ಎನ್ಐಎ ಅಧಿಕಾರಿ ಪುತ್ರಿ, ಕಾನೂನು ವಿದ್ಯಾರ್ಥಿನಿ ಕಾಲೇಜು ಹಾಸ್ಟೆಲ್‌ ರೂಮ್‌ನಲ್ಲಿ ಶವವಾಗಿ ಪತ್ತೆ

By Anusha Kb  |  First Published Sep 2, 2024, 2:25 PM IST

 ಲಕ್ನೋದಲ್ಲಿ 19 ವರ್ಷದ ವಿದ್ಯಾರ್ಥಿನಿ ತಾನು ಓದುತ್ತಿದ್ದ ಕಾಲೇಜು ಹಾಸ್ಟೆಲ್‌ನ ರೂಮ್‌ನಲ್ಲಿ ಪ್ರಜ್ಞಾಹೀನಳಾಗಿ ಪತ್ತೆಯಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ.


ಲಕ್ನೋ: ಇತ್ತೀಚೆಗೆ ಸಣ್ಣ ಸಣ್ಣ ಮಕ್ಕಳು ಹರೆಯದ ಯುವಕ ಯುವತಿಯರು ಹಠಾತ್ ಹೃದಯಾಘಾತಕ್ಕೆ ಒಳಗಾಗಿ ದಿಢೀರ್ ಸಾವನ್ನಪ್ಪುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿದಿನವೂ ಒಂದಲ್ಲ ಒಂದು ಕಡೆ ಇಂತಹ ಘಟನೆಗಳು ನಡೆಯುತ್ತಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರನ್ನು  ಸಂಕಷ್ಟಕ್ಕೆ ದೂಡುತ್ತಿವೆ. ಮೊನ್ನೆಯಷ್ಟೇ ದೆಹಲಿಯಲ್ಲಿ ಸಹೋದ್ಯೋಗಿಯ ವಿದಾಯ ಕೂಟದಲ್ಲಿ ಡಾನ್ಸ್ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಹಠಾತ್ ಸಾವನ್ನಪ್ಪಿದ್ದರು. ಈಗ ಲಕ್ನೋದಲ್ಲಿ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ತಾನು ಓದುತ್ತಿದ್ದ ಕಾಲೇಜು ಹಾಸ್ಟೆಲ್‌ನಲ್ಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. 

ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತ ಯುವತಿಯನ್ನು ಅಂಕಿತಾ ರಸ್ತೋಗಿ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಅಂಕಿತಾ ರಸ್ತೋಗಿ ಇಲ್ಲಿನ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ಚವಿದ್ಯಾಲಯದಲ್ಲಿ ಕಾನೂನು ಪದವಿ ಓದುತ್ತಿದ್ದರು.  ಶನಿವಾರ ರಾತ್ರಿ ಅಂಕಿತಾ ತನ್ನ ಹಾಸ್ಟೆಲ್ ರೂಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಆಕೆಯನ್ನು ಹಾಸ್ಟೆಲ್ ಸಿಬ್ಬಂದಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾರೆ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯರು ಆಕೆ ರಾತ್ರಿ 10 ಗಂಟೆಗೆ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. 

Tap to resize

Latest Videos

ಯುಕೆಜಿ ಓದ್ತಿದ್ದ ಮಗುವಿಗೆ ಶಾಲೆಯಲ್ಲೇ ಹೃದಯಾಘಾತ: ಆಸ್ಪತ್ರೆಯಲ್ಲಿ ಸಾವು

ಅಂಕಿತಾ ರಸ್ತೋಗಿ ಬಿಎ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿದ್ದು, 1998ರ ಬ್ಯಾಚ್‌ನಲ್ಲಿ ಮಹಾರಾಷ್ಟ್ರ ಖೆಡರ್‌ನಿಂದ  ಐಪಿಎಸ್‌ ಅಧಿಕಾರಿಯಾಗಿದ್ದ ಸಂಜಯ್ ರಸ್ತೋಗಿ ಅವರ ಪುತ್ರಿಯಾಗಿದ್ದಾರೆ. ಸಂಜಯ್ ರಸ್ತೋಗಿ ಅವರು ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಗಿ ಕೆಲಸ ಮಾಡುತ್ತಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ರಾಮ್ ಮನೋಹರ್ ಲೋಹಿಯಾ ಶಿಕ್ಷಣ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಬಹಳ ವಿಷಾದದಿಂದ ಅಂಕಿತಾ ರಸ್ತೋಗಿ ಅವರ ಅಕಾಲಿಕ ನಿಧನವನ್ನು ಘೋಷಿಸುತ್ತಿದ್ದೇವೆ. ಆಕೆ ಕಳೆದ ರಾತ್ರಿ 10 ಗಂಟೆಗೆ ಸಾವನ್ನಪ್ಪಿದ್ದಾಳೆ. ಅವಳ ಅಕಾಲಿತ ಸಾವಿಗೆ ಇಡೀ ಆರ್‌ಎಂಎಲ್ ಕುಟುಂಬ ಶೋಕಿಸುತ್ತಿದೆ. ಈ ಕಠಿಣ ಸ್ಥಿತಿಯಲ್ಲಿ ಅಂಕಿತಾ ರಸ್ತೋಗಿ ಅವರ ಕುಟುಂಬದ ಜೊತೆ ನಿಲ್ಲುತ್ತೇವೆ. ಆಕೆಯ ಸಾವಿನಿಂದ ಚೇತರಿಸಿಕೊಳ್ಳಲು ಆಕೆಯ ಕುಟುಂಬದ ಪರ ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಸಹೋದ್ಯೋಗಿಯ ವಿದಾಯ ಕೂಟ: ಖುಷಿಯಿಂದ ಡಾನ್ಸ್‌ ಮಾಡುತ್ತಿರುವಾಗಲೇ ಕುಸಿದು ಬಿದ್ದು ಪೊಲೀಸ್ ಅಧಿಕಾರಿ ಸಾವು

ಸಾವಿನ ವೇಳೆ ಅಂಕಿತ ಮೈಮೇಲೆ ಬಟ್ಟೆಗಳು ಸಹಜವಾಗಿದ್ದು, ದೇಹದಲ್ಲಿ ಯಾವುದೇ ಗಾಯದ ಗುರುತಿಲ್ಲ, ಅಲ್ಲದೇ ಘಟನೆ ನಡೆಯುವ ವೇಳೆ ಅಂಕಿತಾ ಇದ್ದ ರೂಮ್ ಒಳಗಿನಿಂದ ಲಾಕ್ ಆಗಿತ್ತು. ಪೋಸ್ಟ್ ಮಾರ್ಟಂ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಘಟನೆಗೆ ಸಂಬಂಧಿಸಿದಂತೆ ಅಂಕಿತಾ ಪೋಷಕರು ಯಾವುದೇ ಕೇಸ್ ದಾಖಲಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

click me!