ಅಮೃತಸರ(ಮಾ:19): ಸಿಖ್ಖರ ಪವಿತ್ರ ಕ್ಷೇತ್ರ ಅಮರತಸರದ ಗೋಲ್ಡನ್ ಟೆಂಪಲ್‌ನಲ್ಲಿ ಬೀಡಿ ಸೇದಿದರೆಂದು ಆರೋಪಿಸಿ ಬಿಹಾರದ ವೃದ್ಧ ಮಹಿಳೆ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಆಕೆ ಧೂಮಪಾನ ಮಾಡಿರುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ವಿಡಿಯೊದಲ್ಲಿ ಮಹಿಳೆ ಕ್ಷಮೆ ಕೇಳಿದ್ದಾಳೆ, ಅಲ್ಲದೇ ಪವಿತ್ರ ದೇಗುಲದ ನಿಯಮಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ತಾನು ಸಿಗರೇಟ್ ಹೊರಗೆ ತೆಗೆದಿದ್ದೆ ಆದರೆ ಸೇದಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಗೋಲ್ಡನ್ ಟೆಂಪಲ್‌ನ ಕಟ್ಟಡದೊಳಗೆ ಧೂಮಪಾನ ಮಾಡಿದ್ದಾರೆ ಎಂದು ಆರೋಪಿಸಿ ಪುರುಷರ ಗುಂಪೊಂದು ವೃದ್ಧ ಮಹಿಳೆಯನ್ನು ಥಳಿಸುತ್ತಿರುವ ವೀಡಿಯೊ ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೆಂಪು ಸೀರೆಯುಟ್ಟ ಮಹಿಳೆ ಯೊಬ್ಬರು ಮಗುವಿನ ಪಕ್ಕದಲ್ಲಿ ಕುಳಿತಿರುವುದು ಈ ವಿಡಿಯೋದಲ್ಲಿದೆ. ವರದಿಗಳ ಪ್ರಕಾರ, ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (ಎಸ್‌ಜಿಪಿಸಿ) ಟಾಸ್ಕ್ ಫೋರ್ಸ್ ಎದುರು ಮಹಿಳೆಯು ದೇವಾಲಯದ ಆವರಣದಲ್ಲಿ ಧೂಮಪಾನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾಳೆ. ವೀಡಿಯೊದಲ್ಲಿ, ಶಿರೋಮಣಿ ಗುರುದ್ವಾರ ಪರ್ಬಂಧಕ್ ಕಮಿಟಿ (ಎಸ್‌ಜಿಪಿಸಿ) ಕಾರ್ಯಕರ್ತರು ವಯಸ್ಸಾದ ಮಹಿಳೆಗೆ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವುದು ಮತ್ತು ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.
ಸಾಗರದ MDF ಸಭೆಯಲ್ಲಿ ಹೋಯ್ ಕೈ... ಶಾಸಕರ ಬೆಂಬಲಿಗರಿಂದ ಪುಂಡಾಟ?
ವಿಡಿಯೊದಲ್ಲಿ ಮಹಿಳೆ ಕ್ಷಮೆ ಕೇಳಿದ್ದಾಳೆ, ಪವಿತ್ರ ದೇಗುಲದ ನಿಯಮಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ತಾನು ಸಿಗರೇಟ್ ಹೊರಗೆ ಮಾತ್ರ ತೆಗೆದಿದ್ದೆ ಆದರೆ ಸೇದಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಮಹಿಳೆಯ ಮಗಳು ತನ್ನ ತಾಯಿ ತಪ್ಪು ಮಾಡಿದ್ದಾಳೆ ಎಂದು ಹೇಳಿ ಕ್ಷಮೆಯಾಚಿಸುವುದನ್ನು ಕಾಣಬಹುದು. ಆದರೆ, ಎಸ್‌ಜಿಪಿಸಿ ಸದಸ್ಯರು (SGPC members) ಆಕೆಯನ್ನು ಬಿಡದೆ ಮುಖಕ್ಕೆ ಥಳಿಸಿದ್ದಾರೆ. ಗೋಲ್ಡನ್ ಟೆಂಪಲ್ ಕಾಂಪ್ಲೆಕ್ಸ್‌ನೊಳಗೆ ತಾನು ಧೂಮಪಾನ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ಅವರು ಮಹಿಳೆಯನ್ನು ಒತ್ತಾಯಿಸುತ್ತಿರುವುದು ಕಂಡು ಬಂದಿದೆ.
ये क्या हैं? एक औरत पर सरे आम हाथ उठा रहे हैं, बहरमी से मार रहे हैं, मेरे हाथ काप रहे हैं ये लिखते हुए, मेरी माँ मुझे याद आ रही हैं, यदि इस माँ को इंसाफ़ नहीं मिला तो हम कहीं मुँह दिखाने के क़ाबिल नहीं रहेंगे, कृपा कर इंसाफ़ दे। pic.twitter.com/qK1YqYZFI1
— Singh Varun (@singhvarun)
ಇದು ಸಚ್ಖಂಡ್ ಶ್ರೀ ಹರಿಮಂದರ್ ಸಾಹಿಬ್(Harimander Sahib), ನೀವು ನೋಡಿದರೆ ಬೀಡಿ ಸೇದುತ್ತಿದ್ದೀರಿ ಎಂದು ಒಬ್ಬ ವ್ಯಕ್ತಿ ಮಹಿಳೆಯನ್ನು ಖಂಡಿಸುತ್ತಾ ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ. ಅಲ್ಲದೇ ಘೋರವಾಗಿ ಹಲ್ಲೆ ಮಾಡಬೇಡಿ ಆದರೆ ಆಕೆಗೆ ಬುದ್ಧಿ ಕಲಿಸಿ ಎಂದು ಹೇಳುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿ ಬರುತ್ತಿದೆ. ಆದರೆ ಮಹಿಳೆಯ ಬಳಿ ಸಿಗರೇಟು(cigarette) ಅಥವಾ ಬೀಡಿ ಸೇರಿದಂತೆ ಯಾವುದೇ ತಂಬಾಕು ಪದಾರ್ಥಗಳು ಸಿಕ್ಕಿಲ್ಲ, ಗುರುದ್ವಾರದೊಳಗೆ ಮಹಿಳೆ ಧೂಮಪಾನ ಮಾಡಿದ್ದಕ್ಕೆ ಯಾವುದೇ ಪುರಾವೆ ಇಲ್ಲ ಬಳಿಕ ಮಹಿಳೆಯನ್ನು ಗುರುದ್ವಾರ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆಯ ನಂತರ, ಮಹಿಳೆ ಗೋಲ್ಡನ್ ಟೆಂಪಲ್ ಒಳಗೆ ಧೂಮಪಾನ ಮಾಡುತ್ತಿದ್ದಾಳೆ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.
"ಮಹಿಳೆಯನ್ನು ಪೊಲೀಸರ ಬಳಿ ಕರೆದೊಯ್ದವರಿಗೆ ಆಕೆಯ ಬಳಿ ಸಿಗರೇಟು ಇತ್ತು ಎಂದು ತೋರಿಸಲು ಸಾಧ್ಯವಾಗಲಿಲ್ಲ, ಮತ್ತು ವೀಡಿಯೊದಲ್ಲಿಯೂ ಸಹ ಸಿಗರೇಟ್ ಸೇದುವ ಯಾವುದೇ ಪುರಾವೆಗಳಿಲ್ಲ. ಆಕೆಯನ್ನು ಥಳಿಸಿದ್ದು ಅಮಾನವೀಯ ಎಂದು ಅಧಿಕಾರಿ ಹೇಳಿದ್ದಾರೆ. ಆಕೆಯನ್ನು ಥಳಿಸಿದ ಸಿಖ್ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಪ್ರಶ್ನೆ ಕೇಳಿದಾಗ, ಮಹಿಳೆಯಿಂದ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದರು ಮತ್ತು ಪ್ರಾಥಮಿಕವಾಗಿ ಪ್ರತ್ಯೇಕತಾವಾದಿ ಸಿಖ್‌ಗೆ ಸೇರಿದವರು ಎಂದು ನಂಬಿ ಗುಂಪು ಮಹಿಳೆಗೆ ಥಳಿಸಿದೆ ಎಂದು ಹೇಳಿದರು.
ತಿರುಗಾಡ್ಬೇಕು 50 ಸಾವಿರ ಕೊಡಿ, ಹಣ ಕೊಡಲ್ಲ ಎಂದ ಯೋಧನಿಗೆ ಥಳಿಸಿದ ಪತ್ನಿ!
ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಎಸ್‌ಜಿಪಿಸಿ ಪ್ರಧಾನ ಕಾರ್ಯದರ್ಶಿ ಕರ್ನೈಲ್ ಸಿಂಗ್ ಪಂಜೋಲಿ( Karnail Singh Panjoli) ತಿಳಿಸಿದ್ದಾರೆ. ಅಲ್ಲದೇ ಬಿಹಾರ (Bihar) ಮಹಿಳೆಗೆ ಥಳಿಸಿದವರು ಎಸ್‌ಜಿಪಿಸಿ ಉದ್ಯೋಗಿ ಅಲ್ಲ ಭಕ್ತರು ಎಂದು ಅವರು ಹೇಳಿದರು. ಮಹಿಳೆಯನ್ನು ನಂತರ ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಆದರೆ ಆಕೆಯೂ ಯಾವುದೇ ಲಿಖಿತ ದೂರು ನೀಡಿಲ್ಲ ಎಂದು ಅವರು ಹೇಳಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಯಸ್ಸಾದ ಮಹಿಳೆಯ ವಿರುದ್ಧ ಅಮಾನವೀಯವಾಗಿ ವರ್ತಿಸಿದ್ದಕ್ಕೆ ನೆಟ್ಟಿಗರು ಎಸ್‌ಜಿಪಿಸಿ ಮತ್ತು ಅದರ ಉದ್ಯೋಗಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.