
ನವದೆಹಲಿ (ಆ.20) ಟಿವಿ ಚರ್ಚೆ, ಸುದ್ದಿಗೋಷ್ಠಿಗಳಲ್ಲಿ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರವನ್ನು ಪ್ರತಿ ಹೆಜ್ಜೆ ಹೆಜ್ಜೆಗೂ ಸಮರ್ಥಿಸಿಕೊಳ್ಳುತ್ತಿದ್ದ ವಕ್ತಾರ ಶೆಹಜಾದ್ ಪೂನವಾಲ ಇತ್ತೀಚೆಗಷ್ಟೇ ಪಕ್ಷ ತೊರೆದಿದ್ದಾರೆ. ಬಿಜೆಪಿಯಿಂದ ಹೊರಬಂದ ಶೆಹಜಾದ್ ಪೂನಾವಾಲ ಇದೀಗ ರಾಹುಲ್ ಗಾಂಧಿ ರಾಜಕೀಯ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ತೊರೆದ ಬಳಿಕ ಶೆಹಜಾಬಾದ್ ಪೂನಾವಾಲ ನುಡಿದ ಭವಿಷ್ಯ ಭಾರಿ ಕೋಲಾಹಲ ಸೃಷ್ಟಿಸಿದೆ.
ರಾಹುಲ್ ಗಾಂಧಿ ರಾಜಕೀಯ ಭವಿಷ್ಯವನ್ನು ಶೆಹಜಾದ್ ಪೂನಾವಾಲ ನುಡಿದಿದ್ದಾರೆ. ನಾನು ಬದುಕಿರುವವರೆಗೆ ರಾಹುಲ್ ಗಂಧಿ ಪ್ರಧಾನಿಯಾಗಲು ಸಾಧ್ಯವೇ ಇಲ್ಲ ಎಂದು ಪೂನಾವಾಲ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಕಾಂಗ್ರೆಸ್ ಪಕ್ಷ ಯಾವತ್ತೂ ನೈಜ ಸಾಮರ್ಥ್ಯ, ಸಿದ್ಧಾಂತಕ್ಕೆ ಪ್ರಾಮುಖ್ಯತೆ ನೀಡಿಲ್ಲ. ವಶಂಪಾರಂಪರ್ಯ ರಾಜಕಾರಣದಲ್ಲೇ ಕಾಂಗ್ರೆಸ್ ಮುನ್ನಡೆಯುತ್ತಿದೆ. ಪಕ್ಷದೊಳಗೆ ಧ್ವನಿ ಎತ್ತಿದ ಕಾರಣಕ್ಕೆ ನನ್ನನ್ನು ಕಾಂಗ್ರೆಸ್ ಪಕ್ಷದಲ್ಲೇ ತುಳಿಯುವ ಪ್ರಯತ್ನ ಮಾಡಲಾಗಿತ್ತು. ಹೀಗಾಗಿ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದೆ ಎಂದು ಪೂನಾವಾಲ ಹೇಳಿದ್ದಾರೆ.
ರಾಹುಲ್ ಗಾಂಧಿಗೆ ದೇಶವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ, ಆಸಕ್ತಿಯೂ ಇಲ್ಲ. ಈ ದೇಶದ ಜನರ ಮನಸ್ಥಿತಿ, ಇಲ್ಲಿನ ಆಸ್ಥೆ, ಸಂಸ್ಕೃತಿ, ಜನರ ಆಶೋತ್ತರಗಳು ರಾಹುಲ್ ಗಾಂಧಿಗೆ ಅರ್ಥವಾಗುವುದಿಲ್ಲ. ರಾಹುಲ್ ಗಾಂಧಿ ಹೇಳಿಕೆ, ಆರೋಪಗಳನ್ನು ಮಾಡುತ್ತಾ ಚುನಾವಣೆ ಎದುರಿಸುತ್ತಾರೆ. ದೇಶದಲ್ಲೇ ಹಂಗಾಮ ಸೃಷ್ಟಿಸಲು ಹಲವು ಕತೆಗಳನ್ನು ಹೆಣೆಯುತ್ತಾರೆ, ಸುಳ್ಳುಗಳನ್ನು ಹೇಳುತ್ತಾರೆ. ಕೆಲ ದಾಖಲೆಗಳನ್ನು ತಮಗೆ ಬೇಕಾದ ರೀತಿ ತಿರುಚಿ ಹೇಳುತ್ತಾರೆ. ಪರಿಣಾಮ ಸತತವಾಗಿ ಚುನಾವಣೆಯಲ್ಲಿ ಸೋಲುತ್ತಿದ್ದಾರೆ. ಆದರೂ ರಾಹುಲ್ ಗಾಂಧಿ ಪಾಠ ಕಲಿತಿಲ್ಲ ಎಂದ ಪೂನಾವಾಲ ಹೇಳಿದ್ದಾರೆ. ಮೋದಿ ಅಭಿವೃದ್ಧಿ ರಾಜಕಾರಣದ ಮುಂದೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಎಲ್ಲಿದ್ದಾರೆ? ಸಂಪೂರ್ಣ ಫೈಲ್ಯೂರ್ ಎಂದು ಪೂನವಾಲ ಹೇಳಿದ್ದಾರೆ.
ಬಿಜೆಪಿಯಿಂದ ಹೊರಬಂದಿದ್ದೇನೆ. ಆದರೆ ಬಿಜೆಪಿ,ಪ್ರಧಾನಿ ಮೋದಿ ಪರವಾಗಿದ್ದೇನೆ. ಬಿಜೆಪಿಯಲ್ಲಿ ಅರ್ಹತೆ, ಕಠಿಣ ಪರಿಶ್ರಮಕ್ಕೆ ಬೆಲೆ ಇದೆ. ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ವದಲ್ಲಿ ದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತ ಬಲವಾಗಿದೆ ಎಂದು ಪೂನವಾಲ ಹೇಳಿದ್ದಾರೆ. ಪೂನಾವಾಲ ಹೇಳಿಕೆಗೆ ಕಾಂಗ್ರೆಸ್ ನಾಯಕರ ವಿರೋಧ ವ್ಯಕ್ತಪಡಿಸಿದ್ದಾರೆ. ಪೂನಾವಾಲ ಸುಖಾಸುಮ್ಮನೆ ಆರೋಪ, ಟೀಕೆ ಮಾಡುತ್ತಿದ್ದಾರೆ. ಸದ್ಯ ರಾಹುಲ್ ಗಾಂಧಿಯೇ ದೇಶ ಮುನ್ನಡೆಸಲು ಸಮರ್ಥ ನಾಯಕ ಅನ್ನೋ ಅಭಿಪ್ರಾಯಗಳು ಕಾಂಗ್ರೆಸ್ ಪಾಳಯದಲ್ಲಿ ವ್ಯಕ್ತವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ