ಹಿಂದಿಯಿಂದ ಉತ್ತರದ 25 ಭಾಷೆಗಳು ನಾಶ: ಸ್ಟಾಲಿನ್ ಆಕ್ರೋಶ

Published : Feb 28, 2025, 07:14 AM ISTUpdated : Feb 28, 2025, 07:30 AM IST
ಹಿಂದಿಯಿಂದ ಉತ್ತರದ 25 ಭಾಷೆಗಳು ನಾಶ: ಸ್ಟಾಲಿನ್ ಆಕ್ರೋಶ

ಸಾರಾಂಶ

ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಹಿಂದಿ ಹೇರಿಕೆ ವಿರೋಧಿಸುವುದರ ಜೊತೆ ಇದೀಗ ಸಂಸ್ಕೃತದ ವಿರುದ್ಧವೂ ಕಿಡಿಕಾರಿದ್ದಾರೆ. ಹಿಂದಿ ಮುಖವಾಡವಿದ್ದಂತೆ, ಅದರ ಹಿಂದಿರುವ ಮುಖ ಸಂಸ್ಕೃತ ಎಂದು ಹೇಳಿದ್ದಾರೆ. ಹಲವು ಭಾಷೆಗಳು ಹಿಂದಿ ಮತ್ತು ಸಂಸ್ಕೃತದ ಪ್ರಾಬಲ್ಯದಿಂದ ನಾಶವಾಗಿವೆ ಎಂದು ಅವರು ಆರೋಪಿಸಿದ್ದಾರೆ.

ಚೆನ್ನೈ: ಇತ್ತೀಚೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಭಾಗವಾಗಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ, ಹಿಂದಿ ಭಾಷೆ ಕಲಿಕೆ ಹಾಗೂ ಅಳವಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಇದೀಗ ಸಂಸ್ಕೃತದ ವಿರುದ್ಧವೂ ಅದೇ ನಿಲುವನ್ನು ತಾಳಿ ಕಿಡಿಕಾರಿದ್ದಾರೆ.

ಹಿಂದಿಯಿಂದ 25 ಭಾಷೆಗಳ ನಾಶ

ಹಿಂದಿ ಮುಖವಾಡವಿದ್ದಂತೆ. ಅದರ ಹಿಂದಿರುವ ಮುಖ ಸಂಸ್ಕೃತ’ ಎಂದು ಗುರುವಾರ ಹೇಳಿಕೆ ನೀಡಿರುವ ಅವರು, ‘ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶದಂತಹ ಉತ್ತರದ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಮೈಥಿಲಿ, ಬೃಜ್‌ಭಾಷಾ, ಬುಂದೇಲ್‌ಖಂಡಿ, ಅವಧಿಗಳಂತಹ 25 ಭಾಷೆಗಳು ಹಿಂದಿ ಹಾಗೂ ಸಂಸ್ಕೃತದ ಪ್ರಾಬಲ್ಯದಿಂದಾಗಿ ನಾಶಗೊಂಡಿವೆ. ವಿವಿಧ ದ್ರಾವಿಡ ಚಳವಳಿಗಳ ಮೂಲಕ ಜಾಗೃತಿ ಮೂಡಿಸಿದ್ದರಿಂದಾಗಿ ತಮಿಳು ಹಾಗೂ ಅದರ ಸಂಸ್ಕೃತಿಯನ್ನು ಉಳಿಸಲು ಸಾಧ್ಯವಾಯಿತು. ನಾವು ಹಿಂದಿ ಹೇರಿಕೆಗೆ ಅನುವು ಮಾಡಿಕೊಡುವುದಿಲ್ಲ’ ಎಂದಿದ್ದಾರೆ.

ಉರ್ದು ಬದಲಿಗೆ ಸಂಸ್ಕೃತ ಶಿಕ್ಷಕರ ನೇಮಕ
ತ್ರಿಭಾಷಾ ಸೂತ್ರದ ಬಗ್ಗೆ ಮಾತನಾಡಿದ ಸ್ಟಾಲಿನ್‌, ‘ಕೆಲ ರಾಜ್ಯಗಳಲ್ಲಿ ಕೇವಲ ಸಂಸ್ಕೃತವನ್ನು ಉತ್ತೇಜಿಸಲಾಗುತ್ತಿದೆ. ಬಿಜೆಪಿ ಆಳ್ವಿಕೆಯ ರಾಜಸ್ಥಾನದಲ್ಲಿ ಉರ್ದು ಬದಲಿಗೆ ಸಂಸ್ಕೃತ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ತಮಿಳುನಾಡಿನಲ್ಲಿ ಈ ಸೂತ್ರವನ್ನು ಅಳವಡಿಸಿಕೊಂಡರೆ ಅದರಿಂದ ಮಾತೃಭಾಷೆ ಕಡೆಗಣಿಸಲ್ಪಡುತ್ತದೆ ಹಾಗೂ ಭವಿಷ್ಯದಲ್ಲಿ ಸಂಸ್ಕೃತೀಕರಣವಾಗುತ್ತದೆ’ ಎಂದರು.

ಬಿಜೆಪಿ ಪ್ರತಿಕ್ರಿಯೆ:
ಸ್ಟಾಲಿನ್‌ ಅವರ ಹಿಂದಿ ಹಾಗೂ ಸಂಸ್ಕೃತ ಹೇರಿಕೆ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿರುವ ಬಿಜೆಪಿ, ಅದನ್ನು ‘ಕ್ಷುಲ್ಲಕ’ ಎಂದು ಕರೆದಿದೆ.

ಮುಖ್ಯಮಂತ್ರಿ ಮಕ್ಕಳು ಹಿಂದಿ ಓದ್ಬಹುದು, ನಮ್ಮ ಮಕ್ಕಳಿಗೆ ಯಾಕೆ ಓದಬಾರದು? ಅಣ್ಣಾಮಲೈ ಪ್ರಶ್ನೆ

'ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ'; ಹಿಂದಿ ಹೇರಲು ಹೊರಟವರಿಗೆ ಅಶ್ವಿನ್ ಚಾಟಿ ಏಟು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು