ಹಾವನ್ನು ಹಿಡಿದಾಗ ಹೊರಗೆ ಬರೋದು ವಿಷವಲ್ಲ ಮತ್ತೇನು?

Published : Feb 28, 2025, 09:34 AM ISTUpdated : Feb 28, 2025, 10:19 AM IST
 ಹಾವನ್ನು ಹಿಡಿದಾಗ ಹೊರಗೆ ಬರೋದು ವಿಷವಲ್ಲ ಮತ್ತೇನು?

ಸಾರಾಂಶ

ಹಾವು ಕಂಡಾಗ ತಜ್ಞರನ್ನು ಕರೆಯುವುದು ಸೂಕ್ತ. ಹಾವು ಬಂಧಿಯಾದಾಗ ವಿಷವನ್ನಲ್ಲ, ಮಲವನ್ನು ವಿಸರ್ಜಿಸುತ್ತದೆ. ಹಾವು ಕ್ಲೋಕಾ ಮೂಲಕ ಮಲವಿಸರ್ಜನೆ, ಸಂತಾನೋತ್ಪತ್ತಿ ಮಾಡುತ್ತದೆ. ಅದರ ಮಲ ಕಟುವಾಸನೆಯಿಂದ ಕೂಡಿದ್ದು, ಮೂತ್ರವು ಪೇಸ್ಟ್‌ನಂತಿರುತ್ತದೆ. ಬೇಸಿಗೆಯಲ್ಲಿ ನಾಗರಹಾವು, ರಸೆಲ್ ವೈಪರ್ ಹೆಚ್ಚಾಗಿ ಕಾಣಸಿಗುತ್ತವೆ. ಹಾವು ಕಚ್ಚಿದರೆ ಭಯಪಡದೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ದೊರೆತರೆ ಬದುಕುವ ಸಾಧ್ಯತೆಗಳಿವೆ.

ಹಾವು (Snake) ಕಂಡಾಗ ಅದನ್ನು ಹಿಡಿಯೋ ಸಾಹಸಕ್ಕೆ ಹೋಗದೆ, ಜೀವ ಉಳಿಸಿಕೊಳ್ಳಲು ಜನರು ಎದ್ನೋ ಬಿದ್ನೋ ಅಂತ ಓಡ್ತಾರೆ. ತಜ್ಞರು ಮಾತ್ರ ಹಾವನ್ನು ಹಿಡಿದು ಸುರಕ್ಷಿತ ಜಾಗಕ್ಕೆ ಬಿಡ್ತಾರೆ. ಭಾರತ (India) ಸೇರಿದಂತೆ ವಿಶ್ವದಲ್ಲಿ ಸಾಕಷ್ಟು ಅಪಾಯಕಾರಿ ಹಾವುಗಳಿವೆ. ಕೆಲ ಹಾವು ಕಚ್ಚಿದ್ರೆ ಮನುಷ್ಯನನ್ನು ಬದುಕಿಸೋದು ಕಷ್ಟ. ಹಾಗಂತ ಎಲ್ಲ ಹಾವುಗಳು ವಿಷಕಾರಿಲ್ಲ. ಮನೆ ಅಥವಾ ಸಾರ್ವಜನಿಕ ಪ್ರದೇಶದಲ್ಲಿ ಹಾವು ಕಾಣಿಸಿಕೊಂಡಾಗ ನಾವು ತಜ್ಞರನ್ನು ಕರೆಸ್ತೇವೆ. ಅವರು ಉಪಾಯವಾಗಿ ಹಾವನ್ನು ಹಿಡಿತಾರೆ. ಹಾವನ್ನು ಹಿಡಿದ ಸಮಯದಲ್ಲಿ ಹಾವು ಏನು ಮಾಡುತ್ತೆ? ದೇಹದಿಂದ ಯಾವುದು ಹೊರಗೆ ಬರುತ್ತೆ ಅಂತ ನಮ್ಮನ್ನು ಪ್ರಶ್ನೆ ಕೇಳಿದ್ರೆ ನಾವು ವಿಷ ಅಂತೇವೆ.

ಹಾವೇ ವಿಷ ಆಗಿರುವ ಕಾರಣ, ಅದನ್ನು ಯಾರಾದ್ರೂ ಬಂಧಿಸಿದಾಗ ರಕ್ಷಣೆಗಾಗಿ ಅದು ನಮ್ಮ ಮೈಮೇಲೆ ಹಾರ್ಬಹುದು. ಜೊತೆಗೆ ವಿಷವನ್ನು ಹೊರಗೆ ಹಾಕುತ್ತೆ ಅನ್ನೋದು ನಮ್ಮ ನಿಮ್ಮೆಲ್ಲರ ನಂಬಿಕೆ. ಆದ್ರೆ ತಜ್ಞರು ಮಾತ್ರ ಇದನ್ನು ಸುಳ್ಳು ಎಂದಿದ್ದಾರೆ. ತಜ್ಞರ ಪ್ರಕಾರ, ಹಾವು ಬಂಧಿಯಾದಾಗ ವಿಷದ ಬದಲು ಮಲ (feces)ವನ್ನು ಹೊರಗೆ ಹಾಕುತ್ತದೆ.

ಸಾಯೋಕೆ ಹಾವಿನ ಇಷ್ಟು ವಿಷ ಸಾಕು, ಯಾವ ಹಾವು ಡೇಂಜರ್‌ ?

ಹಾವುಗಳಿಗೆ ಕ್ಲೋಕಾ (cloaca) ಇರುತ್ತದೆ. ಇದು ಅದರ ದೇಹದ ಒಂದು ಭಾಗ. ಇದನ್ನು ಹಾವು, ಮಲವಿಸರ್ಜನೆ, ಸಂತಾನೋತ್ಪತ್ತಿ ಮತ್ತು ಮೊಟ್ಟೆಗಳನ್ನು ಇಡಲು ಬಳಸುತ್ತದೆ. ಈ ಅಂಗವು ಹಾವಿನ ಬಾಲದ ಕೆಳಗೆ ಒಂದು ರೇಖೆಯಂತೆ ವಿಸ್ತರಿಸುತ್ತದೆ.  ಹಾವಿಗೂ ಮನುಷ್ಯರಂತೆ,  ಮಲವು ಅದರ ಜೀರ್ಣಾಂಗ ವ್ಯವಸ್ಥೆಯ ಮೂಲಕ ರೂಪುಗೊಳ್ಳುತ್ತದೆ. ಹಾವಿನ ಮಲ ಸಾಮಾನ್ಯವಾಗಿ ಗಾಢ ಬಣ್ಣ, ಘನ ಮತ್ತು ಕೊಳವೆಯಾಕಾರದಲ್ಲಿರುತ್ತದೆ ಎಂದು ವಿಜ್ಞಾನಿಗಳು ಹೇಳ್ತಾರೆ. 

ಹಾವು ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ (urine) ಮಾಡುತ್ತದೆ. ಹಾವಿನ ಮೂತ್ರ ಸಾರಜನಕದಿಂದ ಸಮೃದ್ಧವಾಗಿದೆ. ಹಾವಿನ ಮೂತ್ರ ಪೇಸ್ಟ್‌ನಂತಿರುತ್ತದೆ. ಹಾಗಾಗಿಯೇ ಅದನ್ನು ಯುರೇಟ್ಸ್ ಎಂದು ಕರೆಯಲಾಗುತ್ತದೆ. ಹಾವಿನ ಮಲ ತುಂಬಾ ಕಟುವಾದ ವಾಸನೆಯನ್ನು ಹೊಂದಿರುತ್ತದೆ. ಅದ್ರ ವಾಸನೆ ತೆಗೆದುಕೊಳ್ಳೋದು ತುಂಬಾ ಕಷ್ಟ. ಸಾಮಾನ್ಯವಾಗಿ ಇಲಿ ಹಾಗೂ ಮುಂಗುಸಿಯನ್ನು ಓಡಿಸಲು ಹಾವಿನ ಮಲವನ್ನು ಬಳಸಲಾಗುತ್ತದೆ ಅಂದ್ರೆ ನಿಮಗೆ ಅಚ್ಚರಿ ಆಗ್ಬಹುದು, ಹಾವಿಗೆ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದೆ. ಹಾವು ದೇಹದಲ್ಲಿರುವ ಶಕ್ತಿಯುತ ಯೂರಿಕ್ ಆಮ್ಲವನ್ನು ಜೀರ್ಣಕ್ರಿಯೆಗಾಗಿ ಬಳಸಿಕೊಳ್ಳುತ್ತದೆ.

ಬೇಸಿಗೆ ಬರ್ತಿದೆ ಎಚ್ಚರ : ಹಾವುಗಳ ಶೀತ ನಿದ್ರೆ ಅವಧಿ ಮುಗಿಸಿದೆ. ಚಳಿಗಾಲದಲ್ಲಿ ಬಿಲ ಸೇರಿದ್ದ ಹಾವುಗಳು ಬೇಸಿಗೆಯಲ್ಲಿ ಹೊರಗೆ ಬರುತ್ತವೆ. ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಹೆಚ್ಚಾಗಿ ನಾಗರಹಾವು (cobra) ಮತ್ತು ರಸೆಲ್ ವೈಪರ್ (Russell viper) ಜಾತಿಯ ಹಾವುಗಳು ಕಂಡುಬರುತ್ತವೆ. ಈ ಎರಡೂ ಹಾವುಗಳು ಭಾರತದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಅಗ್ರ ಸ್ಥಾನದಲ್ಲಿವೆ. ಈ ಹಾವಿನ ಜೊತೆ ಕೆಲ ವಿಷಕಾರಿಯಲ್ಲದ ಹಾವುಗಳು ಮಾರ್ಚ್-ಏಪ್ರಿಲ್‌ನಲ್ಲಿ ಜನರ ಸಂಪರ್ಕಕ್ಕೆ ಬರುತ್ತವೆ. ಈ ಹಾವುಗಳು ಮನುಷ್ಯನಿಗೆ ಕಚ್ಚಿದ್ರೆ ಮನುಷ್ಯ ವಿಷದ ಬದಲು ಭಯದಿಂದ ಸಾವನ್ನಪ್ಪುತ್ತಾನೆ ಎಂದು ತಜ್ಞರು ಹೇಳಿದ್ದಾರೆ. 

ಭಾರತದ ಈ ರಾಜ್ಯದಲ್ಲಿ ಹಾವುಗಳೇ ಇಲ್ಲ, ಇದು ಭಾರತದ ಅತ್ಯಂತ ಸುಂದರ ತಾಣ

ಅದೇ ವಿಷಯಕಾರಿ ಹಾವು ಕಚ್ಚಿದ್ರೆ ಮನುಷ್ಯ 8 ಗಂಟೆಗಳ ಕಾಲ ಜೀವಂತವಿರುವ ಸಾಧ್ಯತೆ ಇದೆ. ಜನರು ಹಾವು ಕಚ್ಚುತ್ತಿದ್ದಂತೆ ಆಘಾತಕ್ಕೊಳಗಾಗಿ ಸಾವನ್ನಪ್ಪುತ್ತಾರೆ. ಎಂಟು ಗಂಟೆಯೊಳಗೆ ಸೂಕ್ತ ಚಿಕಿತ್ಸೆ ಸಿಕ್ಕಿದ್ರೆ ಮನುಷ್ಯ ಬದುಕುಳಿಯುತ್ತಾನೆ. ಭಾರತದಲ್ಲಿ ಪ್ರತಿ ವರ್ಷ ಸಾವಿರಾರು ಮಂದಿ ಹಾವು ಕಚ್ಚಿ ಸಾವನ್ನಪ್ಪುತ್ತಾರೆ. ಅನೇಕರು ಹೃದಯಾಘಾತಕ್ಕೊಳಗಾದ್ರೆ ಮತ್ತೆ ಕೆಲವರು ಚಿಕಿತ್ಸೆ ಪಡೆಯದೆ ಮೂಢನಂಬಿಕೆಗೆ ಬಲಿಯಾಗ್ತಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ