2ನೇ ಅತ್ಯಾಧುನಿಕ VLF ರೇಡಾರ್ ಕೇಂದ್ರದಿಂದ ಪ್ರಾಣಿ-ಸಸ್ಯ ಸಂಕುಲಕ್ಕೆ ಸಮಸ್ಯೆ ಇಲ್ಲ, ನೌಕಾಪಡೆ ಸ್ಪಷ್ಟನೆ!

Published : Apr 08, 2024, 07:22 PM IST
2ನೇ ಅತ್ಯಾಧುನಿಕ VLF ರೇಡಾರ್  ಕೇಂದ್ರದಿಂದ ಪ್ರಾಣಿ-ಸಸ್ಯ ಸಂಕುಲಕ್ಕೆ ಸಮಸ್ಯೆ ಇಲ್ಲ, ನೌಕಾಪಡೆ ಸ್ಪಷ್ಟನೆ!

ಸಾರಾಂಶ

ತೆಲಂಗಾಣದಲ್ಲಿ ಆರಂಭಿಸಿರುವ ಭಾರತೀಯ ನೌಕಾಪಡೆಯ 2ನೇ ಅತ್ಯಾಧುನಿಕ  VLF ರೇಡಾರ್ ಕೇಂದ್ರದಿಂದ ಪ್ರಾಣಿ ಹಾಗೂ ಸಸ್ಯ ಸಂಕುಲಕ್ಕೆ ಯಾವುದೇ ಸಮಸ್ಯೆ ಇಲ್ಲ. ಈ ಕುರಿತು ತಪ್ಪು ಮಾಹಿತಿಗಳು ವರದಿಯಾಗುತ್ತಿರುವ ಬೆನ್ನಲ್ಲೇ ನೌಕಾಪಡೆ ಮೂಲಗಳು ಏಷ್ಯಾನೆಟ್ ನ್ಯೂಸ್‌ಗೆ ತಿಳಿಸಿದೆ.  

ವಿಕರಾಬಾದ್(ಏ.08) ಭಾರತೀಯ ನೌಕಾಪಡೆ ಹೊಸದಾಗಿ ಆರಂಭಿಸಿರುವ VLF ರೇಡಾರ್ ಸಂವಹನ ಕೇಂದ್ರದ ಕುರಿತು ಸ್ಥಳೀಯ ಮಟ್ಟದಲ್ಲಿ ಹಲವು ವರದಿಗಳು ಹರಿದಾಡುತ್ತಿದೆ. ತೆಲಂಗಾಣದ ವಿಕರಾಬಾದ್‌ನಲ್ಲಿ ಸ್ಥಾಪಿತಗೊಂಡಿರುವ ಈ ಕೇಂದ್ರದಿಂದ ಪ್ರಾಣಿ ಹಾಗೂ ಸಸ್ಯ ಸಂಕುಲಕ್ಕೆ ಅಪಾಯವಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕೇಂದ್ರದಿಂದ ಹೊಸ ಸೂಸುವ ವಿಕಿರಣಗಳು ಪ್ರಾಣಿ ಹಾಗೂ ಸಸ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರಿದಿಯಾಗಿತ್ತು. ಆದರೆ ಇದು ತಪ್ಪು ಮಾಹಿತಿಯಾಗಿದ್ದು, ಅತ್ಯಾಧುನಿಕ VLF ರೇಡಾರ್ ಸಂವಹನ ಕೇಂದ್ರದಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನೌಕಾಸೇನಾ ಮೂಲಗಳು ಏಷ್ಯಾನೆಟ್ ನ್ಯೂಸ್‌ಗೆ ಹೇಳಿವೆ.

ತಮಿಳುನಾಡಿನಲ್ಲಿನ ಇದೇ ರೀತಿಯ ಸಂಹವನ ಕೇಂದ್ರವನ್ನು ಸ್ಥಾಪಿಸಿರುವ ನೌಕಾಪಡೆ ಯಶಸ್ವಿಯಾಗಿ ಕಾರ್ಯನಿರ್ಹಿಸುತ್ತಿದೆ. ಇದರ ಅನುಭವದ ಆಧಾರದ ಮೇಲೆ ಎಲ್ಲಾ ಆಯಾಮಗಳಲ್ಲೂ ಅಧ್ಯಯನ ಮಾಡಲಾಗಿದೆ. ಇದರಿಂದ ಯಾವುದೇ ದುಷ್ಪರಿಣಮಾಗಳಿಲ್ಲ. ಮಾನವರು, ಪ್ರಾಣಿಗಳು ಸೇರಿದಂತೆ ಜೀವ ಸಂಕುಲಕ್ಕೆ ಯಾವುದೇ ಅಪಾಯವಿಲ್ಲ ಎಂದು ಭಾರತೀಯ ನೌಕಾಪಡೆ ಹೇಳಿದೆ.  

ಸೋಮಾಲಿಯಾ ಕಡಲ್ಗಳ್ಳರಿಂದ 23 ಪಾಕಿಸ್ತಾನಿ ಮೀನುಗಾರರನ್ನು ರಕ್ಷಿಸಿದ ಭಾರತೀಯ ನೌಕಾಸೇನೆ!

ದಾಮುಗುಡೆಂ ಅರಣ್ಯ ಸಂರಕ್ಷಣಾ ಸಮಿತಿ ಪ್ರೊಫೆಸರ್ ಕೆ ಪುರುಷೋತ್ತಮ ರೆಡ್ಡಿ, ಪರಿಸರಕ್ಕೆ ಆಗುತ್ತಿರುವ ಹಾನಿಗಳ ಕುರಿತು ಪ್ರಶ್ನೆ ಎತ್ತಿದ್ದಾರೆ. ನಮ್ಮ ಹೋರಾಟ ಭಾರತೀಯ ನೌಕಾ ಪಡೆ ವಿರುದ್ಧವಲ್ಲ. ಯೋಜನೆಗೆ ವಿರುದ್ಧವೂ ಅಲ್ಲ. ಆದರೆ 1.2 ಮಿಲಿಯನ್‌ಗಿಂತಲೂ ಹೆಚ್ಚು ವಿವಿಧ ಗಾತ್ರದ ಮರಗಳನ್ನು ಹೊಂದಿರುವ ಅರಣ್ಯದಲ್ಲಿ ಈ ಯೋಜನೆ ಇರುವ ಕಾರಣ ಕಾಳಜಿ ಹೆಚ್ಚು. ಇದು ಮೀಸಲು ಅರಣ್ಯಸ್ಥಳವಾಗಿದೆ ಎಂದು ಪುರುಷೋತ್ತಮ ರೆಡ್ಡಿ ಹೇಳಿದ್ದಾರೆ.  

ದಾಮಗುಡೆಮ್ ಅರಣ್ಯದಲ್ಲಿ ಈ ರೇಡಾರ್ ಸಂವಹನ ಕೇಂದ್ರ ಸ್ಥಾಪನೆ ಕಾರಣ ಆತಂಕ ಹೆಚ್ಚಾಗಿದೆ ಎಂದು ಪುರುಷೋತ್ತಮ್ ರೆಡ್ಡಿ ಹೇಳಿದ್ದಾರೆ. ಕೃಷ್ಣಾ ಉಪನದಿಯಾದ ಮೂಸಿ ನದಿಯ ಮೂಲವೂ ಇದೇ ಅನಂತಗಿರಿಯ ಬೆಟ್ಟದ ಶ್ರೇಣಿಯಲ್ಲಿರುವ ದಾಮುಗುಡೆಮ್‌ನಲ್ಲಿ ನೆಲೆಗೊಂಡಿದೆ. ಇದು ನೀರಿನ ಪ್ರಮುಖ ಮೂಲವಾಗಿದೆ. ವಿಶೇಷವಾಗಿ ಹೈದರಾಬಾದ್‌ನ ಹೊರವಲಯದಲ್ಲಿರುವ ಓಸ್ಮಾನ್ ಸಾಗರ್ ಜಲಾಶಯಕ್ಕೆ ನೀರು ಸರಬರಾಜಾಗುತ್ತಿರುವುದು ಇದೇ ಮೂಲದಿಂದ ಎಂದು ಪುರುಷೋತ್ತಮ್ ಹೇಳಿದ್ದಾರೆ. ರೇಡಾರ್ ಕೇಂದ್ರದಿಂದ ಹೊರಸೂಸುವ ವಿಕಿರಣವು ನದಿ ನೀರಿನ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ತಕ್ಷಣೆ ಅಡ್ಡ ಪರಿಣಾಮ ಗೋಚರವಾಗದೇ ಇದ್ದರೂ ಭವಿಷ್ಯದಲ್ಲಿ ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಿದ್ದರು.

ದಾಮಗುಡಂ ಮೀಸಲು ಅರಣ್ಯದಲ್ಲಿ 2900 ಏಕರೆ ಅರಣ್ಯ ಭೂಮಿಯನ್ನು ವೈಜ್ಞಾನಿಕ ಸಮೀಕ್ಷೆ ಬಳಿಕ ಆಯ್ಕೆ ಮಾಡಲಾಗಿದೆ ಎಂದು ನೌಕಾಪಡೆ ಹೇಳಿದೆ.  ಭಾರತೀಯ ನೌಕಾಪಡೆ ಕಾಲಕಾಲಕ್ಕೆ ಪ್ರಮುಖ ಜಾಗತಿಕ ನೌಕಾ ಶಕ್ತಿಯಾಗಿ ಬೆಳೆದು ನಿಂತಿದೆ. ಹೀಗಾಗಿ ದೀರ್ಘ-ಶ್ರೇಣಿಯ ಸಂವಹನದ ಅವಶ್ಯಕತೆಯು ಅನಿವಾರ್ಯವಾಗಿದೆ. ಈ ಯೋಜನೆಯು 10 ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘವಾದ ಚರ್ಚೆಯ ನಂತರ ಫಲಪ್ರದವಾಗಿದೆ  ಎಂದು ನೌಕಾಪಡೆ ಹೇಳಿದೆ

ಹೈಜಾಕ್ ಆದ ಹಡಗಿನ ನೆರವಿಗೆ ಹೋದ ಚಾಪರ್ ಮೇಲೆ ಗುಂಡು ಹಾರಿಸಿದ ಕಡಲ್ಗಳ್ಳರು: ಹೆಡೆಮುರಿ ಕಟ್ಟಿದ ಭಾರತೀಯ ನೇವಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?