
ಹರ್ಯಾಣ (ಡಿ.31) ಅದು ಮದುವೆ ಕಾರ್ಯಕ್ರಮದ ರಾತ್ರಿ, ಸಂಭ್ರಮದ ಊಟ, ಡ್ಯಾನ್ಸ್, ಮಾತಕತೆ ಹರಟೆ ನಡುವೆ ಒಂದು ಘಟನೆ ನಡೆದಿತ್ತು. ಇದರಿಂದ ಪೊಲೀಸ್ ಪೇದೆ ಬರೋಬ್ಬರಿ 25 ವರ್ಷ ಹೋರಾಟವನ್ನೇ ಮಾಡಬೇಕಾಯಿತು. ಕೊನೆಗೂ ತಮ್ಮ ಕಾಯುವಿಕೆ ಅರ್ಥಪಡೆದುಕೊಂಡಿದೆ. ಒಂದು ನಾಯಿಯ ಕಾರಣದಿಂದ ಪೊಲೀಸ್ ಪೇದೆಯ ಹಣೆಬರಹ ಬದಲಾಗಿದೆ. ಹೌದು, ಆ ಮದುವೆ ದಿನ ನಡೆದ ಘಟನೆಯೇ ಪೊಲೀಸ್ ಡಾಗ್ ಮಿಸ್ಸಿಂಗ್ ಕೇಸ್. ಬರೋಬ್ಬರಿ 25 ವರ್ಷಗಳ ಬಳಿಕ ಈ ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸ್ ಪೇದೆ ನೆಮ್ಮದಿಯಾಗಿ ಮಲಗಿದ್ದಾರೆ.
ಈ ಘಟನೆ ನಡೆದಿದ್ದು ಹರ್ಯಾಣದಲ್ಲಿ. ಪೊಲೀಸ್ ಪೇದೆ ಜಮಾಲ್ ಸಿಂಗ್ ಸಿಐಡಿ ಪೊಲೀಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ವಿಶೇಷ ಅಂದರೆ ಸಿಐಡಿ ಡಾಕ್ ಸ್ಕ್ವಾಡ್ ಜವಾಬ್ದಾರಿಯನ್ನು ಜಮಾಲ್ ಸಿಂಗ್ ನಿರ್ವಹಿಸುತ್ತಿದ್ದರು. ಸಿಐಡಿ ನಾಯಿಗಳ ನಿರ್ವಹಣೆಯನ್ನು ಪೇದೇ ಪ್ರಮೋದ್ ಕುಮಾರ್‌ಗೆ ನೀಡಲಾಗಿತ್ತು. ಆದರೆ ಜಮಾಲ್ ಸಿಂಗ್ ಮೇಲ್ನೋಟ ಇರಲೇಬೇಕಿತ್ತು. ಅದು 2000ನೇ ಇಸವಿ, ಜೂನ್ 19 ರಾತ್ರಿ. ಹರ್ಯಾಣದ ಪೊಲೀಸ್ ಪೇದೆ ಜಮಾಲ್ ಸಿಂಗ್ ಮನೆಯ ಪಕ್ಕದ ಮನೆಯಲ್ಲಿ ಮದುವೆ ಕಾರ್ಯಕ್ರಮ. ಜಮಾಲ್ ಸಿಂಗ್ ಸೇರಿದಂತೆ ಹಲವರಿಗೆ ಆಮಂತ್ರಣ ನೀಡಲಾಗಿತ್ತು. ಜಮಾಲ್ ಸಿಂಗ್ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಮಾಲ್ ಸಿಂಗ್ ಮನೆಯಲ್ಲಿ ಲೈಕಾ ಅನ್ನೋ ತರಬೇತಿ ಪಡೆದ ಸಿಐಡಿ ನಾಯಿ ಹಬ್ಬದ ಊಟ, ಮ್ಯೂಸಿಕ್ ಸದ್ದಿಗೆ ತಪ್ಪಿಸಿಕೊಂಡಿತ್ತು.
ಲೈಕಾ ನಾಯಿಯನ್ನು ಜೂನ್ 19ರ ರಾತ್ರಿ ಹಾಗೂ ಮರುದಿನ ಇಡೀ ಹುಡುಕಿದ್ದಾರೆ. ಆದರೆ ಸಿಗಲಿಲ್ಲ. ಆರಂಭದಲ್ಲೇ ಇಲ್ಲೇ ಇರಬಹುದು ಎಂದುಕೊಂಡಿದ್ದ ಜಮಾಲ್ ಸಿಂಗ್ ಬಳಿಕ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಪತ್ತೆಯಾಗಲಿಲ್ಲ. ಜೂನ್ 22ರ ಸಂಜೆ ನಾಯಿ ನಾಪತ್ತೆ ಕುರಿತು ಜಮಾಲ್ ಸಿಂಗ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಸಿಐಡಿ ಭಾರಿ ನಿರೀಕ್ಷೆ ಇಟ್ಟಿದ್ದ ಪೊಲೀಸ್ ಡಾಗ್ ಲೈಕಾ. ಈ ನಾಯಿ ಮಿಸ್ಸಿಂಗ್ ಹಿರಿಯ ಅಧಿಕಾರಿಗಳ ತಲೆನೋವು ಹೆಚ್ಚಿಸಿತ್ತು. ಜಮಾಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಾಯಿ ನಾಪತ್ತೆಗ ಜಮಾಲ್ ಸಿಂಗ್ ಕಾರಣ, ಜಮಾಲ್ ಸಿಂಗ್ ನಿರ್ಲಕ್ಷ್ಯ ನಾಪ್ತೆಗೆ ಪ್ರಮುಖ ಕಾರಣ, ಇಷ್ಟೇ ಅಲ್ಲ, ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮುಚ್ಚಿಟ್ಟಿರುವ ಆರೋಪ ಸೇರಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಪೇದೆ ಜಮಾಲ್ ಸಿಂಗ ತಪ್ಪಿತಸ್ಥ ಎಂದು ಪೊಲೀಸ್ ಆಂತರಿಕ ವರದಿ ನೀಡಿತ್ತು. ತಪ್ಪಸಗಿದ ಜಮಾಲ್ ಸಿಂಗ್‌ಗೆ ಪೊಲೀಸರು ಹಿರಿಯ ಅಧಿಕಾರಿಗಳ ಶಿಕ್ಷೆ ಪ್ರಕಟಿಸಿದ್ದರು. ಜಮಾಲ್ ಸಿಂಗ್ ವೇತನ ಹೆಚ್ಚಳ ತಡೆ ಹಿಡಿಯಲಾಯಿತು, ಇನ್ನು ಖಾಯಂ ಹುದ್ದೆ ಮಾಡುವ ಪ್ರಕ್ರಿಯೆಗೂ ಬ್ರೇಕ್ ಬಿದ್ದಿತ್ತು. ಸಣ್ಣ ಶಿಕ್ಷೆ ನಿರೀಕ್ಷಿಸಿದ್ದ ಜಮಾಲ್ ಸಿಂಗ್‌ಗೆ ಆಘಾತವಾಗಿತ್ತು. ಹೀಗಾಗಿ ಜಮಾಲ್ ಸಿಂಗ್ ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇತ್ತ ಶಿಕ್ಷೆ ಪ್ರಕಟಗೊಂಡು ಬೆನ್ನಲ್ಲೇ ಕಾನೂನು ಹೋರಾಟ ಆರಂಭಗೊಂಡಿತ್ತು. ಇದೇ ವೇಳೆ ಒಂದು ತಿಂಗಳ ಬಳಿಕ ನಾಪತ್ತೆಯಾಗಿ ಲೈಕಾ ನಾಯಿ ಪತ್ತೆಯಾಗಿತ್ತು. ಯಾವುದೇ ಸಮಸ್ಯೆಗಳಿಲ್ಲದೆ ನಾಯಿ ಮರಳಿ ಬಂದಿತ್ತು. ಇತ್ತ ಜಮಾಲ್ ಸಿಂಗ್ ಶಿಕ್ಷೆ ಪ್ರಮಾಣ ಹಾಗೇ ಇತ್ತು. ಒಂದಡೆ ಕಾನೂನು ಹೋರಾಟ ಆರಭಸಿದ ಜಮಾಲ್ ಸಿಂಗ್ ವೇತನ ಹೆಚ್ಚಳವಿಲ್ಲದೆ, ಖಾಯಂ ಹುದ್ದೆ ಇಲ್ಲದೆ 25 ವರ್ಷ ಸೇವೆ ಸಲ್ಲಿಸಿದ್ದಾರೆ. ಒಂದು ಮಿಸ್ಸಿಂಗ್ ನಾಯಿ ಪ್ರಕರಣ 25 ವರ್ಷಗಳ ಕಾಲ ನಡೆದಿದೆ. ಆದರೆ ಜಮಾಲ್ ಸಿಂಗ್ ಛಲ ಬಿಡದೆ ಹೋರಾಟ ಮಾಡಿದ್ದಾರೆ. ಇದೀಗ ಡಿಸೆಂಬರ್ 24ರಂದು ಹರ್ಯಾಣ ಹೈಕೋರ್ಟ್ ಈ ಪ್ರಕರಣ ಕುರಿತು ತೀರ್ಪು ನೀಡಿದೆ.
ಜಮಾಲ್ ಸಿಂಗ್ ಪರವಾಗಿ ಕೋರ್ಟ್ ತೀರ್ಪು ನೀಡಿದೆ. ನಾಯಿ ನಾಪತ್ತೆ ಪ್ರಕರಣಕ್ಕೆ ನೀಡಿದ ಶಿಕ್ಷೆ ಅತ್ಯಂತ ಗಂಭೀರವಾಗಿತ್ತು. ಇದು ನ್ಯಾಯಸಮ್ಮತ ಶಿಕ್ಷೆಯಲ್ಲ. ಸಣ್ಣ ತಪ್ಪಿಗೆ ಇಷ್ಟೊಂದು ದೊಡ್ಡ ಶಿಕ್ಷೆ ಸರಿಯಲ್ಲ ಎಂದು ತೀರ್ಪು ನೀಡಿದೆ. 25 ವರ್ಷಗಳ ಬಳಿಕ ಜಮಾಲ್ ಸಿಂಗ್ ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ