
ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ದಿನವೂ ಒಂದಿಲ್ಲೊಂದು ವಿಚಾರಗಳು ಟ್ರೆಂಡ್ ಆಗ್ತಾನೆ ಇರ್ತಾವೆ. ಅದೇ ರೀತಿ ನಿನ್ನೆಯಿಂದ ಟ್ವಿಟ್ಟರ್‌ನಲ್ಲಿ ವಾಟ್ಸ್ ರಾಂಗ್ ವಿತ್ ಇಂಡಿಯಾ ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್‌ನಲ್ಲಿದೆ. ಈ ಬಗ್ಗೆ ಡಿಟೇಲ್ ಸ್ಟೋರಿ ಇಲ್ಲಿದೆ. ಅಂದಹಾಗೆ ಇದು ವಿದೇಶಿಯರು ಹಾಗೂ ಭಾರತೀಯರ ನಡುವಿನ ಟ್ವಿಟ್ಟರ್ ವಾರ್ ಆಗಿದ್ದು, ವಿದೇಶಿಯರ ಭಾರತ ವಿರೋಧಿ ನಿಲುವಿನ ಬಗ್ಗೆ ಭಾರತೀಯರು ರೊಚ್ಚಿಗೆದ್ದು ಒಂದೇ ಸಮನೇ ಟ್ವಿಟ್ ಮಾಡುತ್ತಿದ್ದಾರೆ.
ಟ್ವಿಟ್ಟರ್ ಭಾರತದ ಬಗ್ಗೆ ಪಕ್ಷಪಾತದ ನಿಲುವು ಹೊಂದಿದ್ದು , ಅಲ್ಲಿ ಭಾರತ ವಿರೋಧಿ ಎನಿಸುವ ಹಲವು ಸ್ಟೋರಿಗಳು ಎದ್ದು ಕಾಣುತ್ತಿವೆ ಎಂಬುದು ಭಾರತೀಯರ ಆಕ್ರೋಶವಾಗಿದೆ, ಇದರ ವಿರುದ್ಧ ಭಾರತೀಯರು ಟ್ವಿಟ್ಟರ್‌ನಲ್ಲಿ ವಾಟ್ಸ್ ರಾಂಗ್ ವಿತ್ ಇಂಡಿಯಾ ಹೆಸರಿನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡ್ತಿದ್ದು ಇದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ.
ಸಾವಿರಾರು ಭಾರತೀಯರು, ಈ ಭಾರತ ವಿರೋಧಿ ಟ್ವಿಟ್ಟರ್ ಪೋಸ್ಟ್‌ಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ. ಧರ್ಮ, ಪ್ರದೇಶ, ಆರ್ಥಿಕತೆ ಹಾಗೂ ಇನ್ನೂ ಹಲವು ವಿಚಾರಗಳನ್ನು ಇರಿಸಿಕೊಂಡು ಭಾರತೀಯರು ಹಾಗೂ ಭಾರತದ ವಿರುದ್ಧ ಕೆಲವು ವಿದೇಶಿಗರು ಟ್ವಿಟ್ ಮಾಡುತ್ತಿದ್ದಾರೆ. ಆದರೆ ವಿದೇಶಿಗರ ಈ ಟ್ವಿಟ್‌ಗಳೆಲ್ಲವೂ ಸತ್ಯವಲ್ಲ, ಬಹುತೇಕ ಅನೇಕ ಸುಳ್ಳುಗಳಿಂದ ಕೂಡಿದ್ದು, ಇದನ್ನು ಭಾರತೀಯರು ಎತ್ತಿ ತೋರಿಸಿದ್ದಾರೆ.
ಅನೇಕ ವಿದೇಶಗಳಲ್ಲಿ ನಡೆದಿರುವ ಘಟನೆಗಳನ್ನು ಭಾರತದಲ್ಲಿ ನಡೆದಿದೆ ಎಂಬಂತೆ ಬಿಂಬಿಸಿ ವಿದೇಶಿಗರು ಭಾರತದ ಅವಹೇಳನದ ಕೆಲಸದಲ್ಲಿ ತೊಡಗಿದ್ದು, ಇಂತಹ ಸುಳ್ಳು ವೀಡಿಯೋಗಳ ವಿರುದ್ಧ ಭಾರತೀಯರು ತಿರುಗಿ ಬಿದ್ದಿದ್ದಾರೆ. ಅಲ್ಲದೇ ಭಾರತದ ವಿರುದ್ಧ ಅವಹೇಳನಕಾರಿಯಾಗಿ ಮಾಡಿರುವ ಇಂತಹ ಸಾವಿರಾರು ಟ್ವಿಟ್‌ಗಳನ್ನು ನೆಟ್ಟಿಗರು ಎತ್ತಿ ತೋರಿಸಿದ್ದಾರೆ. ಸಾವಿರಾರು ಭಾರತೀಯರು ಹೀಗೆ ಟ್ವಿಟ್ ಮಾಡಲು ಇಳಿದಿದ್ದರಿಂದ ಈ ವಾಟ್ಸ್ ರಾಂಗ್ ವಿತ್ ಇಂಡಿಯಾ ಹ್ಯಾಶ್ ಟ್ಯಾಗ್ ಟ್ವಿಟ್ಟರ್‌ನಲ್ಲಿ ಸಖತ್ ವೈರಲ್ ಆಗ್ತಿದೆ.
ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟ್ಟರ್‌ನ ಈ ರೀತಿಯ ಭಾರತ ವಿರೋಧಿ ಕಾರ್ಯ ಸೂಚಿಯ ಕಠೋರ ಮುಖವನ್ನು ನೆಟ್ಟಿಗರು ತೋರಿಸಿದ್ದಾರೆ. ಭಾರತಕ್ಕೆ ಏನಾಗಿದೆ. ಅಥವಾ ವಾಟ್ಸ್ ರಾಂಗ್ ವಿತ್ ಇಂಡಿಯಾ ಹ್ಯಾಶ್ ಟ್ಯಾಗ್ ಮೂಲಕ ಅನೇಕ ಭಾರತೀಯರು ವಿದೇಶಗಳಲ್ಲಿ ನಡೆದಿರುವ ಹಲವು ಅಸಹ್ಯ ಘಟನೆಗಳನ್ನು ತೆರೆದಿಟ್ಟಿದ್ದಾರೆ.
ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು ಇದೇ ಸಮಯದಲ್ಲಿ ಟ್ವಿಟ್ಟರ್‌ನಲ್ಲಿ ಭಾರತಕ್ಕೆ ಏನಾಗಿದೆ ಎಂಬ ಟ್ರೆಂಡ್ ಹೆಚ್ಚಾಗಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ