ಕೇರಳ ರಾಜ್ಯಪಾಲ ಖಾನ್‌ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ?

Published : May 08, 2022, 05:38 AM IST
ಕೇರಳ ರಾಜ್ಯಪಾಲ ಖಾನ್‌ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ?

ಸಾರಾಂಶ

ಇಸ್ಲಾಮಿಕ್‌ ಮೂಲಭೂತವಾತದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುವ ಖಾನ್ ಕೇರಳ ರಾಜ್ಯಪಾಲ ಖಾನ್‌ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ? - ಕಲಾಂ ಬಳಿಕ ಮತ್ತೊಬ್ಬ ಮುಸ್ಲಿಮನನ್ನು ಉನ್ನತ ಹುದ್ದೆಗೆ ತರಲು ಬಿಜೆಪಿ ಚಿಂತನೆ?

ನವದೆಹಲಿ: ಇಸ್ಲಾಮಿಕ್‌ ಮೂಲಭೂತವಾತದ ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡುವ ಛಾತಿ ಹೊಂದಿರುವ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಸುದ್ದಿಸಂಸ್ಥೆಯ ವರದಿಯೊಂದು ಹೇಳಿದೆ.

2002ರಲ್ಲಿ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ವಿಜ್ಞಾನಿ ಅಬ್ದುಲ್‌ ಕಲಾಂರನ್ನು ರಾಷ್ಟ್ರಪತಿ ಮಾಡಿದ್ದರು. ಈಗ ಅಟಲ್‌ರಂಥದ್ದೇ ನಡೆಯನ್ನು ಮೋದಿ ಅನುಸರಿಸಬಹುದು. ಮುಸ್ಲಿಂ ನಾಯಕನನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡಬಹುದು. ಆದರೆ ಪಕ್ಷದ ಒಳಗೆ ಹಾಗೂ ಮಿತ್ರಪಕ್ಷಗಳ ಜತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ. ಜುಲೈನಲ್ಲಿ ರಾಷ್ಟ್ರಪತಿ ಚುನಾನಣೆ ನಡೆಯಲಿದೆ.

ಬಿಜೆಪಿ ತತ್ವದ ಮುಸ್ಲಿಂ ನಾಯಕ:

ಖಾನ್‌ ಮೂಲತಃ ಉತ್ತರ ಪ್ರದೇಶದವರಾಗಿದ್ದು, ಬಿಜೆಪಿ ತತ್ವಗಳನ್ನು ಪ್ರಚುರಪಡಿಸುವ ಪ್ರಮುಖ ಮುಸ್ಲಿಂ ನಾಯಕರಾಗಿದ್ದಾರೆ. ಹೀಗಾಗಿ ತನ್ನ ತತ್ವಗಳಿಗೆ ಸರಿ ಹೊಂದುವ ಖಾನ್‌ರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡುವ ಇರಾದೆ ಬಿಜೆಪಿ ನಾಯಕರಿಗೆ ಇದೆ ಎಂದು ತಿಳಿದುಬಂದಿದೆ.

ಖಾನ್‌ ಮೊದಲು ಚೌಧರಿ ಚರಣಸಿಂಗ್‌ರ ಭಾರತೀಯ ಕ್ರಾಂತಿ ದಳ, ಕಾಂಗ್ರೆಸ್‌, ಜನತಾದಳ ಹಾಗೂ ಬಿಎಸ್‌ಪಿಯಲ್ಲಿ ಕೂಡ ಇದ್ದರು. ರಾಜೀವ್‌ ಗಾಂಧಿ ಹಾಗೂ ವಿ.ಪಿ. ಸಿಂಗ್‌ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. 2004ರಲ್ಲಿ ಬಿಜೆಪಿ ಸೇರಿ 2007ರಲ್ಲಿ ಬಿಟ್ಟಿದ್ದರು. ಆದರೆ 2014ರಲ್ಲಿ ಮೋದಿ ಪ್ರಧಾನಿ ಆದ ನಂತರ ಪುನಃ ಬಿಜೆಪಿ ಸೇರಿದ್ದರು. ತ್ರಿವಳಿ ತಲಾಖ್‌ ಹಾಗೂ ಹಿಜಾಬ್‌ಗಳನ್ನು ಗಟ್ಟಿದನಿಯಲ್ಲಿ ವಿರೋಧಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು