಲ್ಲರಿಗೂ ಗೊತ್ತು ಎಂದೂ ಮೋದಿ ಉಲ್ಲೇಖಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ
ಲೋಕಸಭೆಯಲ್ಲಿ ನೌಕರರ ಪರ ಮಸೂದೆ ಮಂಡನೆ: ಉದ್ಯೋಗಿಗಳ ಲೈಫ್​ ಜಿಂಗಾಲಾಲಾ- ಏನಿದೆ ಇದರಲ್ಲಿ?