
ಕಿರುತೆರೆ ನಟಿ ಮತ್ತು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ದೇಶಕ್ಕಾಗಿ ಬಹು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಅವರಿಗೆ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. 'ಸಾಲಿಡಾರಿಟಿ ವಿತ್ ಇಂಡಿಯನ್ ಆರ್ಮ್ಡ್ ಫೋರ್ಸಸ್' ಕಾರ್ಯಕ್ರಮದಲ್ಲಿ ಸ್ಮೃತಿ ಇರಾನಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮಾಜಿ ಸಚಿವೆ, ತಮ್ಮ ಪಿಂಚಣಿಯನ್ನು ಹಾಗೂ ಸರ್ಕಾರದಿಂದ ತಮಗೆ ಸಿಗುತ್ತಿರುವ ಸವಲತ್ತುಗಳನ್ನು ಭಾರತದ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. 'ಭಾರತದ ನಾಗರಿಕರು ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ'ದ ಕಾರ್ಯತಂತ್ರದ ಸಲಹೆಗಾರರೂ ಆಗಿರುವ ಸ್ಮೃಇ ಇರಾನಿ, ತಮ್ಮ ಪಿಂಚಣಿಯನ್ನು ಭಾರತದ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡಲು ನಿರ್ಧರಿಸುವುದಾಗಿ ಹೇಳಿದರು. ಕಳೆದ ಒಂದು ವರ್ಷದಿಂದ, ಮಾಜಿ ಸಂಸದನಾಗಿ, ನಾನು ಪಿಂಚಣಿ ಪಡೆದಿಲ್ಲ ಅಥವಾ ಯಾವುದೇ ಸೌಲಭ್ಯವನ್ನು ಪಡೆದಿಲ್ಲ. ಇದು ಭಾರತದ ಖಜಾನೆಯಿಂದ ಬಂದ ಹಣ, ಇದನ್ನು ನಾನು ಇಂದು ರಾಷ್ಟ್ರೀಯ ರಕ್ಷಣಾ ನಿಧಿಗೆ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವುದರಿಂದ ಟರ್ಕಿ ಮತ್ತು ಅಜೆರ್ಬೈಜಾನ್‌ನೊಂದಿಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಕೊನೆಗೊಳಿಸುವ ಅಖಿಲ ಭಾರತ ವ್ಯಾಪಾರಿಗಳ ನಿರ್ಧಾರವನ್ನು ಸ್ಮೃತಿ ಇರಾನಿ ಕೂಡ ಶ್ಲಾಘಿಸಿದ್ದಾರೆ. ನಿನ್ನೆ ಇವರ ನೇತೃತ್ವದಲ್ಲಿ ಸಭೆ ನಡೆದಿತ್ತು. ಈ ಬಗ್ಗೆ ಹೇಳಿರುವ ಸ್ಮೃತಿ, ದೇಶದ ಗಡಿಗಳನ್ನು ರಕ್ಷಿಸುವ ತನ್ನ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರನ್ನು ಭಾರತ ಬೆಂಬಲಿಸುತ್ತದೆ ಎಂಬುದನ್ನು ಈ ಹೆಜ್ಜೆ ತೋರಿಸುತ್ತದೆ ಎಂದು ಅವರು ಹೇಳಿದರು.
ಪಾಕಿಗಳ ನಡುಗಿಸಿದ 'ಬ್ರಹ್ಮೋಸ್' ಹಿಂದಿನ ಶಕ್ತಿ ಇವರೇ ನೋಡಿ! ಹೆಸರಿನ ಹಿಂದಿದೆ ರೋಚಕ ಕಥೆ...
ಸ್ಮೃತಿ ಇರಾನಿ ತಮ್ಮ ಹೇಳಿಕೆಯಲ್ಲಿ, ಬಹಿಷ್ಕಾರದ ಮೂಲಕ, ವ್ಯಾಪಾರ ಸಂಸ್ಥೆಯು ಭಾರತೀಯ ಆರ್ಥಿಕತೆಯನ್ನು ಬಲಪಡಿಸಲು ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಇದು ಮೇಕ್ ಇನ್ ಇಂಡಿಯಾ ಕನಸನ್ನು ನನಸಾಗಿಸಲು ಸಮರ್ಪಿತವಾಗಿದೆ. ಇದರೊಂದಿಗೆ, ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ಸಣ್ಣ ವ್ಯಾಪಾರಿಗಳ ಪಾತ್ರವನ್ನು ಇರಾನಿ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಉದ್ವಿಗ್ನತೆಯ ಸಮಯದಲ್ಲಿ, ಟರ್ಕಿ ಮತ್ತು ಅಜೆರ್ಬೈಜಾನ್ ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದವು. ಅದರ ನಂತರ ಭಾರತವು ಇಬ್ಬರೊಂದಿಗಿನ ಎಲ್ಲಾ ಸಂಬಂಧಗಳನ್ನು ಕೊನೆಗೊಳಿಸಿದೆ. ವಿಶೇಷವೆಂದರೆ ಇತ್ತೀಚೆಗೆ ಈ ಎರಡೂ ದೇಶಗಳಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ಈ ಎರಡೂ ದೇಶಗಳ ಬೆಂಬಲ ಈಗ ಅವುಗಳ ಮೇಲೆ ನೇರ ಪರಿಣಾಮ ಬೀರಬಹುದು. ಬಹಿಷ್ಕಾರದ ಮೂಲಕ, ವ್ಯಾಪಾರಿಗಳ ಸಂಘವು ಭಾರತೀಯ ಆರ್ಥಿಕತೆಯನ್ನು ಬಲಪಡಿಸಲು ಕೊಡುಗೆ ನೀಡುತ್ತಿದೆ ಮತ್ತು ಮೇಕ್ ಇನ್ ಇಂಡಿಯಾ ಕನಸನ್ನು ನನಸಾಗಿಸಲು ಯತ್ನಿಸುತ್ತದೆ ಎಂದು ಸ್ಮೃತಿ ಇರಾನಿ ತಿಳಿಸಿದರು.
Operation Sindoor: ಟರ್ಕಿಗೂ ಭಾರತದಿಂದ 'ಆಪರೇಷನ್'! ಶತ ಕೋಟಿ ಡಾಲರ್ ಒಪ್ಪಂದಕ್ಕೆ ತಿಲಾಂಜಲಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ