ಪೊಲೀಸಪ್ಪನಿಗೆ ಪೊಲೀಸ್ ಅಧಿಕಾರಿ ಮಗಳ ಸೆಲ್ಯೂಟ್ : ಅಪ್ಪನಿಗೆ ಇನ್ನೇನು ಬೇಕು ಹೇಳಿ?

By Suvarna NewsFirst Published Nov 2, 2021, 1:36 PM IST
Highlights

*ತಂದೆಗೆ ತಕ್ಕ ಮಗಳು ಅಪೇಕ್ಷಾ ನಿಂಬಾಡಿಯಾ!
*ಪಾಸಿಂಗ್‌ ಔಟ್‌ ಪರೇಡ್‌ ನಂತರ ಅಪ್ಪನಿಗೆ ಖಡಕ್‌ ಸೆಲ್ಯೂಟ್‌
*ಕುಟುಂಬದ ಮೂರನೇ ತಲೆಮಾರಿನ ಪೋಲಿಸ್ ಎಂಬ ಹೆಮ್ಮೆ

ಉತ್ತರಪ್ರದೇಶ(ನ. 2): ಮಕ್ಕಳು ಸಮಾಜದಲ್ಲಿ ತನಗಿಂತ ಉನ್ನತ ಸ್ಥಾನ, ಹೆಚ್ಚಿನ ಗೌರವ ಗಳಿಸಿದಾಗಲೇ ತಂದೆಗೆ ಸಮಾಧಾನ. ಎದೆಯುದ್ದ ಬೆಳೆದ ಮಗ ಅಥವಾ ಮಗಳು ಸಾಧನೆ ಮಾಡಿದಾಗ ತಂದೆಯ ಎದೆ ಹೆಮ್ಮೆಯಿಂದ ಉಬ್ಬುತ್ತದೆ. ಸಮಾಜದಲ್ಲಿ ಅವರ ಗೌರವ ಇನ್ನಷ್ಟು ಹೆಚ್ಚುತ್ತದೆ. ಇಂತಹದೊಂದು ಘಟನೆ ಈಗ ಉತ್ತರಪ್ರದೇಶದಲ್ಲಿ ನಡೆದಿದೆ. ಐಟಿಬಿಪಿಯಲ್ಲಿ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (Deputy inspector General) ಆಗಿ ಕಾರ್ಯನಿರ್ವಹಿಸುತ್ತಿರುವ ಎಪಿಎಸ್ ನಿಂಬಾಡಿಯಾ (APS Nimbadia) ಅವರ ಪುತ್ರಿ ಅಪೇಕ್ಷಾ ನಿಂಬಾಡಿಯಾ ( Apeksha Nimbadia) ತಮ್ಮ ತಂದೆಗೆ ಸೆಲ್ಯೂಟ್‌ ಮಾಡಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಎಸ್ಪಿಯಾಗಿ ಬಂದ ಮಗಳಿಗೆ, ಡಿಸಿಪಿ ತಂದೆಯ ಖಡಕ್ ಸೆಲ್ಯೂಟ್ ಹೀಗಿತ್ತು!

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ (Moradabad) ಡಾ ಬಿಆರ್ ಅಂಬೇಡ್ಕರ್ ಪೊಲೀಸ್ ಅಕಾಡೆಮಿಯಲ್ಲಿ (Dr. B R Ambdekar Police Academy) ಪದವಿ ಪಡೆದ ಅಪೇಕ್ಷಾ ಪಾಸಿಂಗ್‌ ಔಟ್‌ ಪರೇಡ್‌ನಲ್ಲಿ (Passing Out Parade) ಭಾಗವಹಿಸಿದ ನಂತರ ಈ ಫೋಟೋ ತೆಗೆಯಲಾಗಿದೆ. ಪೋಲಿಸ್ ಸಮವಸ್ತ್ರವನ್ನು ಧರಿಸಿರುವ ಮಗಳು ತನ್ನ ಅಧಿಕಾರಿ ತಂದೆಗೆ ಸೆಲ್ಯೂಟ್ ಮಾಡುತ್ತಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ‌ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೊಲೀಸ್ (ITBP) ಹಂಚಿಕೊಂಡಿದ್ದಾರೆ. ಹೆಮ್ಮೆಯ ತಂದೆ ಅವಳ ಸೆಲ್ಯೂಟ್ ಸ್ವೀಕರಿಸಿ - ಪ್ರತಿಯಾಗಿ ಸೆಲ್ಯೂಟ್ ಮಾಡಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. "ಹೆಮ್ಮೆಯ ತಂದೆ ಹೆಮ್ಮೆಯ ಮಗಳಿಂದ ಸೆಲ್ಯೂಟ್ ಪಡೆಯುತ್ತಿದ್ದಾರೆ" ಎಂದು ಐಟಿಬಿಪಿ ಪೋಸ್ಟ್ ಮಾಡಿದೆ.  

ಹಿರಿಯ ಅಧಿಕಾರಿ ಮಗಳಿಗೆ ಅಪ್ಪನ ಸೆಲ್ಯೂಟ್‌!

ಡಾ ಬಿ. ಆರ್ ಅಂಬೇಡ್ಕರ್ ಪೊಲೀಸ್ ಅಕಾಡೆಮಿಯಿಂದ ಪದವಿ ಪಡೆದ ನಂತರ ಅಪೇಕ್ಷಾ ನಿಂಬಾಡಿಯಾ ಉತ್ತರ ಪ್ರದೇಶ ಪೊಲೀಸ್‌ ಸೇವೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇರುತ್ತಾರೆ. ಅಪೇಕ್ಷಾ ಅವರು ಪೋಲಿಸ್‌ ಪಡೆ ಸೇರಿಕೊಂಡ ಅವರ ಕುಟುಂಬದ ಮೂರನೇ ತಲೆಮಾರಿನವರಾಗಿದ್ದಾರೆ. ಟಿಬೆಟ್‌ನ ಗಡಿಯಲ್ಲಿನ ದೇಶದ ಪ್ರಮುಖ ಗಡಿ ಗಸ್ತು ಸಂಸ್ಥೆಯಾದ ITBPಯ Instagram ಖಾತೆಯು  ನಿಂಬಾಡಿಯಾ ಅವರ ಇನ್ನೂ ಎರಡು ಛಾಯಾಚಿತ್ರಗಳನ್ನು ಹಂಚಿಕೊಂಡಿದೆ, ಅವುಗಳಲ್ಲಿ ಒಂದು ಅವರು ತಾಯಿ ಬಿಮ್ಲೇಶ್ ನಿಂಬಾಡಿಯಾ ಸಮಾರಂಭದಲ್ಲಿ ಭಾಗವಹಿಸಿದ ಫೋಟೋ ಕೂಡ ಇದೆ. ಕೊನೆಯ ಫೋಟೋದಲ್ಲಿ ತಂದೆ-ಮಗಳು ಇಬ್ಬರೂ ಕ್ಯಾಮೆರಾವನ್ನು ನೋಡಿ ನಗುತ್ತಿರುವಂತೆ ಪರಸ್ಪರ ಪಕ್ಕದಲ್ಲಿ ನಿಂತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by ITBP (@itbp_official)

 

ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕಿಯೆಗಳು ಬಂದಿವೆ. ತಂದೆ - ಮಗಳ ಸಾಧನೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಲ್ಯೂಟ್‌ ಟು ಬೋತ್‌ ಆಫ್‌ ಯೂ (Salute to both of you) ಎಂದು ಕೆಲವರು ಹೇಳಿದರೇ "ಇದೊಂದು ಹಮ್ಮೆಯ ಕ್ಷಣ" ಎಂದು ಇನ್ನೂ ಕೆಲವರು ಹೇಳಿದ್ದಾರೆ.

ನಿಗೂಢ ಸ್ಫೋಟಕ್ಕೆ ಪ್ರಾಣ ತ್ಯಾಗ ಮಾಡಿದ ಇಬ್ಬರು ಯೋಧರು

ಹಿರಿಯ ಅಧಿಕಾರಿ ಮಗಳಿಗೆ ಅಪ್ಪನ ಸೆಲ್ಯೂಟ್‌!

ಈ ಹಿಂದೆ  ಆಂಧ್ರಪ್ರದೇಶದ ತಿರುಪತಿ ನಗರವು ಇಂಥಹ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಗಳು ಎದುರಾದ, ಕಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ತಂದೆಯೇ ಸೆಲ್ಯೂಟ್‌ ಹೊಡೆದ ಪ್ರಕರಣ ಎಲ್ಲರ ಗಮನ ಸೆಳೆಯಿತು. ಗುಂಟೂರಿನಲ್ಲಿ ಡಿಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿರುವ ಜೆಸ್ಸಿ ಪ್ರಶಾಂತಿ, ಪೊಲೀಸ್‌ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ಅಲ್ಲಿಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿರುವ ಶ್ಯಾಮ್‌ ಸುಂದರ್‌ ಎದುರಾದರು.

click me!