ಪಾಕಿಸ್ತಾನಕ್ಕೆ ಭೀಕರವಾಗಲಿದ ಬೇಸಿಗೆ; ಭಾರತದಿಂದ ಅತಿದೊಡ್ಡ ಏಟು, ಮತ್ತೊಂದು ಆಘಾತಕ್ಕೆ ಪಾಕ್ ವಿಲವಿಲ

Published : Feb 18, 2026, 07:19 AM IST
India Pakistan

ಸಾರಾಂಶ

ಭಾರತವು ರಾವಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಶಹಪುರ ಕಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಇದರಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಹೆಚ್ಚುವರಿ ನೀರು ಸ್ಥಗಿತಗೊಳ್ಳಲಿದ್ದು, ಜಮ್ಮು ಮತ್ತು ಕಾಶ್ಮೀರದ ಕಥುವಾ, ಸಾಂಬಾ ಜಿಲ್ಲೆಗಳ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ.

ನವದೆಹಲಿ: ಪಾಕಿಸ್ತಾನದ ಪಾಲಿಗೆ ಈ ಬಾರಿಯ ಬೇಸಿಗೆ ಭೀಕರವಾಗಿರಲಿದೆ. ಕಾರಣ, ಸಿಂಧೂ ನದಿಯ ಉಪನದಿಯಾಗಿರುವ ರಾವಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಶಹಪುರ ಕಂಡಿ ಅಣೆಕಟ್ಟಿನ ಕೆಲಸ ಮುಕ್ತಾಯದ ಹಂತಕ್ಕೆ ಬಂದಿದೆ. ಒಮ್ಮೆ ಇದು ಪೂರ್ಣಗೊಂಡಲ್ಲಿ, ಪಾಕಿಸ್ತಾನಕ್ಕೆ ಹರಿಯುವ ಹೆಚ್ಚುವರಿ ನೀರಿಗೆ ಕತ್ತರಿ ಬೀಳಲಿದೆ. ಭಾರತದೊಂದಿಗಿನ ಸಿಂಧೂ ಜಲ ಒಪ್ಪಂದ ಸ್ಥಗಿತದಿಂದ ತತ್ತರಿಸಿರುವ ಪಾಕ್‌ಗೆ ಇದು ಮತ್ತೊಂದು ಆಘಾತ.

ಪಾಕ್‌ಗೆ ಹರಿಯುವ ರಾವಿ ನದಿಗೆಅಡ್ಡಲಾಗಿ ಭಾರತ ಡ್ಯಾಂ ರೆಡಿ

ಡ್ಯಾಂ ಬಗ್ಗೆ ಜಮ್ಮುಕಾಶ್ಮೀರ ಸಚಿವ ಜಾವೇದ್‌ ರಾಣಾ ಮಾಹಿತಿ ನೀಡಿದ್ದು, ‘ಈ ಯೋಜನೆ ಮಾ.31ರ ಒಳಗೆ ಮುಕ್ತಾಯವಾಗಲಿದೆ. ಇದು, ಬರಗಾಲಪೀಡಿತ ಪ್ರದೇಶಗಳಾದ ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ಅತ್ಯಗತ್ಯ’ ಎಂದರು. ಅಧಿಕಾರಿಗಳ ಪ್ರಕಾರ ಈ ಅಣೆಕಟ್ಟಿನಿಂದ ಪಂಜಾಬ್‌ನ 5,000 ಹೆಕ್ಟೇರ್‌, ಕಥುವಾ ಮತ್ತು ಸಾಂಬಾದ ಸುಮಾರು 32,173 ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿಗೆ ಅನುಕೂಲವಾಗಲಿದೆ. ಅತ್ತ, ಇಷ್ಟರವರೆಗೆ ಪಾಕಿಸ್ತಾನಕ್ಕೆ ಅನಿಯಂತ್ರಿತವಾಗಿ ಹರಿಯುತ್ತಿದ್ದ ನೀರು ಇನ್ನುಮುಂದೆ ಸಿಗುವುದಿಲ್ಲ. ಅತಿಹೆಚ್ಚು ನರಳುವುದು ಪಾಕ್‌ನ ಪಂಜಾಬ್‌ ಪ್ರಾಂತ್ಯ.

ಇದನ್ನೂ ಓದಿ: ಭಾರತದ 'ಜಲ' ಹೊಡೆತಕ್ಕೆ ಬೆದರಿದ ಇಸ್ಲಾಮಾಬಾದ್; ಸಾವಲ್ಕೋಟ್ ಅಣೆಕಟ್ಟು ಯೋಜನೆಯಿಂದ ಪಾಕಿಸ್ತಾನಕ್ಕಿಲ್ಲ ನೀರು?

ಕಥುವಾ, ಸಾಂಬಾದ ಕೃಷಿಗಿನ್ನು ಯತೇಚ್ಛ ನೀರು

ಏ.22ರ ಪಹಲ್ಗಾಂ ಉಗ್ರದಾಳಿಗೆ ಪ್ರತಿಯಾಗಿ, ಉಭಯ ದೇಶಗಳ ನಡುವೆ 1960ರಲ್ಲಿ ಏರ್ಪಟ್ಟಿದ್ದ ಸಿಂಧೂ ನದಿ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದೆ. ಇದರನ್ವಯ, ಪಾಕಸ್ತಾನಕ್ಕೀಗ ಮೊದಲಿನಂತೆ ಯತೇಚ್ಛ ನೀರು ಸಿಗದು. ಕಾರಣ, ಭಾರತ ತನ್ನ ನೆಲದಲ್ಲಿ ಹರಿಯುವ ನದಿ ನೀರನ್ನು ಬಳಸಿಕೊಳ್ಳಲು ಸ್ವತಂತ್ರವಾಗಿದ್ದು, ಈಗಾಗಲೇ ಹಲವು ಅಣೆಕಟ್ಟುಗಳ ಮೂಲಕ ನೀರಿನ ಹರಿವನ್ನು ಭಾಗಷಃ ತಡೆಹಿಡಿಯಲಾಗಿದೆ. ಜತೆಗೆ ಆ ಬಗೆಗಿನ ಮಾಹಿತಿಯನ್ನೂ ಹಂಚಿಕೊಳ್ಳಲಾಗುತ್ತಿಲ್ಲ.

ಇದನ್ನೂ ಓದಿ: ಸಿಂಧೂ ನೀರಿಲ್ಲದೆ 24 ಕೋಟಿ ಜನಕ್ಕೆ ಸಂಕಷ್ಟ : ಪಾಕ್‌ ಗೋಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಪಾಕಿಸ್ತಾನಕ್ಕೆ ಭೀಕರವಾಗಲಿದ ಬೇಸಿಗೆ; ಭಾರತದಿಂದ ಅತಿದೊಡ್ಡ ಏಟು, ಮತ್ತೊಂದು ಆಘಾತಕ್ಕೆ ಪಾಕ್ ವಿಲವಿಲ
ಕಾಂಗ್ರೆಸ್‌ ಮಾಜಿ ರಾಜ್ಯಾಧ್ಯಕ್ಷ ಫೆ.22ರಂದು ಬಿಜೆಪಿಗೆ ಸೇರ್ಪಡೆ