ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆ ಫಲಿತಾಂಶ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮಿಶ್ರಫಲ ನೀಡಿದ್ದರೆ, ಜೆಡಿಎಸ್‌ಗೆ ತೀವ್ರ ಹಿನ್ನಡೆ ತಂದುಕೊಟ್ಟಿದೆ. ಅಗಲಿದ ಅಪ್ಪುಗೆ ಕುಟುಂಬಸ್ಥರು ಹಾಲು ತುಪ್ಪ ಶಾಸ್ತ್ರ ನೇರವೇರಿಸಿದ್ದಾರೆ. ಇತ್ತ ವಿದಾಯ ವಾಪಸ್ ಪಡೆದು ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವುದಾಗಿ ಯುವರಾಜ್ ಘೋಷಿಸಿದ್ದಾರೆ. ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ ಸೇರಿದಂತೆ ನವೆಂಬರ್ 2ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
Karnataka By election: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ BJP ಗೆಲುವಿಗೆ ಕಾರಣವಾಗಿದ್ದೇನು ?
undefined
ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ (BY Election) ಮತ ಎಣಿಕೆ ಇಂದು ನಡೆದಿದ್ದು, ರಾಜಕೀಯ ಪಕ್ಷಗಳ ನಾಯಕರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿತ್ತು. ಅಂತೂ ಭಾರೀ ಕುತೂಹಲದ ಮಧ್ಯೆ ಕಮಲ ಅರಳಿದ್ದು ಈಗ ಗೆಲುವಿಗೆ ಯಾವ್ಯಾವ ಅಂಶಗಳು ಕಾರಣವಾದವು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
Karnataka By election: ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು: ಇದು ಎಚ್ಚರಿಕೆ ಘಂಟೆ ಎಂದ ಸಿದ್ದರಾಮಯ್ಯ
ಹಾನಗಲ್‌ನಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದು, ಹೇಗಾದರೂ ಗೆಲ್ಲಬೇಕೆನ್ನುವ ಬಿಜೆಪಿ ನಿರೀಕ್ಷೆಯನ್ನು ಹುಸಿ ಮಾಡಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಾನಗಲ್ ಕ್ಷೇತ್ರದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಬೆಂಗಳೂರು; ಗಂಡನಿಗೆ ಪೋರ್ನ್ ಚಟ.. ರಾತ್ರಿಯಿಡಿ ಕಾಲ್ ಗರ್ಲ್ಸ್ ಜತೆ ಆಟ.. ಪತ್ನಿಗೆ ನಿತ್ಯ ಸಂಕಟ!
ಇದೊಂದು ವಿಚಿತ್ರ ಪ್ರಕರಣ. ಪೋರ್ನ್ ಅಡಿಕ್ಟ್ ಆದ ಗಂಡ ಕಾಲ್ ಗರ್ಲ್ಸ್ ಮೇಲೆಯೂ ಹಣ ಸುರಿಯಲು ಆರಂಭಿಸಿದ್ದ. ಬೇಸತ್ತ ಪತ್ನಿ ಇದೀಗ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
ಭಾರತ ಕ್ರಿಕೆಟ್ ತಂಡ (Indian Cricket Team) ತಾರಾ ಆಲ್ರೌಂಡರ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh) ಇದೀಗ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ನಿವೃತ್ತಿ (Retirement) ವಾಪಾಸ್ ಪಡೆದು, ಮೈದಾನಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ
ಅಗಲಿದ ಅಪ್ಪುಗೆ ಕುಟುಂಬಸ್ಥರಿಂದ ಹಾಲು ತುಪ್ಪ ಶಾಸ್ತ್ರ!
ಕನ್ನಡ ಚಿತ್ರರಂಗದ (Sandalwood) ಮುತ್ತು, ಯುವರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅಗಲಿ ಇಂದಿಗೆ 5 ದಿನಗಳು (November2, 2021) ಕಳೆದಿವೆ. ಅಪ್ಪು ಕುಟುಂಬಸ್ಥರು ಇಂದು ಕಂಠೀರವ ಸ್ಟುಡಿಯೋದಲ್ಲಿ (Kanteerava Studio) ಬೆಳಗ್ಗೆ 11.30ಕ್ಕೆ ಹಾಲು ತುಪ್ಪ ಕಾರ್ಯ ಮಾಡಿದ್ದಾರೆ. ಅಪ್ಪು ನೆಚ್ಚಿನ 50 ಬಗೆಯ ತಿನಿಸುಗಳನ್ನು ಪೂಜೆಗೆ ಇಡಲಾಗಿತ್ತು.
2022ರಿಂದ ಸ್ಪೇಸ್ ಎಕ್ಸ್‌ನಿಂದ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ
ಜಗತ್ತಿನ ನಂ.1 ಶ್ರೀಮಂತ ಎಲಾನ್ ಮಸ್ಕ್ (Elan Musk) ಮಾಲೀಕತ್ವದ ಸ್ಪೇಸ್ ಎಕ್ಸ್ (Spacex) ಅಧೀನ ಸಂಸ್ಥೆ ಸ್ಟಾರ್‌ಲಿಂಕ್ (Star Link) ಭಾರತದಲ್ಲಿ 2022ರ ಡಿಸೆಂಬರ್‌ನಿಂದ ಉಪಗ್ರಹ (satellite) ಆಧರಿತ ಬ್ರಾಡ್‌ಬ್ಯಾಂಡ್ (Broadband) ಸೇವೆ ಆರಂಭಿಸಲಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2 ಲಕ್ಷ ಸಕ್ರಿಯ ಟರ್ಮಿನಲ್‌ಗಳಿಗೆ ಭಾರತ (India) ಸರ್ಕಾರದಿಂದ ಅನುಮತಿ ಕೋರಿದೆ.
Tamilnadu ಸರ್ಕಾರದಿಂದ 6 ಸಾವಿರ ಕೋಟಿ ಚಿನ್ನದ ಸಾಲ ಮನ್ನಾ
: ತಮಿಳುನಾಡು (Tamilnadu) ಸಹಕಾರಿ ಸಂಘಗಳಲ್ಲಿ ಚಿನ್ನ ಅಡ ಇಟ್ಟು ಪಡೆದ ಸಾಲವನ್ನು (Loan) ಸರ್ಕಾರ ಮನ್ನಾ ಮಾಡಿದೆ. ಇದು ಅಂದಾಜು 6 ಸಾವಿರ ಕೋಟಿಯಷ್ಟಾಗುತ್ತಿದ್ದು, ಈ ಬಗ್ಗೆ ಸೋಮವಾರ ಸಿಎಂ ಎಂ.ಕೆ.ಸ್ಟಾಲಿನ್ (MK Stalin) ಆದೇಶ ಹೊರಡಿಸಿದ್ದಾರೆ.
Maruti Suzuki: ಬಹು ನಿರೀಕ್ಷಿತ ಹೊಸ ತಲೆಮಾರಿನ Celerio ಬುಕಿಂಗ್ ಪ್ರಾರಂಭ!
ಭಾರತದ ರಸ್ತೆಗಳಲ್ಲಿ ಮಾರುತಿ ಸುಜುಕಿಯ ಹೆಚ್ಚಿನ ವಾಹನಗಳನ್ನು ನೀವು ಕಾಣಬಹುದು. ಮಧ್ಯಮ ವರ್ಗದವರ ಕಾರು ಕೊಳ್ಳುವ ಕನಸು ನನಸು ಮಾಡಿದ ಹೆಚ್ಚುಗಾರಿಕೆಯನ್ನು ಹೊಂದಿರುವ ಮಾರುತಿ ಸುಜುಕಿ ಕಂಪನಿ, ಕಾಲ ಕಾಲಕ್ಕೆ ಗ್ರಾಹಕರ ಬೇಡಿಕೆ ಹಾಗೂ ಪರಿಸರ ನಿಯಮಗಳಿಗೆ ಅನುಗುಣವಾಗಿ ತನ್ನ ಕಾರುಗಳನ್ನು ಉತ್ಪಾದಿಸುತ್ತಾ ಬಂದಿದೆ. ಈಗಲೂ ಭಾರತೀಯ ಕಾರು ಮಾರುಕಟ್ಟೆಯಲ್ಲಿ ತನ್ನದೇ ಆದ ಪಾರಮ್ಯ ಹೊಂದಿದೆ.
ಎಲ್ಲಾ ಕ್ಷೇತ್ರದಲ್ಲೂ ಕನ್ನಡಿಗರಿಗೆ ಉದ್ಯೋಗ : ಬೊಮ್ಮಾಯಿ
ನಾಡಿನ ಯುವ ಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕೈಗಾರಿಕಾ (industry) ವಲಯ ಸೇರಿ ಹಲವು ಕ್ಷೇತ್ರದಲ್ಲಿ ಕನ್ನಡಿಗರಿಗೆ Kannadiga) ಉದ್ಯೋಗ (Job) ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು