ಇನ್ನು 15 ವರ್ಷದ ಬಳಿಕ ಜನರಿಗೆ ಮಾಡಲು ಕೆಲಸ ಇರಲ್ಲ : ಖೋಸ್ಲಾ

Kannadaprabha News   | Kannada Prabha
Published : Feb 18, 2026, 04:31 AM IST
Vinod Kosla

ಸಾರಾಂಶ

ಖೋಸ್ಲಾ, ‘ದೇಶದಲ್ಲಿ ಎಐ ಅಳವಡಿಕೆಯ ಪ್ರಮಾಣವು ರಾಜಕೀಯ ಮತ್ತು ಸರ್ಕಾರದ ನೀತಿಗಳ ಮೇಲೆ ನಿರ್ಧರಿತವಾಗುತ್ತದೆ. ಇನ್ನರ್ಧ ದಶಕದಲ್ಲಿ ಭಾರತ ಎಐ ಉತ್ಪನ್ನ ಮತ್ತು ಸೇವೆಗಳ ಅತಿದೊಡ್ಡ ರಫ್ತದಾರನಾಗಬಹುದು. ಆದರೆ ಐಟಿ ಮತ್ತು ಹೊರಗುತ್ತಿಗೆ ಸೇವೆಗಳು ಮಾಯವಾಗಿರುತ್ತವೆ’ ಎಂದು ವಿವರಿಸಿದರು.

ನವದೆಹಲಿ: ‘ಕೃತಕ ಬುದ್ಧಿಮತ್ತೆಯಿಂದಾಗಿ(ಎಐ) 5 ವರ್ಷಗಳಲ್ಲಿ ಐಟಿ ಮತ್ತು ಹೊರಗುತ್ತಿಗೆ ಸೇವೆಗಳು ಮಾಯವಾಗಲಿದ್ದಾವೆ. 15 ವರ್ಷಗಳಲ್ಲಿ ಪರಿಣಿತಿ ಬೇಡುವ ಕೆಲಸಗಳು ಇಲ್ಲವಾಗಲಿವೆ’ ಎಂದು ಭಾರತ ಮೂಲದ ಅಮೆರಿಕನ್‌ ಟೆಕ್‌ ಉದ್ಯಮಿ, ಕೋಟ್ಯಧಿಪತಿ ವಿನೋದ್‌ ಖೋಸ್ಲಾ ಹೇಳಿದ್ದಾರೆ.

ಎಐ ಬಂದು ಹೊಸ ಕಂಪನಿಗಳನ್ನು ಹುಟ್ಟುಹಾಕುತ್ತಿದೆ

‘ಎಐ ಬಂದು ಹೊಸ ಕಂಪನಿಗಳನ್ನು ಹುಟ್ಟುಹಾಕುತ್ತಿದೆ. ಇಷ್ಟು ವರ್ಷಗಳಲ್ಲಿ ಬಂದ ತಂತ್ರಜ್ಞಾನಗಳು ಕೆಲಸ ಮಾಡುವುದರಲ್ಲಿ ಸಹಾಯ ಮಾಡುತ್ತಿದ್ದರೆ, ಎಐ ಮಾತ್ರ ಮನುಷ್ಯರ ಕೆಲಸವನ್ನು ಮಾಡಲು ಆರಂಭಿಸಿದೆ. ಕಲೆ, ಸಾಹಿತ್ಯದಂತಹ ಸೃಜನಾತ್ಮಕ ಕ್ಷೇತ್ರಗಳು ಇದರಿಂದ ಹೊರತಾಗಿದ್ದರೂ, 5 ವರ್ಷಗಳಲ್ಲಿ ಎಐ ಮಾನವರನ್ನು ಸರಿಗಟ್ಟುತ್ತದೆ. ಅಮೆರಿಕ ಸೇರಿದಂತೆ ವಿಶ್ವದ ಆರ್ಥಿಕತೆಯನ್ನೇ ಪರಿವರ್ತಿಸುತ್ತದೆ’ ಎಂದು ಖೋಸ್ಲಾ ತಿಳಿಸಿದರು.

ರೋಬೋಟ್‌ಗಳು ಮನೆಗೆಲಸ, ಗದ್ದೆ ಕೆಲಸಗಳನ್ನು ಮಾಡುತ್ತಿರುತ್ತವೆ

ದಮೊದಲು ಎಐ, ಮನುಷ್ಯರ ಕೈಕೆಳಗೆ ಕೆಲಸ ಕಲಿಯುತ್ತವೆ. ಇನ್ನೈದು ವರ್ಷದ ಬಳಿಕ ಏಳುವ ತಂತ್ರಜ್ಞಾನದ ಅಲೆಯೊಂದಿಗೆ ರೋಬೋಟ್‌ಗಳು ಮನೆಗೆಲಸ, ಗದ್ದೆ ಕೆಲಸಗಳನ್ನು ಮಾಡುತ್ತಿರುತ್ತವೆ. ಆ ಕಾರ್ಯಗಳು ಅಗ್ಗದ ಬೆಲೆಯಲ್ಲಿ ಆಗಿಹೋಗುತ್ತವೆ. ಇದರಿಂದ ಹಣದುಬ್ಬರ ಕುಸಿಯುತ್ತದೆ. ಅತ್ತ ಅಕೌಂಟೆಂಟ್‌, ವೈದ್ಯ, ಚಿಪ್ ವಿನ್ಯಾಸಕ, ವಾಸ್ತುಶಿಲ್ಪಿ ಮತ್ತು ಮಾರಾಟಗಾರ ಎಲ್ಲವೂ ಎಐ ಆಗಿ, ಶೇ.80ರಷ್ಟು ಕೆಲಸಗಳನ್ನು ಅದೇ ಮಾಡುತ್ತದೆ’ ಎಂದರು.

ಭಾರತದಲ್ಲಿ ಇದರ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದ ಖೋಸ್ಲಾ, ‘ದೇಶದಲ್ಲಿ ಎಐ ಅಳವಡಿಕೆಯ ಪ್ರಮಾಣವು ರಾಜಕೀಯ ಮತ್ತು ಸರ್ಕಾರದ ನೀತಿಗಳ ಮೇಲೆ ನಿರ್ಧರಿತವಾಗುತ್ತದೆ. ಇನ್ನರ್ಧ ದಶಕದಲ್ಲಿ ಭಾರತ ಎಐ ಉತ್ಪನ್ನ ಮತ್ತು ಸೇವೆಗಳ ಅತಿದೊಡ್ಡ ರಫ್ತದಾರನಾಗಬಹುದು. ಆದರೆ ಐಟಿ ಮತ್ತು ಹೊರಗುತ್ತಿಗೆ ಸೇವೆಗಳು ಮಾಯವಾಗಿರುತ್ತವೆ’ ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಯ ಬೇಡ, ಎಐ ಹೊಸ ಉದ್ಯೋಗ ಸೃಷ್ಟಿಸುತ್ತೆ : ಮೋದಿ
EPF ಬಡ್ಡಿದರದಲ್ಲಿ ಭಾರಿ ಬದಲಾವಣೆ? ಉದ್ಯೋಗಿಗಳಿಗೆ ಬಿಗ್​ ಶಾಕ್​ ಕೊಡಲಿದ್ಯಾ ಸರ್ಕಾರ? ಏನಿದು ಸುದ್ದಿ?