ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳು ಗೌರವಿಸಬೇಕು!

By Suvarna NewsFirst Published Mar 30, 2022, 7:50 PM IST
Highlights

ಭಾರತದ ಸಂವಿಧಾನ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳು

ಮೂಲಭೂತ ಹಕ್ಕುಗಳನ್ನು ನಿಯಂತ್ರಿಸುವ ಕೆಲಸ ಸಾಮಾಜಿಕ ಮಾಧ್ಯಮಗಳಿಗಿಲ್ಲ

ಸಾಮಾಜಿಕ ಮಾಧ್ಯಮ ಖಾತೆಯನ್ನು ರದ್ದು ಮಾಡುವುದು ಕಂಪನಿಯ ಕೊನೆಯ ಆಯ್ಕೆಯಾಗಿರಬೇಕು

ನವದೆಹಲಿ (ಮಾ. 30): ಸಾಮಾಜಿಕ ಮಾಧ್ಯಮಗಳ (Social media) ಖಾತೆಗಳ (Accounts) ವಿರುದ್ಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ತೆಗೆದುಕೊಳ್ಳುವ ಕ್ರಮವು ಆಕ್ಷೇಪಾರ್ಹ ವಿಷಯಕ್ಕೆ ಅನುಗುಣವಾಗಿರಬೇಕು ಮತ್ತು ಖಾತೆಯನ್ನು ತೆಗೆದುಹಾಕುವುದು ಕಂಪನಿಯ ಕೊನೆಯ ಮಾರ್ಗವಾಗಿರಬೇಕು ಎಂದು ಭಾರತ ಸರ್ಕಾರ, ದೆಹಲಿ ಹೈಕೋರ್ಟ್ ಗೆ (Delhi High Court) ಬುಧವಾರ ಹೇಳಿದೆ. ಭಾರತದ ಸಂವಿಧಾನವು ತನ್ನ ಜನರಿಗೆ ನೀಡಿರುವ ಮೂಲಭೂತ ಹಕ್ಕುಗಳು ( fundamental rights) ಸಾಮಾಜಿಕ ಮಾಧ್ಯಮ ವೇದಿಕೆಗಳು ಗೌರವಿಸಬೇಕು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ದೆಹಲಿ ಹೈಕೋರ್ಟ್‌ಗೆ ತಿಳಿಸಿರುವ ಮಾಹಿತಿಯಲ್ಲಿ ಹೇಳಿದೆ.

ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ತನ್ನ ಖಾತೆಯನ್ನು ಅಮಾನತುಗೊಳಿಸಿದ್ದರ ವಿರುದ್ಧ ಟ್ವಿಟರ್ ಬಳಕೆದಾರರ ಅರ್ಜಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸರ್ಕಾರ ಈ ಉತ್ತರ ನೀಡಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಎಲ್ಲಾ ಸಂದರ್ಭಗಳಲ್ಲಿ ಖಾತೆಯನ್ನು ತೆಗೆದುಹಾಕಬಾರದು ಅಥವಾ ಅದನ್ನು ಸಂಪೂರ್ಣವಾಗಿ ಅಮಾನತುಗೊಳಿಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ಲಾಟ್‌ಫಾರ್ಮ್ ಬಳಕೆದಾರರಿಗೆ ಪೂರ್ವ ಸೂಚನೆಯನ್ನು ನೀಡಬಹುದು ಮತ್ತು ಪ್ಲಾಟ್‌ಫಾರ್ಮ್ ನೀತಿಗಳು ಅಥವಾ ಅನ್ವಯವಾಗುವ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳ ಮಾರ್ಗಸೂಚಿಗಳು) ನಿಯಮಗಳನ್ನು ಉಲ್ಲಂಘಿಸುವ ನಿರ್ದಿಷ್ಟ ಮಾಹಿತಿ ಅಥವಾ ವಿಷಯವನ್ನು ತೆಗೆದುಹಾಕುವಂತೆ ಹೇಳಬಹುದು. ಆದರೆ, ಆತನ ಖಾತೆಯಲ್ಲಿನ ಹೆಚ್ಚಿನ ವಿಷಯಗಳು/ಪೋಸ್ಟ್‌ಗಳು/ಟ್ವೀಟ್‌ಗಳು ಕಾನೂನು ಬಾಹಿರ ಎಂದನಿಸಿದಲ್ಲಿ ಮಾತ್ರವೇ ಸ್ವತಃ ಸಾಮಾಜಿಕ ಮಾಧ್ಯಮ ಕಂಪನಿಯು ಸಂಪೂರ್ಣ ಮಾಹಿತಿಯನ್ನು ತೆಗೆದುಹಾಕುವ ಅಥವಾ ಸಂಪೂರ್ಣ ಖಾತೆಯನ್ನು ಅಮಾನತುಗೊಳಿಸುವ ತೀವ್ರ ಹಂತವನ್ನು ತೆಗೆದುಕೊಳ್ಳಬಹುದು.

ಖಾತೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಭಾರತದ ಸಂವಿಧಾನದ 14, 19 ಮತ್ತು 21 ನೇ ವಿಧಿಯ ಸ್ಫೂರ್ತಿಗೆ ವಿರುದ್ಧವಾಗಿದೆ ಮತ್ತು ಕೆಲವು ಭಾಗ ಅಥವಾ ವಿಷಯವು ಕಾನೂನುಬಾಹಿರವಾಗಿದ್ದರೆ, ವೇದಿಕೆಯು ಅಂತಹ ಆಪಾದಿತ ಮಾಹಿತಿಯನ್ನು ಮಾತ್ರ ತೆಗೆದುಹಾಕುವ ಪ್ರಮಾಣಾನುಗುಣ ಕ್ರಮವನ್ನು ತೆಗೆದುಕೊಳ್ಳಬಹುದು ಮತ್ತು ಆದರೆ, ಬಳಕೆದಾರನ ಖಾತೆ.ಸಂಪೂರ್ಣವಾಗಿ ಅಮಾನತುಗೊಳಿಸುವಂತಿಲ್ಲ ಎಂದು ಹೇಳಿದೆ.

ಸಿಎಂ ಬಸವರಾಜ್‌ ಬೊಮ್ಮಾಯಿ ಟ್ವೀಟರ್‌ ಖಾತೆ ಹ್ಯಾಕ್?‌

Latest Videos

ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳನ್ನು ಅಧೀನಗೊಳಿಸಲು ಮತ್ತು ಬದಲಿಸಲು ಗಮನಾರ್ಹವಾದ ಸಾಮಾಜಿಕ ಮಾಧ್ಯಮದ ಮಧ್ಯವರ್ತಿಯು ಜವಾಬ್ದಾರನಾಗಿರಬೇಕು, ಇಲ್ಲದಿದ್ದರೆ ಅದು "ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಭೀಕರ ಪರಿಣಾಮಗಳನ್ನು" ಉಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ.
“ಪ್ಲಾಟ್‌ಫಾರ್ಮ್‌ಗಳು ನಾಗರಿಕರ ಮೂಲಭೂತ ಹಕ್ಕುಗಳನ್ನು ಗೌರವಿಸಬೇಕು ಮತ್ತು ಖಾತೆಯನ್ನು ಸ್ವತಃ ತೆಗೆದುಹಾಕಬಾರದು ಅಥವಾ ಎಲ್ಲಾ ಸಂದರ್ಭಗಳಲ್ಲಿ ಬಳಕೆದಾರರ ಖಾತೆಯನ್ನು ಸಂಪೂರ್ಣವಾಗಿ ಅಮಾನತುಗೊಳಿಸಬಾರದು. ಸಂಪೂರ್ಣ ಮಾಹಿತಿ ಅಥವಾ ಬಳಕೆದಾರರ ಖಾತೆಯನ್ನು ತೆಗೆದುಹಾಕುವುದು ಕೊನೆಯ ಅಸ್ತ್ರವಾಗಿರಬೇಕು. ವೇದಿಕೆಯು ಎಲ್ಲಾ ಸಮಯದಲ್ಲೂ ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸುವ ಮೂಲಕ ಬಳಕೆದಾರರ ಮೂಲಭೂತ ಹಕ್ಕುಗಳನ್ನು ಕಾಪಾಡಲು ಪ್ರಯತ್ನಿಸಬೇಕು ಮತ್ತು ಬಳಕೆದಾರರಿಗೆ ಸಮಂಜಸವಾದ ಸಮಯ ಮತ್ತು ಅವಕಾಶವನ್ನು ನೀಡುವುದು ಅವರ ನಿಲುವಾಗಬೇಕು,” ಎಂದು ವಕೀಲ ಮನೀಶ್ ಮೋಹನ್ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸಲ್ಲಿಸಿದ ಅಫಿಡವಿಟ್ ನಲ್ಲಿ ಹೇಳಿದೆ.

ರಾಜಸ್ಥಾನ ರಾಯಲ್ಸ್ ತಂಡದ ಟ್ವಿಟರ್ ಖಾತೆ ಹ್ಯಾಕ್ ಮಾಡಿ ಕರಾಮತ್ತು ತೋರಿದ Yuzvendra Chahal !

ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಟ್ವಿಟರ್ ಮತ್ತು ಮೆಟಾ (ಇನ್‌ಸ್ಟಾಗ್ರಾಮ್‌ನ ಮೂಲ ಕಂಪನಿ) ತನ್ನ ಖಾತೆಗಳನ್ನು ನಿಷ್ಕ್ರಿಯಗೊಳಿಸಲು/ಅಮಾನತುಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ರಾಜಕೀಯ ವಿಡಂಬನೆ ಹ್ಯಾಂಡಲ್, ವೋಕ್‌ಫ್ಲಿಕ್ಸ್‌ನ (Wokeflix) ಮನವಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ನ್ಯಾಯಮೂರ್ತಿ ವಿ ಕಾಮೇಶ್ವರ್ ರಾವ್ ಅವರು ಮಾರ್ಚ್ 8 ರಂದು ವೋಕ್‌ಫ್ಲಿಕ್ಸ್‌ನ ಅರ್ಜಿಯ ಕುರಿತು ಟ್ವಿಟರ್, ಮೆಟಾ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ್ದರು. ವೋಕ್‌ಫ್ಲಿಕ್ಸ್‌ನ ಮನವಿಯ ಜೊತೆಗೆ, ಸಾಮಾಜಿಕ ಮಾಧ್ಯಮ ಕಂಪನಿಗಳಿಂದ ಖಾತೆಗಳ ಮೇಲಿನ ಅಂತಹ ನಿಷೇಧಕ್ಕೆ ಸಂಬಂಧಿಸಿದ ಸುಮಾರು ಅರ್ಧ ಡಜನ್ ಪ್ರಕರಣಗಳನ್ನು ಹೈಕೋರ್ಟ್ ಪುಸ್ಕರಿಸಿದೆ. ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಬುಧವಾರ ವಿಚಾರಣೆ ನಡೆಸಿದ ನಂತರ ಅಂತಿಮ ವಿಲೇವಾರಿಗಾಗಿ ಏಪ್ರಿಲ್ 13 ಕ್ಕೆ ವಿಚಾರಣೆಯನ್ನು ಮುಂದೂಡಿದಿದ್ದಾರೆ.

click me!