
ಬ್ರಹ್ಮೋಸ್... ಈ ಹೆಸರು ಕೇಳಿದರೆ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನದಂಥ ರಾಷ್ಟ್ರಗಳು ಗಡಗಡ ನಡುಕ ಹುಟ್ಟುತ್ತದೆ. ಇದರ ಸಾಮರ್ಥ್ಯ ಏನು ಎಂದು ಇಡೀ ವಿಶ್ವಕ್ಕೇ ಪರಿಚಯವಾದದ್ದು, ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಇಟ್ಟಾಗ. ಇಂಥದ್ದೊಂದು ಸಾಮರ್ಥ್ಯ ಇರುವ ಮಿಸೈಲ್ ಭಾರತದ ಬಳಿ ಇರುವುದು ಕೆಲವು ರಾಷ್ಟ್ರಗಳಿಗೆ ತಿಳಿದಿದ್ದರೂ, ಅದರ ಶಕ್ತಿ ಜಗತ್ತಿಗೆ ಪರಿಚಯವಾದದ್ದು ಈಗಲೇ. ಈ ಹಿನ್ನೆಲೆಯಲ್ಲಿ ಹಲವಾರು ದೇಶಗಳಿಂದ ಬ್ರಹ್ಮೋಸ್ಗೆ ಭಾರಿ ಬೇಡಿಕೆ ಬರುತ್ತಿದೆ. ರಕ್ಷಣಾ ವಲಯವನ್ನು ಆತ್ಮನಿರ್ಭರ ಮಾಡುವತ್ತ ಇಟ್ಟ ಬಹುದೊಡ್ಡ ಹೆಜ್ಜೆಗೆ ಇದು ಬೃಹತ್ ಕೊಡುಗೆಯಾಗಿ ಪರಿಣಮಿಸಿದೆ. ಹಾಗೆಂದು ಬ್ರಹ್ಮೋಸ್ ಭಾರತ ಒಂದರಲ್ಲಿಯೇ ತಯಾರಾದದ್ದಲ್ಲ. ಭಾರತ ಹಾಗೂ ರಷ್ಯಾ ಇದನ್ನು ಅಭಿವೃದ್ಧಿಪಡಿಸಿವೆ. ಎರಡು ದೇಶಗಳ ಸ್ನೇಹದ ಪ್ರತೀಕ ಇದು ಎನ್ನಲಾಗಿದೆ. ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ DRDO ಮತ್ತು ರಷ್ಯಾದ ಎನ್‌ಪಿಒ ಮಶಿನೋಸ್ಟ್ರೋಯೆನಿಯಾ NPOM ಸಂಸ್ಥೆಗಳು ಜಂಟಿಯಾಗಿ ಬ್ರಹ್ಮೋಸ್ ಅಭಿವೃದ್ಧಿಪಡಿಸಿವೆ.
ಇದೇ ಕಾರಣಕ್ಕೆ ಈ ಎರಡೂ ದೇಶಗಳ ನದಿಗಳ ಹೆಸರನ್ನು ಸೇರಿಸಿ ಬ್ರಹ್ಮೋಸ್ ಮಾಡಲಾಗಿದೆ. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮೊಸ್ಕ್ವಾ ಎಂಬ ಎರಡು ನದಿಗಳ ಹೆಸರು ಇದಾಗಿದೆ. ಆದರೆ ಈ ಬ್ರಹ್ಮೋಸ್ ಎನ್ನುವುದು ಇದೀಗ ಭಾರತೀಯ ಸೇನೆಯ ಬ್ರಹ್ಮಾಸ್ತ್ರವಾಗಿದೆ. ಪಾಕಿಸ್ತಾನದ ವಿರುದ್ಧ ಇದರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡು ಪಾಕಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಈ ಬ್ರಹ್ಮಾಸ್ತ್ರದ ಹಿಂದಿರುವ ಶಕ್ತಿ ಈ ಮೇಲಿನ ಚಿತ್ರದಲ್ಲಿ ಇರುವ ಡಾ. ಜೈತೀರ್ಥ ಆರ್. ಜೋಶಿ. ಉತ್ತರಾದಿ ಮಠದ ಭಕ್ತರಾಗಿರುವ ಜೋಶಿ ಅವರು ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಮಹಾಸ್ವಾಮಿಗಳವರ ಶಿಷ್ಯರಾಗಿದ್ದಾರೆ. ಆ ಸಂದರ್ಭದಲ್ಲಿ ಗುರುಗಳ ಸನ್ನಿಧಿಯಲ್ಲಿ ತೆಗೆದಿರುವ ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಜ್ಞಾನಿ ಆಗಿರುವ ಜೋಶಿ ಅವರು.
Operation Sindoor: ಟರ್ಕಿಗೂ ಭಾರತದಿಂದ 'ಆಪರೇಷನ್'! ಶತ ಕೋಟಿ ಡಾಲರ್ ಒಪ್ಪಂದಕ್ಕೆ ತಿಲಾಂಜಲಿ?
ಡಿಸೆಂಬರ್ 1, 2024 ರಂದು ಬ್ರಹ್ಮೋಸ್‌ನ ಹೊಸ ಮಹಾನಿರ್ದೇಶಕ (ಡಿಜಿ) ಆಗಿ ಮತ್ತು ಡಿಆರ್‌ಡಿಒದ ಬ್ರಹ್ಮೋಸ್ ಏರೋಸ್ಪೇಸ್‌ನ ಸಿಇಒ ಮತ್ತು ಎಂಡಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂಸ್ಥೆಯು ತನ್ನ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಅವರ ನೇಮಕಾತಿಯು ಭಾರತದ ರಕ್ಷಣಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿತ್ತು. ಅದೀಗ ಸಾಬೀತಾಗಿದೆ. ಬ್ರಹ್ಮೋಸ್‌ನ ಶಕ್ತಿಯ ಹಿಂದೆ ಇವರ ಸಾಕಷ್ಟು ಪರಿಶ್ರಮವೂ ಇದೆ. ಡಾ. ಜೋಶಿಯವರ ವೃತ್ತಿಜೀವನವು ಮೂರು ದಶಕಗಳಿಗೂ ಹೆಚ್ಚು ಕಾಲದ್ದಾಗಿದ್ದು, ರಕ್ಷಣಾ ತಂತ್ರಜ್ಞಾನ ನಾವೀನ್ಯತೆಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಸ್ಥಳೀಯ ವಿಮಾನವಾಹಕ ನೌಕೆಯ ಯುದ್ಧ ಸನ್ನದ್ಧತೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದವರು. ಕಡಲ ಕಾರ್ಯಾಚರಣೆಗಳನ್ನು ಹೆಚ್ಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ನೀಡಿದ ವಿಶಿಷ್ಟ ಕೊಡುಗೆಗಳಿಗಾಗಿ, ಅವರಿಗೆ ISNT ಯಿಂದ ದಶಕದ ವಿಶಿಷ್ಟ NDT'ian, DRDO ನಿಂದ ರಾಷ್ಟ್ರೀಯ ತಂತ್ರಜ್ಞಾನ ದಿನ ಪ್ರಶಸ್ತಿ, ಐಐಎಂ ನಿಂದ ಐಐಎಂ ಸೇಲ್ ಚಿನ್ನದ ಪದಕ, DRDO ನಿಂದ ವರ್ಷದ ವಿಜ್ಞಾನಿ ಪ್ರಶಸ್ತಿ, ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನಿಂದ ಭಾರತ ರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಪ್ರಶಸ್ತಿ, ಎಚ್ಎಂಎ ಯಿಂದ ವರ್ಷದ ವ್ಯವಸ್ಥಾಪಕ ಪ್ರಶಸ್ತಿ, ISNT ಯಿಂದ ಡಾ. N. ಕೊಂಡಲ್ ರಾವ್ ಸ್ಮಾರಕ ಪ್ರಶಸ್ತಿ, ವಾರಂಗಲ್ ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ವಿಶಿಷ್ಟ ಹಳೆಯ ವಿದ್ಯಾರ್ಥಿ ಪ್ರಶಸ್ತಿ (DAA) ಸೇರಿದಂತೆ ವಿವಿಧ ಸಂಸ್ಥೆಗಳು ಮತ್ತು ವೃತ್ತಿಪರ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು ಮತ್ತು ಗೌರವ ನೀಡಲಾಗಿದೆ.
ಪಾಕಿಸ್ತಾನದಲ್ಲಿ ಮತ್ತೆ ಮತ್ತೆ ಭೂಂಕಪ! ಪರಮಾಣು ಪರೀಕ್ಷೆ ನಡೆಸ್ತಿದ್ಯಾ ಪಾಕ್? ಏನಂದ್ರು ತಜ್ಞರು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ