ಶಿಕ್ಷಣವನ್ನ ಕೇಸರೀಕರಣ ಮಾಡೋದ್ರಲ್ಲಿ ತಪ್ಪೇನಿದೆ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನೆ!

By Suvarna News  |  First Published Mar 19, 2022, 4:04 PM IST

ಕೇಸರಿ ಬಣ್ಣದಲ್ಲೇನು ನೀವು ತಪ್ಪು ಕಾಣ್ತಿದ್ದೀರಿ

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶ್ನೆ

ವಸಹಾತುಶಾಹಿ ಧೋರಣೆಯಿಂದ ಇನ್ನಾದರೂ ಹೊರಬನ್ನಿ


ಹರಿದ್ವಾರ (ಮಾ. 19): ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದರೂ ನಾವಿನ್ನೂ ವಸಹಾತು ಮನಸ್ಥಿತಿಯಲ್ಲಿದ್ದೇವೆ (colonial mindset). ದೇಶದ ಜನರು ತಮ್ಮ "ವಸಾಹತುಶಾಹಿ ಮನಸ್ಥಿತಿಯನ್ನು" ತ್ಯಜಿಸಿ ತಮ್ಮ ಸ್ವಂತ ಗುರುತಿನ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು (Vice President Venkaiah Naidu) ಹೇಳಿದ್ದಾರೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯನ್ನು(Macaulay system Of Education) ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಕರೆ ನೀಡಿದ ಅವರು, ದೇಶದಲ್ಲಿ ವಿದೇಶಿ ಭಾಷೆಯನ್ನು ಶಿಕ್ಷಣ ಮಾಧ್ಯಮವನ್ನಾಗಿ ಹೇರಿ ಶಿಕ್ಷಣವನ್ನು ದೊಡ್ಡವರಿಗೆ ಮಾತ್ರವೇ ಸೀಮಿತಗೊಳಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಶತಮಾನಗಳ ವಸಾಹತುಶಾಹಿ ಆಳ್ವಿಕೆಯು ನಮ್ಮನ್ನು ಕೀಳು ಜನಾಂಗವಾಗಿ ನೋಡುವುದನ್ನು ಕಲಿಸಿತು. ನಮ್ಮದೇ ಸಂಸ್ಕೃತಿ, ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಧಿಕ್ಕರಿಸಲು ನಮಗೆ ಕಲಿಸಲಾಯಿತು. ಇದು ರಾಷ್ಟ್ರವಾಗಿ ನಮ್ಮ ಬೆಳವಣಿಗೆಯನ್ನು ನಿಧಾನಗೊಳಿಸಿತು. ನಮ್ಮ ಶಿಕ್ಷಣ ಮಾಧ್ಯಮವಾಗಿ ವಿದೇಶಿ ಭಾಷೆಯ ಹೇರಿಕೆಯು ಶಿಕ್ಷಣವನ್ನು ಸಮಾಜದ ಒಂದು ಸಣ್ಣ ವರ್ಗಕ್ಕೆ ಸೀಮಿತಗೊಳಿಸಿತು. ಇದರಿಂದ ದೇಶದ ಅಪಾರ ಜನಸಂಖ್ಯೆಗೆ ಶಿಕ್ಷಣದ ಹಕ್ಕಿನಿಂದ ವಂಚಿಸಲಾಯಿತು' ಎಂದು ಉಪರಾಷ್ಟ್ರಪತಿ ನಾಯ್ಡು ಅವರು ಹರಿದ್ವಾರದ ದೇವ್ ಸಂಸ್ಕೃತಿ ವಿಶ್ವ ವಿದ್ಯಾಲಯದಲ್ಲಿ ಸೌತ್ ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಮತ್ತು ರಿಕಾನ್ಸಿಲಿಯೇಶನ್ ಅನ್ನು (South Asian Institute of Peace and Reconciliation at the Dev Sanskriti Vishwa Vidyalaya ) ಉದ್ಘಾಟಿಸಿದ ನಂತರ ತಮ್ಮ ಭಾಷಣದಲ್ಲಿ ಹೇಳಿದರು.

"ನಾವು ನಮ್ಮ ಪರಂಪರೆ, ನಮ್ಮ ಸಂಸ್ಕೃತಿ, ನಮ್ಮ ಪೂರ್ವಜರ ಬಗ್ಗೆ ಹೆಮ್ಮೆ ಪಡಬೇಕು. ನಮ್ಮ ಮೂಲಗಳಿಗೆ  ಹಿಂತಿರುಗಬೇಕು. ನಾವು ನಮ್ಮ ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸಬೇಕು ಮತ್ತು ನಮ್ಮ ಮಕ್ಕಳಿಗೆ ಅವರ ಭಾರತೀಯ ಗುರುತಿನ ಬಗ್ಗೆ ಹೆಮ್ಮೆ ಪಡುವಂತೆ ಕಲಿಸಬೇಕು. ನಾವು ಎಷ್ಟು ಸಾಧ್ಯವೋ ಅಷ್ಟು ಭಾರತೀಯ ಭಾಷೆಗಳನ್ನು ಕಲಿಯಬೇಕು. ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು, ಜ್ಞಾನದ ನಿಧಿಯಾಗಿರುವ ನಮ್ಮ ಧರ್ಮಗ್ರಂಥಗಳನ್ನು ತಿಳಿಯಲು ನಾವು ಸಂಸ್ಕೃತವನ್ನು ಕಲಿಯಬೇಕು," ಎಂದು ಉಪರಾಷ್ಟ್ರಪತಿ ಹೇಳಿದರು.
ಮಾತೃಭಾಷೆಯನ್ನು ಪ್ರಚಾರ ಮಾಡಬೇಕೆಂದು ಯುವಕರನ್ನು ಪ್ರೋತ್ಸಾಹಿಸಿದ ಅವರು, "ಎಲ್ಲಾ ಗ್ಯಾಜೆಟ್ ಅಧಿಸೂಚನೆಗಳನ್ನು ಆಯಾ ರಾಜ್ಯದ ಮಾತೃಭಾಷೆಯಲ್ಲಿ ಹೊರಡಿಸುವ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ, ನಿಮ್ಮ ಮಾತೃಭಾಷೆ ನಿಮ್ಮ ದೃಷ್ಟಿಯಂತಿದೆ, ಆದರೆ ನಿಮ್ಮ ವಿದೇಶಿ ಭಾಷೆಯ ಜ್ಞಾನ ನಿಮ್ಮ ಕನ್ನಡಕದಂತೆ." ಶಿಕ್ಷಣ ವ್ಯವಸ್ಥೆಯ ಭಾರತೀಕರಣವು ಭಾರತದ ಹೊಸ ಶಿಕ್ಷಣ ನೀತಿಯ ಮೂಲವಾಗಿದೆ.  ಇದು ಮಾತೃಭಾಷೆಗಳ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಉಪರಾಷ್ಟ್ರಪತಿ ನಾಯ್ಡು ಹೇಳಿದರು.

Yogi visit Delhi ವೆಂಕಯ್ಯ ನಾಯ್ಡು, ಬಿಎಲ್ ಸಂತೋಷ್ ಸೇರಿ ಪ್ರಮುಖರ ಭೇಟಿಯಾದ ಯೋಗಿ, ಸಂಪುಟ ರಚನೆ ಚರ್ಚೆ!
"ಶಿಕ್ಷಣವನ್ನು ಕೇಸರಿಕರಣಗೊಳಿಸಲಾಗುತ್ತಿದೆ ಎಂದು ನಮ್ಮ ಮೇಲೆ ಆರೋಪಿಸುತ್ತಿದ್ದಾರೆ. ಆದರೆ, ಕೇಸರಿ ಬಣ್ಣದಲ್ಲಿ ನೀವು ಕಾಣುವ ತಪ್ಪಾದರೂ ಏನು? ಸರ್ವೇ ಭವಂತು ಸುಖಿನಃ (ಎಲ್ಲರೂ ಸಂತೋಷವಾಗಿರಲಿ) ಮತ್ತು ವಸುಧೈವ್ ಕುಟುಂಬಕಮ್ (ಜಗತ್ತೇ ಒಂದು ಕುಟುಂಬ) ಇವುಗಳು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಒಳಗೊಂಡಿರುವ ತತ್ವಶಾಸ್ತ್ರಗಳು ಭಾರತದ ಮಾರ್ಗದರ್ಶಿ ತತ್ವಗಳಾಗಿವೆ. ಇಂದಿಗೂ ಭಾರತದ ವಿದೇಶಾಂಗ ನೀತಿ ಇದೇ ತತ್ವದ ಅಡಿಯಲ್ಲಿ ಮುನ್ನಡೆಯುತ್ತಿದೆ ಎಂದರು ಹೇಳಿದರು.

Hijab Row: ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನ ಸರಿಯಲ್ಲ: ಉಪರಾಷ್ಟ್ರಪತಿ ನಾಯ್ಡು
ಭಾರತದಂತೆ ತನ್ನ ಮೂಲದ ಬೇರುಗಳನ್ನು ಹೊಂದಿರುವ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳೊಂದಿಗೆ ಭಾರತ ಬಲವಾದ ಸಂಬಂಧವನ್ನು ಹೊಂದಿದೆ.  ಸಿಂಧೂ ಕಣಿವೆ ನಾಗರಿಕತೆಯು ಅಫ್ಘಾನಿಸ್ತಾನದಿಂದ ಗಂಗಾ ಬಯಲಿನವರೆಗೆ ವಿಸ್ತರಿಸಿದೆ. ಯಾವುದೇ ದೇಶದ ಮೇಲೆ ಮೊದಲು ದಾಳಿ ಮಾಡದಿರುವ ನಮ್ಮ ನೀತಿಯನ್ನು ಪ್ರಪಂಚದಾದ್ಯಂತ ಗೌರವಿಸಲಾಗುತ್ತದೆ. ಇದು ಯೋಧರ ದೇಶವಾಗಿದೆ. ಹಿಂಸಾಚಾರಕ್ಕಿಂತ ಅಹಿಂಸೆ ಮತ್ತು ಶಾಂತಿಯನ್ನು ಆರಿಸಿಕೊಂಡ ಮಹಾನ್ ಸಾಮ್ರಾಟ ಅಶೋಕನ ದೇಶ ಎಂದು ಹೇಳಿದ್ದಾರೆ. "ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳಾದ ನಳಂದಾ ಮತ್ತು ತಕ್ಷಶಿಲಾದ ಅಧ್ಯಯನ ಮಾಡಲು ಪ್ರಪಂಚದಾದ್ಯಂತದ ಜನರು ಭಾರತಕ್ಕೆ ಬರುತ್ತಿದ್ದರು. ಆದರೆ ಅದರ ಸಮೃದ್ಧಿಯ ಉತ್ತುಂಗದಲ್ಲಿಯೂ ಸಹ, ಭಾರತವು ಯಾವುದೇ ದೇಶದ ಮೇಲೆ ದಾಳಿ ಮಾಡಲು ಯೋಚಿಸಲಿಲ್ಲ ಏಕೆಂದರೆ ಜಗತ್ತಿಗೆ ಶಾಂತಿ ಬೇಕು ಎಂದು ನಾವು ದೃಢವಾಗಿ ನಂಬುತ್ತೇವೆ ಎಂದು ವಿವರಿಸಿದರು.

Tap to resize

Latest Videos

click me!