'ಅಜ್ಜನ ಸ್ಕೂಟರ್‌ ಮೇಲೆ ಸಾಕಷ್ಟು ರೈಡ್‌ ಮಾಡಿದ್ದೇನೆ. ಈಗ ನನ್ನ ಟೈಮ್‌..' ಪೈಲಟ್‌ ಮೊಮ್ಮಗನ ಮಾತು ಕೇಳಿ ಕಣ್ಣೀರಾದ ತಾತ!

Published : Apr 08, 2024, 07:04 PM IST
'ಅಜ್ಜನ ಸ್ಕೂಟರ್‌ ಮೇಲೆ ಸಾಕಷ್ಟು ರೈಡ್‌ ಮಾಡಿದ್ದೇನೆ. ಈಗ ನನ್ನ ಟೈಮ್‌..' ಪೈಲಟ್‌ ಮೊಮ್ಮಗನ ಮಾತು ಕೇಳಿ ಕಣ್ಣೀರಾದ ತಾತ!

ಸಾರಾಂಶ

ಚೆನ್ನೈ-ಕೊಯಮತ್ತೂರು ನಡುವೆ ಸಂಚಾರ ಮಾಡಿದ ಇಂಡಿಗೋ ವಿಮಾನದಲ್ಲಿ ಪೈಲಟ್‌ ಪ್ರದೀಪ್‌ ಕೃಷ್ಣನ್‌ ತಮ್ಮ ಕುಟುಂಬವನ್ನು ವಿಶೇಷ ಅನೌನ್ಸ್‌ಮೆಂಟ್‌ ಮೂಲಕ ಸ್ವಾಗತಿಸಿರುವ ವಿಡಿಯೋ ಸಾಕಷ್ಟು ವೈರಲ್‌ ಆಗಿದೆ. ಅಜ್ಜ ಇದೇ ಮೊದಲ ಬಾರಿಗೆ ವಿಮಾನ ಏರಿರುವುದು ತಮಗೆ ಖುಷಿ ನೀಡಿದೆ ಎಂದಿದ್ದಾರೆ.

ಚೆನ್ನೈ (ಏ.8): ಕುಟುಂಬ ಸದಸ್ಯರನ್ನು ತಾನು ಪೈಲಟ್‌ ಆಗಿರುವ ವಿಮಾನದಲ್ಲಿ ವಿಶೇಷವಾಗಿ ಸ್ವಾಗತಿಸಿರುವ ಪೈಲಟ್‌ ಪ್ರದೀಪ್‌ ಕೃಷ್ಣನ್‌ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣ ಮಾಡಿದ ಇಂಡಿಗೋ ಪೈಲಟ್‌ನಲ್ಲಿ ಪ್ರದೀಪ್‌ ಕೃಷ್ಣನ್‌ ಪೈಲಟ್‌ ಆಗಿದ್ದು, ತಮ್ಮ ಕುಟುಂಬವನ್ನು ಹೃದಯಸ್ಪರ್ಶಿ ಮಾತುಗಳ ಮೂಲಕ ಅವರು ಸ್ವಾಗತಿಸಿದ್ದಾರೆ. ಅವರ ಮಾತುಗಳಿಗೆ ಸೋಶಿಯಲ್‌ ಮೀಡಿಯಾ ಫಿದಾ ಆಗಿದೆ. ಈ ವಿಡಿಯೋವನ್ನು ಕ್ಯಾಪ್ಟನ್‌ ಪ್ರದೀಪ್‌ ಕೃಷ್ಣನ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಗ ಅನೌನ್ಸ್‌ಮೆಂಟ್‌ ಮಾಡುತ್ತಿದ್ದಂತೆ ತಾಯಿ ಕಣ್ಣೀರು ಒರೆಸಿಕೊಳ್ಳುತ್ತಿರುವ ವಿಡಿಯೋ ಕೂಡ ದಾಖಲಾಗಿದೆ. ವಿಮಾನ ಟೇಕ್‌ಆಫ್‌ ಆಗುವ ಮುನ್ನ, ಕೃಷ್ಣನ್‌ ನ್ನ ಅಜ್ಜ-ಅಜ್ಜಿ ಹಾಗೂ ತಾಯಿ ಇದೇ ವಿಮಾನದಲ್ಲಿದ್ದಾರೆ ಎಂದು ಘೋಷಣೆ ಮಾಡುತ್ತಾರೆ. ಮಗ ಮಾತನಾಡುತ್ತಿದ್ದುದನ್ನು ಕೇಳಿ ಭಾವುಕವಾಗಿ ತಾಯಿ ಕಣ್ಣೀರಿಟ್ಟರೆ, ಅಜ್ಜ ಅಜ್ಜಿ ಕೂಡ ಭಾವುಕರಾಗಿದ್ದಾರೆ.

'ನನ್ನ ಕುಟುಂಬ ಕೂಡ ಇಂದು ನನ್ನೊಂದಿಗೆ ಪ್ರಯಾಣ ಮಾಡುತ್ತಿದ್ದಾರೆ ಎಂದು ಘೋಷಿಸಲು ನನಗೆ ಬಹಳ ಸಂತಸವಾಗುತ್ತಿದೆ' ಎಂದು ಕೃಷ್ಣನ್‌ ಹೇಳಿದ್ದಾರೆ. ನನ್ನ ತಾತ, ಪಾಟಿ (ಅಜ್ಜಿ) ಮತ್ತು ಅಮ್ಮ ಇದೇ ವಿಮಾನದ 29ನೇ ಸಾಲಿನಲ್ಲಿ ಕುಳಿತಿದ್ದಾರೆ. ನನ್ನ ಅಜ್ಜ ಇದೇ ಮೊದಲ ಬಾರಿಗೆ ನನ್ನೊಂದಿಗೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಜ್ಜನ ಟಿವಿಎಸ್‌ ಸ್ಕೂಟರ್‌ನ ಮೇಲೆ ರೈಡ್‌ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಪ್ರದೀಪ್‌ ಕೃಷ್ಣನ್‌, ಈಗ ನಾನು ಅವರಿಗೆ ನನ್ನ ಕಾಕ್‌ಪಿಟ್‌ನಲ್ಲಿ ಸವಾರಿ ನೀಡಬೇಕಿದೆ ಎಂದು ತಮಾಷೆ ಮಾಡಿದ್ದಾರೆ.

ಇದೇ ವೇಳೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರಿಗೆ ನನ್ನ ಅಜ್ಜನಿಗೆ ನೀವೂ ಶುಭ ಹಾರೈಸಿ ಎಂದು ಹೇಳಿದಾಗ, ವಯೋವೃದ್ಧರು ತಾವಿದ್ದ ಸೀಟ್‌ನಿಂದ ಮೇಲೆದ್ದು, ಎರಡೂ ಕೈಗಳನ್ನು ಮುಗಿಯುತ್ತಾ ಎಲ್ಲರಿಗೂ ನಮಸ್ಕರಿಸಿದರು. ಇದನ್ನು ನೋಡಿದ ಇಡೀ ಕ್ಯಾಬಿನ್‌ ಅವರ ಆಕರ್ಷಕ ವ್ಯಕ್ತಿತ್ವಕ್ಕೆ ಮೆಚ್ಚುಗೆ ಸೂಚಿಸಿತು. "ನನ್ನ ದೊಡ್ಡ ಫ್ಲೆಕ್ಸ್. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿಮಾನದಲ್ಲಿ ಹೋಗುವುದು ಪ್ರತಿಯೊಬ್ಬ ಪೈಲಟ್‌ನ ಕನಸು" ಎಂದು ಕೃಷ್ಣನ್ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಲಿಪ್‌ಲಾಕ್‌, ರೋಮಾನ್ಸ್‌ ಮಾಡೋದಿದ್ರೆ ಈ ನಟನ ಜೊತೆ ಮಾತ್ರ ಎಂದ ಸ್ಟಾರ್‌ ನಟಿ

ಈ ವೀಡಿಯೊ Instagram ನಲ್ಲಿ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸೋಶಿಯಲ್‌ ಮೀಡಿಯಾ ಯೂಸರ್‌ಗಳು  ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ ಖುಷಿಯ ಕ್ಷಣವನ್ನು ಶ್ಲಾಘಿಸಿದ್ದಾರೆ. 2018ರಲ್ಲಿ ಪ್ರದೀಪ್‌ ಕೃಷ್ಣನ್‌ ತಮ್ಮ ತಾಯಿ ಹಾಗೂ ಅಜ್ಜಿಯನ್ನು ತಾವು ಪೈಲಟ್‌ ಆಗಿದ್ದ ವಿಮಾನದಲ್ಲಿಯೇ ಚೆನ್ನೈನಿಂದ ಸಿಂಗಾಪುರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಕೃಷ್ಣನ್‌ ಇವರಿಬ್ಬರ ಕಾಲು ಮುಟ್ಟಿ ನಮಸ್ಕರಿಸಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು. 

ಹಣದಾಸೆಗೆ 91 ವರ್ಷದ ದೊಡ್ಡಮ್ಮನನ್ನು ಮದುವೆಯಾದ 23ರ ಯುವಕ!

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ