ಬೆಂಕಿ ನಂದಿಸೋದು ಬಿಟ್ಟು, ಅಂಜಲಿ ತೆಂಡುಲ್ಕರ್ ಗೆ ಹುಲಿ ತೋರಿಸ್ತಿದ್ದ ಸರಿಸ್ಕಾ ವಲಯದ ನಿರ್ದೇಶಕ!

By Suvarna NewsFirst Published Mar 30, 2022, 5:40 PM IST
Highlights

ಸರಿಸ್ಕಾ ಹುಲಿ ರಕ್ಷಿತಾರಣ್ಯದಲ್ಲಿ ಅಂಜಲಿ ತೆಂಡುಲ್ಕರ್ ಸಫಾರಿ

ಸರಿಸ್ಕಾ ಹುಲಿ ರಕ್ಷಿತಾರಣ್ಯದಲ್ಲಿ ಭೀಕರ ಬೆಂಕಿ

ಕಳೆದ ಎರಡು ದಿನಗಳಿಂದ ಬೆಂಕಿಯ ರುದ್ರಾವತಾರ, ಇಂದು ನಿಯಂತ್ರಣಕ್ಕೆ

ಅಲ್ವಾರ್ (ಮಾ. 30): ರಾಜಸ್ಥಾನದ (Rajasthan) ಸರಿಸ್ಕಾ ಹುಲಿ ಸಂರಕ್ಷಿತ ಅರಣ್ಯದಲ್ಲಿ (Sariska Tiger Reserve) ಸಂಭವಿಸಿದ ಭೀಕರ ಬೆಂಕಿಯನ್ನು  ಸಂಪೂರ್ಣವಾಗಿ ನಿಯಂತ್ರಿಸಲಾಗಿಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ, ಬೆಂಕಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಸಮಯದಲ್ಲಿ ಒಂದು ಚಿತ್ರವು ತುಂಬಾ ವೈರಲ್ ಆಗುತ್ತಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (Sachin Tendulkar) ಅವರ ಪತ್ನಿ ಅಂಜಲಿ ತೆಂಡುಲ್ಕರ್ (Anjali Tendulkar) ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿಗೆ ಹೋಗಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದು ಬೆಂಕಿಯ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಮೂಲಗಳ ವರದಿಯ ಪ್ರಕಾರ, ಮಾರ್ಚ್ 27 ರಂದು ಅರಣ್ಯಕ್ಕೆ ಬೆಂಕಿ ತಗುಲಿತ್ತು. ಸಚಿನ್ ತೆಂಡುಲ್ಕರ್ ಅವರ ಪತ್ನಿ ಅಂಜಲಿ ತೆಂಡುಲ್ಕರ್, ಇದೇ ಸಮಯದಲ್ಲಿ ಹುಲಿ ರಕ್ಷಿತಾರಣದ್ಯದಲ್ಲಿ (Tiger Reserve) ಸಫಾರಿಗೆ ತೆರಳಿದ್ದರು. ಅರಣ್ಯಕ್ಕೆ ಬೆಂಕಿ ಬಿದ್ದು, ಸುತ್ತಲಿನ ಪ್ರದೇಶವನ್ನು ಆವರಿಸುತ್ತಿದ ನಡುವೆಯೂ ಇದನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳುವ ಬದಲು  ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಆರ್.ಎನ್.ಮೀನಾ (Sariska Tiger Reserve Director RN Meena), ಅಂಜಲಿ ತೆಂಡುಲ್ಕರ್ ಅವರನ್ನು ಸಫಾರಿಗೆ ಕೊಂಡೊಯ್ದಿದ್ದರು ಎನ್ನುವ ಮಾಹಿತಿ ಬಹಿರಂಗವಾಗಿದೆ. ಅಂಜಲಿ ತೆಂಡುಲ್ಕರ್ ಅವರನ್ನು ಸ್ಥಳದಿಂದ ಕಳುಹಿಸಿಕೊಟ್ಟ ನಂತರವೇ ಬೆಂಕಿ ನಿಯಂತ್ರಣಕ್ಕೆ ಧಾವಿಸಿದ್ದರು ಎಂದು ವರದಿಯಾಗಿದೆ. 

ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದ ಅಕ್ಬರ್‌ಪುರ ವ್ಯಾಪ್ತಿಯ ( Akbarpur range ) ಬಲೇಟಾ-ಪೃಥ್ವಿಪುರ ನಾಕಾದಲ್ಲಿ ( Baleta-Prithvipura Naka ) ಮೂರು ದಿನಗಳಲ್ಲಿ 20 ಕಿಮೀ ಅರಣ್ಯ ಪ್ರದೇಶವನ್ನು ಸುಟ್ಟು ಕರಕಲಾಗಿದೆ. ಅಂಜಲಿ ತೆಂಡುಲ್ಕರ್ ಅವರು ಮಾರ್ಚ್ 27 ರಂದು (ಭಾನುವಾರ) ಸರಿಸ್ಕಾಗೆ ಬಂದಿದ್ದರು. ಅಂಜಲು ತೆಂಡುಲ್ಕರ್ ಅವರ ಸಫಾರಿ ಆರಂಭವಾದ 15 ನಿಮಿಷಕ್ಕೆ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿತ್ತು. ಈ ಹಂತದಲ್ಲಿ ಅವರನ್ನು ಅರಣ್ಯದಿಂದ ಸೂಕ್ತ ಭದ್ರತೆಯೊಂದಿಗೆ ಹೊರ ಕಳಿಸಲು ಎಲ್ಲಾ ಅಧಿಕಾರಿಗಳು ಮತ್ತು ನಿರ್ದೇಶಕರು ವಿಐಪಿ ಕರ್ತವ್ಯದಲ್ಲಿ ತೊಡಗಿದ್ದರು.

Sariska Reserve Fire: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಜೊತೆ ಮೋದಿ ಮಾತು, ಸಹಾಯದ ಭರವಸೆ ಕೊಟ್ಟ ಪ್ರಧಾನ

ಬೆಂಕಿ ತಗುಲಿರುವ ಬಗ್ಗೆ ಮಾಹಿತಿ ಸಿಕ್ಕ ಬಳಿಕವೂ ಎಲ್ಲಾ ಅಧಿಕಾರಿಗಳು ಬೆಂಕಿ ನಂದಿಸುವ ಬದಲು ಅಂಜಲಿ ತೆಂಡುಲ್ಕರ್ ಅವರಿಗೆ ಹುಲಿ ತೋರಿಸಲು ಕಾಡಿಗೆ ತೆರಳಿದ್ದರು. ಈ ಕುರಿತು ಪ್ರಾದೇಶಿಕ ನಿರ್ದೇಶಕ ಆರ್.ಎನ್.ಮೀನಾ ಅವರನ್ನು ಕೇಳಿದಾಗ, ಬೆಂಕಿ ನಂದಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದ್ದು, ರೇಂಜರ್‌ಗಳೂ ಸ್ಥಳದಲ್ಲಿಯೇ ಇದ್ದಾರೆ ಎಂದು ತಿಳಿಸಿದರು.
ಬೆಂಕಿ ಬಿದ್ದಾಗ ನಿರ್ದೇಶಕರು ಬೆಂಕಿ ನಂದಿಸಲು ಹೋಗುವುದಿಲ್ಲ ಎಂದರು. ವಿಐಪಿ ಭದ್ರತೆ ಸಂಬಂಧಿಸಿದಂತೆ, ಅಂಜಲಿ ತೆಂಡುಲ್ಕರ್ ಅವರಿಗೆ ಪ್ರೋಟೋಕಾಲ್ ಅಡಿಯಲ್ಲಿ ಸೇವೆಗಳನ್ನು ಒದಗಿಸಲಾಗಿದೆ. ಇದನ್ನು ವರದಿ ಮಾಡುವ ವೇಳೆ ಸರಿಸ್ಕಾ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿರಲಿಲ್ಲ.

ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!

ಬೆಂಕಿಯಿಂದಾಗಿ ಸರಿಸ್ಕಾ ಪ್ರದೇಶದಲ್ಲಿ ನೆಲೆಸಿರುವ ಹುಲಿಗಳು ಬೆಟ್ಟದಿಂದ ಇಳಿದು ಗದ್ದೆಗೆ ಬಂದಿದ್ದು, ಇದರಿಂದ ಅವು ಸುರಕ್ಷಿತವಾಗಿವೆ. ಅರಣ್ಯಗಳಲ್ಲಿ ವೇಗವಾಗಿ ಹರಡುತ್ತಿರುವ ಬೆಂಕಿಯನ್ನು ನಿಯಂತ್ರಿಸಲು ಭಾರತೀಯ ವಾಯುಪಡೆಯು ( Indian Air Force ) ಮುಂದಾಳತ್ವ ವಹಿಸಿದ್ದು, ಎರಡು ಹೆಲಿಕಾಪ್ಟರ್‌ಗಳ ( helicopters ) ಮೂಲಕ ಅದನ್ನು ನಂದಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದು ಹೆಲಿಕಾಪ್ಟರ್‌ನಲ್ಲಿ ಏಕಕಾಲಕ್ಕೆ 4000 ಲೀಟರ್ ನೀರು ಸಿಂಪಡಿಸಲಾಗುತ್ತಿದ್ದು, ದಿನವಿಡೀ 11 ಸುತ್ತಿನ ನೀರು ಚಿಮುಕಿಸುವ ಕೆಲಸ ನಡೆದಿದೆ.

click me!