ದೇವರೇ.. 2025ರಲ್ಲಿ ಅಡಲ್ಟ್ ವೀಡಿಯೋ ನೋಡುವುದಕ್ಕೆ ಭಾರತೀಯರು ಖರ್ಚು ಮಾಡಿದ್ದು, ಇಷ್ಟೊಂದು ಕೋಟಿ ನಾ?

Published : Dec 31, 2025, 05:52 PM IST
adult star

ಸಾರಾಂಶ

2025 ಮುಗ್ದೆ ಹೋಯ್ತು 2026ರ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಹೀಗಿರುವಾಗ 2025ರಲ್ಲಿ ಭಾರತೀಯರು ಭಾರತೀಯರು ಪೋ*ರ್ನ್ ಅಥವಾ ಅಶ್ಲೀ*ಲ ವೀಡಿಯೋಗಳನ್ನೂ ನೋಡುವುದಕ್ಕೆ ವೆಚ್ಚ ಮಾಡಿದ ಹಣ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗೋದಂತು ಪಕ್ಕಾ..

ಹಿಂದೂ ಪುರಾಣಗಳ ಪ್ರಕಾರ ಕಾಮ, ಅಧರ್ಮ, ಮೋಸ, ದುರಾಸೆ ಕೆಟ್ಟ ನಡತೆ ಹೆಚ್ಚಾಗುತ್ತಿದ್ದಂತೆ ಕಲಿಯುಗದ ಅಂತ್ಯವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ಅದೆಲ್ಲಾ ಈಗ್ಯಾಕೆ ಅಂತೀರಾ, 2025 ಮುಗ್ದೆ ಹೋಯ್ತು 2026ರ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಹೀಗಿರುವಾಗ 2025ರಲ್ಲಿ ಭಾರತೀಯರು ಭಾರತೀಯರು ಪೋ*ರ್ನ್ ಅಥವಾ ಅಶ್ಲೀ*ಲ ವೀಡಿಯೋಗಳನ್ನೂ ನೋಡುವುದಕ್ಕೆ ವೆಚ್ಚ ಮಾಡಿದ ಹಣ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗೋದಂತು ಪಕ್ಕಾ.. ಇಷ್ಟೊಂದು ಕೋಟಿ ಮೊತ್ತದ ಹಣವನ್ನು ಜನ ಅಶ್ಲೀ* ವೀಡಿಯೋಗಳನ್ನು ನೋಡುವುದಕ್ಕೆ ವೆಚ್ಚ ಮಾಡಿದ್ದಾರೆ ಅಂದಮೇಲೆ ಕಲಿಯುಗದ ಅಂತ್ಯ ಬಹಳ ಹತ್ರದಲ್ಲೇ ಇದೆ ಅನ್ನೋದಂತು ಪಕ್ಕಾ ಹಾಗಿದ್ರೆ ಭಾರತೀಯರು ವೆಚ್ಚ ಮಾಡಿದ ಹಣ ಎಷ್ಟು ಅಂತ ಈಗ ನೋಡೋಣ.

ಅಡಲ್ಟ್ ವಿಡಿಯೋ ಪ್ಲಾಟ್‌ಫಾರ್ಮ್‌ ಅಥವಾ ಅಶ್ಲೀಲ ವಿಡಿಯೋ ಪ್ಲಾಟ್‌ಫಾರ್ಮ್‌ 'ಓನ್ಲಿಫ್ಯಾನ್ಸ್' ಇತ್ತೀಚೆಗೆ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಆ ವರದಿಯ ಪ್ರಕಾರ, ಭಾರತೀಯರು ಈ ವರ್ಷ ಅಂದ್ರೆ 2025ರಲ್ಲಿ ಸರಿಸುಮಾರು ಅಂದಾಜು 1080 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದಲ್ಲಿ ಎಷ್ಟೋ ನಿರಾಶ್ರಿತರಿಗೆ ಮನೆ ಕಟ್ಟಿಕೊಡಬಹುದಿತ್ತು. ಬಡ ಮಕ್ಕಳ ಶಿಕ್ಷಣಕ್ಕೆ ವೆಚ್ಚ ಮಾಡಬಹುದಿತ್ತು. ಆದರೆ ನಮ್ಮ ಜನ ಬೇರೆಯವರ ಬೆತ್ತಲೆ ವೀಡಿಯೋ ನೋಡುವುದಕ್ಕಾಗಿ ಇಷ್ಟೊಂದು ಹಣ ವೆಚ್ಚ ಮಾಡಿದ್ದಾರೆ ಅಂದ್ರೆ ಅಚ್ಚರಿಪಡಲೇಬೇಕು.

ಏನಿದು ಓನ್ಲಿಫ್ಯಾನ್?

ಓನ್ಲಿಫ್ಯಾನ್ ಎಂಬುದು ಅಶ್ಲೀಲ ವೀಡಿಯೋಗಳಿಗೆ ವೇದಿಕೆ ಒದಗಿಸುವ ತಾಣವಾಗಿದ್ದು, ಇದರ ಮೂಲ ಲಂಡನ್ ಆಗಿದ್ದು, 2016ರಲ್ಲಿ ಇದು ಆರಂಭವಾಗಿದೆ. ಟೀಮ್ ಸ್ಟೋಕ್ಲಿ ಇದರ ನಿರ್ಮಾತೃ. ಇಲ್ಲಿ ಅಶ್ಲೀಲ ವೀಡಿಯೋಗಳ ತಯಾರಕರು ತಮ್ಮ ವಿಶೇಷ ಎನಿಸಿದ ವೀಡಿಯೋಗಳನ್ನು ಈ ಪ್ಲಾಟ್‌ಫಾರ್ಮ್‌ಗೆ ಮಾರಾಟ ಮಾಡುತ್ತಾರೆ. ಇವುಗಳನ್ನು ನೋಡಬೇಕೆನಿಸಿದರೆ ಬಳಕೆದಾರರು ಅಥವಾ ವೀಕ್ಷಕರು ಓನ್ಲಿಫ್ಯಾನ್ ಅನ್ನು ಸಬ್‌ಸ್ಕ್ರೈಬ್ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೇ ತಮ್ಮ ಇಷ್ಟದ ಕ್ರಿಯೇಟರ್‌ಗಳ ವಿಡಿಯೋಗಳನ್ನು ನೋಡುವುದಕ್ಕೆ ಇಲ್ಲಿ ನೋಡುಗರು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಒಂದೊಂದು ಅಶ್ಲೀಲ ವಿಡಿಯೋ ಬೆತ್ತಲೆ ಫೋಟೋಗಳಿಗೆ ಇಲ್ಲಿ ನಿರ್ದಿಷ್ಠ ಹಣ ನಿಗದಿ ಮಾಡಲಾಗಿರುತ್ತದೆ. ಇದರ ಜೊತೆಗೆ ಈ ಓನ್ಲಿಫ್ಯಾನ್ ಪ್ಲಾಟ್‌ಫಾರ್ಮ್‌ನಲ್ಲಿ ಫಿಟ್‌ನೆಸ್, ಸಂಗೀತ ಹಾಗೂ ಅಡುಗೆಗೆ ಸಂಬಂಧಿಸಿದ ವೀಡಿಯೋಗಳು ಇಲ್ಲಿ ಇರುತ್ತದೆ ಆದರೆ ಇಲ್ಲಿ ಮುಖ್ಯವಾಗಿ ಜನ ನೋಡುವುದು ಅಶ್ಲೀಲ ವೀಡಿಯೋಗಳನ್ನು ಮಾತ್ರ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಇದನ್ನೂ ಓದಿ:  ಅಮ್ಮ ಹೊಲಿದ ಸ್ವೆಟರ್‌: ಹಾಸಿಗೆ ಹಿಡಿದಿದ್ದರೂ ಮಗನಿಗಾಗಿ ಸ್ವೆಟರ್ ಹೊಲಿದ 91 ವರ್ಷದ ತಾಯಿ

ವರದಿಗಳ ಪ್ರಕಾರ, ಓನ್ಲಿಫ್ಯಾನ್ಸ್‌ಗೆ ಭಾರತೀಯರು ಅತೀ ಹೆಚ್ಚು ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ಅದಕ್ಕೆ ಖರ್ಚು ಮಾಡುವ ದೇಶಗಳಲ್ಲಿ ಭಾರತ ಅಗ್ರಸ್ಥಾನವನ್ನು ತಲುಪಿದೆ. ಇದರಿಂದಾಗಿ ಭಾರತೀಯರು ಇತರ ಮನರಂಜನಾ ವೇದಿಕೆಗಳ ಬದಲು ಈ ಹೊಸ ವೇದಿಕೆಗಳಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸೋ ಈಗ ಗೊತ್ತಾಯ್ತಲ್ಲ, ಕಲಿಯುಗ ಬೇಗ ಮುಳುಗುತ್ತೆ ಅಂತ ಹೇಳಿದ್ದು ಯಾಕೆ ಅಂತ....

ಇದನ್ನೂ ಓದಿ: ಬಿಲಿಯನೇರ್ ಗೊತ್ತು ಮಿಲಿಯನೇರ್ ಗೊತ್ತು ಇದೇನಿದು ನಿಲಿಯನೇರ್‌: ನೀವು ನಿಲಿಯನೇರಾ ಮಿಲಿಯನೇರಾ ಚೆಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ?
2025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು