ಪಂಜಾಬ್ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ಅಮ್ಮ ಮತ್ತೆ ಗರ್ಭಿಣಿಯಾಗಿದ್ದಾರೆ. ಮಾರ್ಚ್‌ನಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವಿಚಾರ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಸಾಕಷ್ಟು ಸುದ್ದಿಯಾಗಿತ್ತು.
ಪಂಜಾಬ್: ಪಂಜಾಬ್ ಗಾಯಕ ದಿವಂಗತ ಸಿಧು ಮೂಸೆವಾಲಾ ಅವರ ಅಮ್ಮ ಮತ್ತೆ ಗರ್ಭಿಣಿಯಾಗಿದ್ದಾರೆ. ಮಾರ್ಚ್‌ನಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವಿಚಾರ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆ ಸಾಕಷ್ಟು ಸುದ್ದಿಯಾಗಿತ್ತು. ಆದರೆ ಸಿಧು ಮೂಸೆವಾಲಾ ಅವರ ಅಪ್ಪ ಬಲ್ಕೌರ್ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ ಸುಮ್ಮನೇ ಇಲ್ಲದ ಗಾಸಿಪ್‌ಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ಯಾವ ವಿಚಾರದ ಬಗ್ಗೆ ಅವರು ಈ ರೀತಿ ಹೇಳಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
29 ಹರೆಯದ ಸಿಧು ಮೂಸೆವಾಲಾ ಅವರನ್ನು 2022ರ ಮೇ. 29 ರಂದು ಪಂಜಾಬ್‌ನಲ್ಲಿ ಗ್ಯಾಂಗ್‌ಸ್ಟಾರ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಚರಣ್ ಸಿಂಗ್ ಹಾಗೂ ಬಲ್ಕೌರ್ ಸಿಂಗ್ ಅವರ ಏಕೈಕ ಪುತ್ರನಾಗಿದ್ದ ಸಿಧು ಮೂಸೆವಾಲಾ ಅವರ ಹಠಾತ್ ನಿಧನದಿಂದ ಪೋಷಕರು ತೀವ್ರ ಆಘಾತಕ್ಕೀಡಾಗಿದ್ದರು. ಈ ನಡುವೆ ಕಳೆದ ತಿಂಗಳಷ್ಟೇ ಸಿಧು ಮೂಸೆವಾಲಾ ಅವರ ತಾಯಿ 58 ವರ್ಷದ ಚರಣ್ ಸಿಂಗ್ ಅವರು ಐವಿಎಫ್ ತಂತ್ರಜ್ಞಾನದ ಸಹಾಯದಿಂದ ಮತ್ತೆ ಗರ್ಭಿಣಿಯಾಗಿದ್ದು, ಮಾರ್ಚ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಅವಳಿ ಮಕ್ಕಳಿಗೆ ಚರಣ್ ಸಿಂಗ್ ಜನ್ಮ ನೀಡಲಿದ್ದಾರೆ ಎಂದೆಲ್ಲಾ ಮಾಧ್ಯಮಗಳಲ್ಲಿ ವರದಿ ಹರಿದಾಡಿತ್ತು. ಅನೇಕರು ಈ ವಿಚಾರ ತಿಳಿದು ಖುಷಿ ಪಟ್ಟರೆ ಮತ್ತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಬಗ್ಗೆ ಟ್ರೋಲ್ ಮಾಡಿದ್ದರು.
ಜೈಲಲ್ಲೇ ಗ್ಯಾಂಗ್‌ವಾರ್, ಗಾಯಕ ಸಿಧು ಮೂಸೆವಾಲಾ ಕೊಲೆ ಆರೋಪ ಹೊತ್ತಿದ್ದ ಇಬ್ಬರ ಕಥೆ ಫಿನಿಶ್!
ಆದರೆ ಈಗ ಸಿಧು ಮೂಸೆವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಗಾಸಿಪ್ ಹಬ್ಬಿಸದಂತೆ ಪೋಸ್ಟ್ ಮಾಡಿದ್ದಾರೆ. ಆದರೆ ಅವರು ತಮ್ಮ ಪತ್ನಿ ಗರ್ಭಿಣಿಯೇ ಎಂಬ ವಿಚಾರದ ಬಗ್ಗೆ ಖಚಿಪಡಿಸಿಯೂ ಇಲ್ಲ ಜೊತೆಗೆ ನಿರಾಕರಿಸಿಯೂ ಇಲ್ಲ, ಅವರು ತಮ್ಮ ಕುಟುಂಬದ ಬಗ್ಗೆ ಹಬ್ಬಿರುವ ಊಹಾಪೋಹಾಗಳನ್ನು ನಂಬದಿರಿ ಎಂದಷ್ಟೇ ಪೋಸ್ಟ್ ಮಾಡಿದ್ದಾರೆ.
2022ರಲ್ಲಿ ತಮ್ಮ ಏಕೈಕ ಮಗನ ಸಾವಿನ ನಂತರ ಸಿಧು ಮೂಸೆವಾಲಾ ಪೋಷಕರು ತೀವ್ರ ಆಘಾತಕ್ಕೀಡಾಗಿದ್ದರು. ಈಗ ಸಿಧು ಮೂಸೆವಾಲಾ ಅವರ ತಾಯಿ ಚರಣ ಸಿಂಗ್ ಅವರು ತಮ್ಮ 58ನೇ ಇಳಿವಯಸ್ಸಿನಲ್ಲಿ ಮತ್ತೆ ಗರ್ಭಿಣಿಯಾಗಿದ್ದು, ಬರುವ ಮಾರ್ಚ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಪ್ರಸ್ತುತ ಸಿಧು ತಾಯಿ ವೈದ್ಯಕೀಯ ಕಾಳಜಿಯಲ್ಲಿದ್ದಾರೆ. 58ರ ಹರೆಯವಾಗಿರುವುದರಿಂದ ಅವರ ಗರ್ಭಾವಸ್ಥೆ ಬಗ್ಗೆ ಬಹಳ ಕಾಳಜಿ ವಹಿಸಲಾಗಿದೆ. ಹೊಸ ಮಗುವಿನಲ್ಲಿ ಸಿಧುವನ್ನು ಕಾಣುವ ಮೂಲಕ ತಮ್ಮ ದಂಪತಿ ತಮ್ಮ ಚೊಚ್ಚಲ ಮಗನ ಅಗಲಿಕೆಯ ನೋವನ್ನು ಮರೆಯುವ ನಿರೀಕ್ಷೆಯಲ್ಲಿದ್ದಾರೆ ಎಂದೆಲ್ಲಾ ವರದಿ ಮಾಡಲಾಗಿತ್ತು.
Sidhu Moosewala ಆಸ್ವಸ್ಥಗೊಂಡ ಸಿಧು ಮೂಸೆವಾಲಾ ತಂದೆ, ಪಟಿಯಾಲ ಆಸ್ಪತ್ರೆಗೆ ದಾಖಲು!
ಪಂಜಾಬ್‌ನ ಮನ್ಸಾ ಜಿಲ್ಲೆಯಲ್ಲಿ ತಮ್ಮ ಸೋದರ ಸಂಬಂಧಿ ಹಾಗೂ ಸ್ನೇಹಿತನ ಜೊತೆ ತೆರಳುತ್ತಿದ್ದಾಗ ಸಿಧು ಅವರನ್ನು ಆರು ಜನ ಶೂಟರ್‌ಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ವೇಳೆ ಸಿಧು ಅವರು ಮನ್ಸಾದ ಜವಹರ್ಕೆ ಗ್ರಾಮಕ್ಕೆ ತೆರಳುತ್ತಿದ್ದರು. ಇವರ ಹತ್ಯೆ ಪ್ರಕರಣವನ್ನು ಪಂಜಾಬ್ ಪೊಲೀಸ್ ವಿಶೇಷ ತನಿಖಾ ತಂಡ ತನಿಖೆ ಮಾಡುತ್ತಿದೆ. ಈ ಕೊಲೆ ಪ್ರಕರಣ ಸಂಬಂಧ 32 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಗ್ಯಾಂಗ್‌ಸ್ಟಾರ್‌ಗಳಾದ ಲಾರೆನ್ಸ್ ಬಿಷ್ಣೋಯ್, ಗೊಲ್ಡಿ ಬ್ರಾರ್, ಜಗ್ಗು ಭಗ್ವಾನ್‌ಪುರಿಯಾ ಹೆಸರು ಕೂಡ ಈ ಚಾರ್ಜ್‌ಶೀಟ್‌ನಲ್ಲಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ತಮ್ಮ ಸೋ ಹೈ, ಸೇಮ್ ಬೀಫ್, ದ ಲಾಸ್ಟ್ ರೈಡ್ ಸೇರಿದಂತೆ 200ಕ್ಕೂ ಹೆಚ್ಚು ಹಿಟ್ ಹಾಡುಗಳಿಂದ ಫೇಮಸ್ ಆಗಿದ್ದರು.
ಏಕೈಕ ಪುತ್ರನ ಸಾವಿನ ನಂತರ 58ರ ಇಳಿವಯಸ್ಸಲ್ಲಿ ಮತ್ತೆ ಗರ್ಭಿಣಿಯಾದ ಗಾಯಕ ಸಿಧು ಮೂಸೆವಾಲಾ ತಾಯಿ