ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಶಾಸಕ ಸ್ಥಾನಕ್ಕೆ ಸಿಎಂ ಪತ್ನಿ ರಾಜೀನಾಮೆ

By Mahmad Rafik  |  First Published Jun 15, 2024, 10:54 AM IST

ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಸಿಕೆಎಂ) ಪಕ್ಷದ ನಾಯಕಿ ಕೃಷ್ಣಾ ಕುಮಾರಿ ರೈ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಗ್ಯಾಂಗ್ಟಾಕ್: ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಅವರ ಪತ್ನಿ ಹಾಗೂ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ(ಸಿಕೆಎಂ) ಪಕ್ಷದ ನಾಯಕಿ ಕೃಷ್ಣಾ ಕುಮಾರಿ ರೈ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಪತ್ರವನ್ನು ಸ್ವೀಕರ್‌ ಎಂ.ಎನ್. ಶರ್ಪಾ ಅವರು ಸ್ವೀಕರಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಕ್ಕಿಂ ಸಿಎಂ ಪ್ರೇಮ್‌ ಸಿಂಗ್‌ ತಮಾಂಗ್‌, ನಮ್ಮ ಪಕ್ಷದ ಕಲ್ಯಾಣ ಮತ್ತು ಉದ್ದೇಶಗಳಿಗೆ ಆದ್ಯತೆ ನೀಡಿ ಪಕ್ಷದ ಸರ್ವಾನುಮತದ ನಿರ್ಧಾರಕ್ಕೆ ಅನುಗುಣವಾಗಿ ನನ್ನ ಪತ್ನಿ ಕೃಷ್ಣಾ ಕುಮಾರಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

Tap to resize

Latest Videos

ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣಾ ಕುಮಾರಿ ಅವರು ನಾಮ್ಚಿ-ಸಿಂಘಿತಂಗ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಅಭ್ಯರ್ಥಿ ಬಿಮಲ್ ರೈ ಅವರನ್ನು ಸೋಲಿಸಿದ್ದರು.

ಪುಟ್ಬಾಲ್ ತಾರೆಗೆ ಒಲಿಯದ ರಾಜಕೀಯ : 10 ವರ್ಷಗಳಲ್ಲಿ ಆರು ಬಾರಿ ಸೋತ ಬೈಚುಂಗ್ ಭುಟಿಯಾ

click me!