ಭಾರತೀಯನಾಗಿ ಸಿಂದೂರಕ್ಕೆ ನನ್ನ ಬೆಂಬಲ: ಕಾಂಗ್ರೆಸ್‌ಗೆ ತರೂರ್‌ ತಿರುಗೇಟು

Published : May 16, 2025, 04:18 AM IST
ಭಾರತೀಯನಾಗಿ ಸಿಂದೂರಕ್ಕೆ ನನ್ನ ಬೆಂಬಲ:  ಕಾಂಗ್ರೆಸ್‌ಗೆ ತರೂರ್‌ ತಿರುಗೇಟು

ಸಾರಾಂಶ

ಆಪರೇಷನ್ ಸಿಂದೂರ ಮತ್ತು ಮೋದಿಯನ್ನು ಹೊಗಳಿದ ಕೇಂದ್ರದ ಮಾಜಿ ಸಚಿವ , ಸಂಸದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಪಕ್ಷದ ಶಿಸ್ತಿನ ಲಕ್ಷ್ಮಣ ರೇಖೆ ಮೀರಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ತರೂರ್ ಪ್ರತಿಕ್ರಿಯಿಸಿದ್ದು, ‘ನಾನು ಭಾರತೀಯನಾಗಿ ಹೆಮ್ಮೆಯಿಂದ ನನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.

ನವದೆಹಲಿ (ಮೇ.16): ಆಪರೇಷನ್ ಸಿಂದೂರ ಮತ್ತು ಮೋದಿಯನ್ನು ಹೊಗಳಿದ ಕೇಂದ್ರದ ಮಾಜಿ ಸಚಿವ , ಸಂಸದ ಶಶಿ ತರೂರ್ ಅವರನ್ನು ಕಾಂಗ್ರೆಸ್ ಪಕ್ಷದ ಶಿಸ್ತಿನ ಲಕ್ಷ್ಮಣ ರೇಖೆ ಮೀರಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ತರೂರ್ ಪ್ರತಿಕ್ರಿಯಿಸಿದ್ದು, ‘ನಾನು ಭಾರತೀಯನಾಗಿ ಹೆಮ್ಮೆಯಿಂದ ನನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ’ ಎಂದು ತಿರುಗೇಟು ನೀಡಿದ್ದಾರೆ.

ಬುಧವಾರ ದೆಹಲಿಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲವು ನಾಯಕರು ತರೂರ್ ಪಕ್ಷದ ಶಿಸ್ತಿನ ನಿಯಮ ಮುರಿದಿದ್ದಾರೆ. ಇದು ವೈಯಕ್ತಿಕ ಅಭಿಪ್ರಾಯ ಹೇಳುವ ಸಮಯವಲ್ಲ. ಪಕ್ಷದ ನಿಲುವಿಗೆ ಬದ್ಧವಾಗಿರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿತ್ತು. 

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಪಿಣರಾಯಿ-ತರೂರ್‌ನಿಂದ ಹಲವರ ನಿದ್ದೆ ಭಂಗ, ಹಾಸ್ಯದಲ್ಲೇ ಟಾಂಗ್ ಕೊಟ್ಟ ಮೋದಿ

ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ ಅವರು, ‘ಕೆಲವು ವಿಷಯಗಳ ಬಗ್ಗೆ ನನಗೆ ಜ್ಞಾನವಿದೆ ಕೆಲವರು ಆ ವಿಚಾರಗಳಳ ಬಗ್ಗೆ ನನ್ನಲ್ಲಿ ಅಭಿಪ್ರಾಯ ಕೇಳುತ್ತಾರೆ. ನಾನು ಭಾರತೀಯನಾಗಿ ಹೆಮ್ಮೆಯ ನಾಗರಿಕನಾಗಿ ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತೇನೆ. ಲಕ್ಷ್ಮಣ ರೇಖೆ ಮೀರಿರುವ ಬಗ್ಗೆಗಿನ ಮಾತುಗಳು ನಾನು ಸಭೆಯಲ್ಲಿದ್ದಾಗ ಚರ್ಚೆಯಾಗಿಲ್ಲ. ಈ ಅಭಿಪ್ರಾಯ ಎಲ್ಲಿಂದ ಬಂದಿದೆ ಗೊತ್ತಿಲ್ಲ. ಹೀಗಾಗಿ ಇದರ ಬಗ್ಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಅರ್ಥವಿಲ್ಲ’ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಧಾರ್ ಬಯೋಮೆಟ್ರಿಕ್ ಶಿಲ್ಪಿ, ಬೆಂಗಳೂರಿನ ಸರ್ವಂ AI ಕಂಪನಿ ಕಟ್ಟಿದ ವಿವೇಕ್ ರಾಘವನ್ ಈಗ TIME100 AI 2026 ಪಟ್ಟಿಯಲ್ಲಿ ಪ್ರಭಾವಿ ವ್ಯಕ್ತಿ!
ನೇಪಾಳದ ಹೃದಯವಿದ್ರಾವಕ ಘಟನೆ, ಕೆಸರಿನಡಿ ಸಿಲುಕಿದ ಶವ ಮೇಲಕ್ಕೆತ್ತಿ ಚಿನ್ನ ಕದಿಯುತ್ತಿರುವ ಕಟುಕರು