ಗಂಗೂಲಿ ಯಶಸ್ವಿ ರಾಜಕಾರಣಿ ಆಗಬಲ್ಲರು: ಪತ್ನಿ ಡೋನಾ

Published : May 08, 2022, 05:53 AM IST
ಗಂಗೂಲಿ ಯಶಸ್ವಿ ರಾಜಕಾರಣಿ ಆಗಬಲ್ಲರು: ಪತ್ನಿ ಡೋನಾ

ಸಾರಾಂಶ

* ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ  * ಗಂಗೂಲಿ ಯಶಸ್ವಿ ರಾಜಕಾರಣಿ ಆಗಬಲ್ಲರು: ಪತ್ನಿ ಡೋನಾ * ಭಾರೀ ಕುತೂಹಲ ಮೂಡಿಸಿದೆ ಪತ್ನಿ ಡೋನಾ ಗಂಗೂಲಿ ನೀಡಿರುವ ಹೇಳಿಕೆ 

ಕೋಲ್ಕತಾ(ಮೇ.08): ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಬಿಜೆಪಿ ಸೇರುವ ಬಗ್ಗೆ ಗುಸುಗುಸು ಆರಂಭವಾಗಿರುವ ಬೆನ್ನಲ್ಲೇ ‘ಸೌರವ್‌ ಒಳ್ಳೆಯ ರಾಜಕಾರಣಿ ಆಗಬಲ್ಲರು’ ಎಂದು ಅವರ ಪತ್ನಿ ಡೋನಾ ಗಂಗೂಲಿ ನೀಡಿರುವ ಹೇಳಿಕೆ ಕುತೂಹಲ ಕೆರಳಿಸಿದೆ.

ಶುಕ್ರವಾರವಷ್ಟೇ ರಾಷ್ಟ್ರೀಯ ಬಿಜೆಪಿ ನಾಯಕ ಅಮಿತ್‌ ಶಾ ಅವರು ಗಂಗೂಲಿ ಮನೆಯಲ್ಲಿ ಔತಣ ಸವಿದಿದ್ದರು. ನಂತರ ಬಿಜೆಪಿ ಸೇರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಗಂಗೂಲಿ ತಳ್ಳಿಹಾಕಿದ್ದರು. ಆದರೆ ಶನಿವಾರ ಆಸ್ಪತ್ರೆಯೊಂದರ ಉದ್ಘಾಟನೆಗೆ ಪತಿಯ ಜೊತೆ ಆಗಮಿಸಿದ್ದ ಡೋನಾ ಗಂಗೂಲಿ ಅವರನ್ನು ಕೇಳಿದಾಗ, ‘ಜನರ ಕೆಲಸವೇ ಊಹಿಸುವುದು. ಸೌರವ್‌ ರಾಜಕೀಯ ಸೇರುವುದಾದರೆ ಎಲ್ಲರಿಗೂ ಅದನ್ನು ತಿಳಿಸುತ್ತಾರೆ. ಸೌರವ್‌ ಉತ್ತಮ ರಾಜಕಾರಣಿ ಆಗಬಲ್ಲರು ಮತ್ತು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬಲ್ಲರು ಎಂದಷ್ಟೇ ಹೇಳಬಲ್ಲೆ’ ಎಂದರು. ಇದು ಗಂಗೂಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಡುವ ಕುರಿತ ಊಹಾಪೋಹಗಳಿಗೆ ರೆಕ್ಕೆ ಮೂಡಿಸಿದೆ.

‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ನಮ್ಮ ಕುಟುಂಬಕ್ಕೆ ಆಪ್ತರು. ಇಷ್ಟಕ್ಕೂ ಅಮಿತ್‌ ಶಾ ಭೇಟಿ ವೇಳೆ ರಾಜಕಾರಣದ ಬಗ್ಗೆ ಚರ್ಚೆ ನಡೆದಿಲ್ಲ’ ಎಂದೂ ಡೋನಾ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು