
ನವದೆಹಲಿ(ಏ.08) ಪಬ್‌ಜಿ ಆಟದ ಮೂಲಕ ಪರಿಚಸ್ಥರಾದ ಪಾಕಿಸ್ತಾನದ ಸೀಮಾ ಹೈದರ್ ಹಾಗೂ ಭಾರತದ ಸಚಿನ್ ಇದೀಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ತನ್ನ ಮಕ್ಕಳೊಂದಿಗೆ ಭಾರತಕ್ಕೆ ಬಂದ ಸೀಮಾ ಹೈದರ್, ಸಚಿನ್ ಮದುವೆಯಾಗಿದ್ದಾರೆ. ಸೀಮಾ ಕುರಿತ ಚಿತ್ರವೂ ಸೆಟ್ಟೇರಿದೆ. ಇದೀಗ ಸೀಮಾ ತೀವ್ರವಾಗಿ ಹಲ್ಲೆಗೊಳಗಾಗಿರುವ ವಿಡಿಯೋ ಒಂದು ಹರಿದಾಡುತ್ತಿದೆ. ಪತಿ ಸಚಿನ್ ಹಲ್ಲೆ ಮಾಡಿದ್ದಾನೆ ಎಂಬ ಮಾಹಿತಿಗಳು ಈ ವಿಡಿಯೋ ಜೊತೆ ಹರಿದಾಡುತ್ತಿದೆ. ಇತ್ತ ವಿಡಿಯೋದಲ್ಲಿ ಊದಿಕೊಂಡಿರುವ ಕಣ್ಣುಗಳು, ಒಡೆದಿರುವ ತುಟಿಗಳ ದೃಶ್ಯವಿದೆ. ಆದರೆ ಇದು ಅಸಲಿ ವಿಡಿಯೋ ಅಲ್ಲ ಎಂದು ತಂತ್ರಜ್ಞಾನ ಹೇಳುತ್ತಿದೆ. ಇದು ಡೀಫ್ ಫೇಕ್ ವಿಡಿಯೋ ಎಂದು ವರದಿಯಾಗಿದೆ.
ಬಾಲಿವುಡ್ ನಟ ನಟಿಯರು, ಜನ ನಾಯಕರ ಕುರಿತ ಡೀಫ್ ಫೇಕ್ ವಿಡಿಯೋಗಳು ಈಗಾಗಲೇ ಭಾರಿ ಕೋಲಾಹಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಸೀಮಾ ಹೈದರ್‌ಗೂ ಡೀಫ್ ಫೇಕ್ ವಿಡಿಯೋ ಬಿಸಿ ತಟ್ಟಿದೆ. ಈ ವಿಡಿಯೋದಲ್ಲಿ ಸೀಮಾ ಹೈದರ್ ಊದಿಕೂಂಡಿರುವ ಕಣ್ಣುಗಳನ್ನು ತೋರಿಸಿದ್ದಾಳೆ. ಬಳಿಕ ಹಲ್ಲೆಯಿಂದ ಒಡೆದಿರುವ ತುಟಿಗಳನ್ನು ತೋರಿಸಿದ್ದಾಳೆ. ಬಲಬಾಗದ ಕಣ್ಣಿನ ಕೆಳಬಾಗ ಊದಿಕೊಂಡಿದೆ. ರಕ್ತ ಹೆಪ್ಪುಗಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕ್ಷಮೆ ಜೊತೆ 3 ಕೋಟಿ ರೂ ಪಾವತಿಸಿ, ಪಾಕ್‌ನಿಂದ ಬಂದ ಸೀಮಾ ಹೈದರ್ ವಿರುದ್ಧ ಮಾನನಷ್ಟ ಕೇಸ್!
ಆದರೆ ಇದು ಡೀಫ್ ಫೇಕ್ ವಿಡಿಯೋ ಆಗಿದೆ. ತಂತ್ರಜ್ಞಾನ ಬಳಸಿ ಭಾರತ್ಕೆ ಮಸಿ ಬಳಿಯಲು ಈ ಕೆಲಸ ಮಾಡಿದ್ದಾರೆ ಎಂದು ಆಕ್ರೋಶಗಳು ವ್ಯಕ್ತವಾಗುತ್ತಿದೆ. ಈ ವಿಡಿಯೋ ಜೊತೆಗೆ ಪತಿ ಸಚಿನ್ ಪ್ರೀತಿ ಅರಸಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಮೇಲೆ ಕೈಮಾಡಿದ್ದಾನೆ ಎಂದು ವದಂತಿಗಳನ್ನು ಹಬ್ಬಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಪ್ರಯತ್ನವನ್ನು ಈ ವಿಡಿಯೋ ಮೂಲಕ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸೀಮಾ ಹೈದರ್ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಸಚಿನ್ ಜೊತೆ ನೋಯ್ಡಾದಲ್ಲಿ ವಾಸವಾಗಿರುವ ಸೀಮಾ ಹೈದರ್ 2024ರಲ್ಲಿ ತಾಯಿಯಾಗಲಿರುವ ಸುದ್ದಿಯನ್ನು ಬಹಿರಂಗಪಡಿಸಿದ್ದರು. ಸೀಮಾ ಮತ್ತು ಸಚಿನ್ ಇಬ್ಬರೂ ಸಹ ಪಬ್‌ಜಿ ಆಟದ ಮೂಲಕ 2019ರಲ್ಲಿ ಪರಸ್ಪರ ಪರಿಚಯವಾಗಿದ್ದರು. ನಂತರ ಅವರ ಗೆಳೆತನ ಪ್ರೇಮಕ್ಕೆ ತಿರುಗಿ 2023ರಲ್ಲಿ ಮೊದಲ ಬಾರಿಗೆ ನೇಪಾಳದಲ್ಲಿ ಪರಸ್ಪರರು ಭೇಟಿಯಾಗಿದ್ದರು. ನಂತರ ಸೀಮಾ ಭಾರತಕ್ಕೆ ತನ್ನ ಮಕ್ಕಳೊಂದಿಗೆ ವಲಸೆ ಬಂದಿದ್ದಳು.
ಗುಡ್‌ನ್ಯೂಸ್ ಕೊಟ್ಟ ಸಚಿನ್, ತಾಯಿಯಾಗಲಿದ್ದಾರೆ ಸೀಮಾ ಹೈದರ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ