ಬಗ್ಗಾ ಬಂಧನಕ್ಕೆ ಪಂಜಾಬ್‌ ಹೈಕೋರ್ಟ್‌ ತಡೆ!

By Kannadaprabha News  |  First Published May 8, 2022, 5:47 AM IST

* ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ತಜಿಂದರ್‌ ಪಾಲ್‌ ಬಗ್ಗಾ ಪ್ರಕರಣ

* ಬಗ್ಗಾ ಬಂಧನಕ್ಕೆ ಪಂಜಾಬ್‌ ಹೈಕೋರ್ಟ್‌ ತಡೆ

* ತಡ ರಾತ್ರಿ ವಿಚಾರಣೆ ನಡೆಸಿದ ಕೋರ್ಚ್‌ ಆದೇಶ


ಮೊಹಾಲಿ(ಮೇ.08): ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ತಜಿಂದರ್‌ ಪಾಲ್‌ ಬಗ್ಗಾ ಪ್ರಕರಣದಲ್ಲಿ ಶನಿವಾರ ತಡರಾತ್ರಿ ಹೈಡ್ರಾಮಾ ನಡೆದಿದೆ. ತಮ್ಮ ಬಂಧನಕ್ಕೆ ಮೊಹಾಲಿ ಕೋರ್ಚ್‌ ಹೊರಡಿಸಿದ್ದ ಜಾಮೀನು ರಹಿತ ವಾರಂಟ್‌ಗೆ ತಡೆ ನೀಡಬೇಕು ಎಂದು ಕೋರಿ ಬಗ್ಗಾ ಸಲ್ಲಿಸಿದ್ದ ಅರ್ಜಿಯನ್ನು ತಡರಾತ್ರಿ ವಿಚಾರಣೆ ನಡೆಸಿರುವ ಹೈಕೋರ್ಚ್‌, ಅರ್ಜಿಯ ಮುಂದಿನ ವಿಚಾರಣೆವರೆಗೂ ಬಂಧಿಸದಂತೆ ಆದೇಶಿಸಿದೆ. ಹೀಗಾಗಿ ಬಗ್ಗಾ ತಕ್ಷಣಕ್ಕೆ ಬಂಧನ ಭೀತಿಯಿಂದ ಪಾರಾಗಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧದ ಪ್ರಚೋದಕ ಹೇಳಿಕೆಗಳು, ಎರಡು ಸಮುದಾಯಗಳ ನಡುವೆ ದ್ವೇಷ ಹರಡಿಸುವಿಕೆ- ಇತ್ಯಾದಿ ಆರೋಪ ಹೊರಿಸಿ ಮೊಹಾಲಿಯ ಆಪ್‌ ನಾಯಕರೊಬ್ಬರು ಬಗ್ಗಾ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದರು. ಶುಕ್ರವಾರವಷ್ಟೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗ್ಗಾ ಅವರನ್ನು ಪಂಜಾಬ್‌ ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದರು. ಆದರೆ ಬಗ್ಗಾ ಅವರ ತಂದೆ ಅಪಹರಣ ದೂರು ದಾಖಲಿಸಿದ್ದ ಕಾರಣ ಮಧ್ಯಪ್ರವೇಶಿಸಿದ ದಿಲ್ಲಿ ಪೊಲೀಸರು, ಹರ್ಯಾಣ ಪೊಲೀಸರ ನೆರವು ಪಡೆದು ಹರ್ಯಾಣದ ಕುರುಕ್ಷೇತ್ರದಲ್ಲಿ ಬಗ್ಗಾ ಅವರನ್ನು ‘ಬಂಧಮುಕ್ತ’ ಮಾಡಿ ದಿಲ್ಲಿಗೆ ವಾಪಸ್‌ ಕರೆತಂದಿದ್ದರು.

Tap to resize

Latest Videos

ಆದರೆ ಇದರ ವಿರುದ್ಧ ಮೊಹಾಲಿ ಕೋರ್ಚ್‌ಗೆ ಶನಿವಾರ ಬೆಳಗ್ಗೆ ಪಂಜಾಬ್‌ ಪೊಲೀಸರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಮಾನ್ಯ ಮಾಡಿದ ಕೋರ್ಟು, ಬಗ್ಗಾ ಬಂಧನಕ್ಕೆ ಆದೇಶಿಸಿತ್ತು. ಹೀಗಾಗಿ ಬಗ್ಗಾ ಬಂಧನ ಭೀತಿಗೆ ಒಳಗಾಗಿದ್ದರು.

click me!