ಮನುಷ್ಯರಾಗಿ ಹುಟ್ಟಿದ ನಮ್ಮದದೆಷ್ಟು ಬೇಜವಾಬ್ದಾರಿತನದ ವರ್ತನೆ ನೋಡಿ.. ವೈರಲ್ ವೀಡಿಯೋ

By Anusha Kb  |  First Published May 23, 2023, 1:58 PM IST

ಪ್ರತಿ ಮನೆಯಿಂದ ಮನದಿಂದ ಸ್ವ ಇಚ್ಛೆಯಿಂದ ಬದಲಾವಣೆಗೆ ಮುಂದಾಗದ ಹೊರತು ಎಷ್ಟೇ ಕಾನೂನುಗಳು ಬಂದರೂ ಮನುಷ್ಯ ಬದಲಾಗುವುದಿಲ್ಲ. ಸಾರ್ವಜನಿಕ ಸ್ಥಳವನ್ನು ಕೂಡ ನಮ್ಮದೆನ್ನುವ ಭಾವದಿಂದ ನೋಡಿದಾಗ, ಬದಲಾವಣೆ ಒಳಗಿನಿಂದ ಒಳಗಣ್ಣಿನಿಂದ ಆದಾಗ ಮಾತ್ರ ಮುಂದಿನ ತಲೆಮಾರಿಗೆ ನಾವು ಉತ್ತಮ ಪರಿಸರವನ್ನು ಉಳಿಸಲು ಸಾಧ್ಯ


ಚೆನ್ನೈ:  ಮನುಷ್ಯನನ್ನು ಹೊರತುಪಡಿಸಿ ಮತ್ಯಾವ ಜೀವಿಯೂ ಭೂಮಿಯಲ್ಲಿ ಜನಿಸಿ ಭೂಮಿಯ ಮೇಲೆಯೇ ದೌರ್ಜನ್ಯವೆಸಗುವುದಿಲ್ಲ. ಈ ಜೀವ ಜಗತ್ತಿನಲ್ಲಿಯೂ ಪ್ರತಿಯೊಂದು ಜೀವಿಯೂ ಭೂಮಿ ಹಾಗೂ ಪರಿಸರದಲ್ಲಿ ಸಹಬಾಳ್ವೆಯಿಂದಲೇ  ಬಾಳುತ್ತವೆ. ಆದರೆ ಬುದ್ಧಿವಂತನೆನಿಸಿಕೊಂಡ ಮನುಷ್ಯ ಮಾತ್ರ ಅಧುನಿಕತೆಯ ಹೆಸರಿನಲ್ಲಿ ಭೂಮಿಯ ಮೇಲೆ ಅವಾಂತರನ್ನೇ ಸೃಷ್ಟಿಸಿದ್ದಾನೆ. ಮಾನವ ತನ್ನ ಬುದ್ಧಿವಂತಿಕೆಯಿಂದ ತನ್ನ ಅಗತ್ಯಗಳಿಗಾಗಿ ಪತ್ತೆ ಮಾಡಿದ ಹಲವು ಅವಿಷ್ಕಾರಗಳು ಬೇಡದ ತ್ಯಾಜ್ಯವಾಗಿ ಭೂಮಿ ಹಾಗೂ ನಮ್ಮ ಇಡೀ ಪರಿಸರದ ಒಡಲು ಸೇರುತ್ತಿದೆ. ಇಂತಹ, ಮಣ್ಣಿನೊಂದಿಗೆ ಸವಕಳಿಯಾಗದ ನೀರಲ್ಲಿ ಕರಗದ ಮನುಕುಲಕ್ಕೆ ದೊಡ್ಡ ಸಮಸ್ಯೆಯಾಗಿರುವ ಮಾನವನ ದೊಡ್ಡ ಸಂಶೋಧನೆಗಳಲ್ಲಿ ಒಂದು ಈ ಪ್ಲಾಸ್ಟಿಕ್ (Plastic). ಇದರ ಸರಿಯಾದ ನಿರ್ವಹಣೆ ಇಲ್ಲದೇ ಭೂಮಿಯೂ ಹಾಳಾಗುತ್ತಿದ್ದು, ಭೂಮಿಯಲ್ಲಿರುವ ಇತರ ಜೀವಜಂತುಗಳಿಗೆ ಮಾರಕವಾಗುತ್ತಿದೆ.

ವಿವಿಧ ರೂಪಗಳಲ್ಲಿ ಇರುವ ಪ್ಲಾಸ್ಟಿಕ್ ಎಂಬ ರಾಕ್ಷಸನ ಕಬಂಧ ಬಾಹುಗಳಿಗೆ ಸಿಲುಕಿ ಹಸು ಕರುಗಳು, ಸಮುದ್ರ ಜೀವಿಗಳು ಹಕ್ಕಿಗಳು ಸೇರಿದಂತೆ ಪ್ರತಿಯೊಂದು ಜೀವಜಂತುಗಳು ಬಳಲುತ್ತಿದೆ. ಸರ್ಕಾರ ಪ್ಲಾಸ್ಟಿಕ್‌ನ ನಿರ್ಮೂಲನೆಗೆ ಅನೇಕ  ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸಮರ್ಪಪಕ ನಿರ್ವಹಣೆಗೆ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ. ಆದರೆ ಜನ ಮಾತ್ರ ಅವರಿಷ್ಟದಂತೆ ವರ್ತಿಸುವ ಪರಿಣಾಮ ಪ್ಲಾಸ್ಟಿಕ್‌ನ ನಿರ್ವಹಣೆ ಇಡೀ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿದೆ. 

Tap to resize

Latest Videos

ಹಸುವಿನ ಹೊಟ್ಟೆಯಲ್ಲಿತ್ತು 15 ಕೆಜಿ ಪ್ಲಾಸ್ಟಿಕ್: ಪಶು ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಕಾಡುಗುಡ್ಡಗಳಿಗೆ, ಸಮುದ್ರ ತೀರಗಳಿಗೆ, ಬೀಚ್‌ಗಳಿಗೆ (Beach) ಬೆಟ್ಟ ಗುಡ್ಡಗಳಿಗೆ (Mountain)ಚಾರಣವೆಂದು ಪ್ರವಾಸವೆಂದು ತೆರಳುವ ಅನೇಕರು ಅಲ್ಲೂ ತಮ್ಮ ನಿರುಪಯುಕ್ತ ಪರಿಸರದಲ್ಲಿ ಕರಗದ ಪ್ಲಾಸ್ಟಿಕ್‌ಗಳನ್ನು ಬಿಟ್ಟು ಬರುತ್ತಿದ್ದು, ಜನರ ಭೇಟಿ ಇಲ್ಲದೇ ಸುಂದರವಾಗಿದ್ದ ಪರಿಸರವನ್ನೂ ಕೂಡ ಹಾಳು ಮಾಡುತ್ತಿದ್ದಾರೆ. ಚೆನ್ನೈನ ಬೇಸೆಂಟ್‌ ನಗರದ ಬಿಚ್‌ನಲ್ಲಿ  ಈ ರೀತಿ ಪ್ರವಾಸಿಗರು ಸಮುದ್ರ ತೀರದಲ್ಲಿ ಎಸೆದು ಹೋದ, ಸಾಗರ ಸೇರಿದ ಸಾವಿರಾರು ಪ್ಲಾಸ್ಟಿಕ್ ವಸ್ತುಗಳನ್ನು ಪೇರಿಸಿ ದೊಡ್ಡದಾದ ಕಲಾಕೃತಿಯನ್ನು ನಿರ್ಮಿಸಲಾಗಿದೆ. ಇದು ಮನುಷ್ಯರ ಬೇಜವಾಬ್ದಾರಿತನಕ್ಕೆ ದೊಡ್ಡ ಸಾಕ್ಷಿಯಾಗಿದೆ. 

ಕೇವಲ ಬೀಚ್‌ನಲ್ಲಿ ಸಿಕ್ಕಿದಂತಹ ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯಗಳನ್ನು ಬಳಸಿ ಮೀನಿನ ಆಕಾರದ ಈ ದೊಡ್ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಈ ಮೂಲಕ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಎಸೆದು ಹೋಗದಂತೆ ಜನರಿಗೆ ಬೀಚ್‌ನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಷ್ಟು ದೊಡ್ಡ ಕಲಾಕೃತಿ ನಿರ್ಮಿಸಬೇಕಾದರೆ ನೀವೇ ಯೋಚನೆ ಮಾಡಿ ಜನ ಆ ಬೀಚ್‌ನಲ್ಲಿ ಎಷ್ಟೊಂದು ಪ್ಲಾಸ್ಟಿಕ್‌ ಅನ್ನು ಎಸೆದಿರಬಹುದು ಎಂಬುದು. 

ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media)ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಹೀಗೆ ಬರೆದುಕೊಂಡಿದ್ದಾರೆ.  ನಾವು ಇಂದು ಆಯೋಜಿಸಲಾದ ಮೆಗಾ ಬೀಚ್ ಕ್ಲೀನ್ ಅಪ್ ಕಾರ್ಯಕ್ರಮವನ್ನು ಗುರುತಿಸಲು ಚೆನ್ನೈನ ಬೆಸೆಂಟ್ ನಗರ ಬೀಚ್‌ನಲ್ಲಿ ಸಮುದ್ರದಲ್ಲಿ ಹಾಗೂ ತೀರದಲ್ಲಿ ಸಿಕ್ಕಿದ ಪ್ಲಾಸ್ಟಿಕ್ ತ್ಯಾಜ್ಯದಿಂದ ಮಾಡಿದ ಈ ಕಲಾಕೃತಿಯನ್ನು ಇಲ್ಲಿ ಹಾಕಿದ್ದೇವೆ. ಇದು ನಮ್ಮ ಸಾಗರಗಳಲ್ಲಿನ ಮಾಲಿನ್ಯದ ವಾಸ್ತವತೆಯನ್ನು ತೋರಿಸುತ್ತಿದೆ. ಇದು ಸಾಗರ ಜೀವವೈವಿಧ್ಯಕ್ಕೆ ಗಂಭೀರ ಅಪಾಯದ ಬಗ್ಗೆ ಎಚ್ಚರಿಕೆಯನ್ನು ಮೂಡಿಸುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ. 

ಬಂದಿದೆ ನೋಡಿ ತೆಂಗಿನ ಗರಿ ಸ್ಟ್ರಾ: ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶ ಕಂಡ ಯುವೋದ್ಯಮಿಗಳು

ಈ ವಿಡಿಯೋ ನೋಡಿದ ಅನೇಕರು ಪ್ಲಾಸ್ಟಿಕ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಮ್ಮ ಸಮುದ್ರಗಳು ಮತ್ತು ಸಾಗರಗಳಲ್ಲಿ ಪ್ಲಾಸ್ಟಿಕ್‌ಗಳನ್ನು ಎಸೆಯುವುದನ್ನು ತಡೆಯಲು ಹೆಚ್ಚಿನ ಜಾಗೃತಿ ಮತ್ತು ಕ್ರಮದ ಅಗತ್ಯವಿದೆ. ನಮ್ಮ ನೀರಿನ ಮೂಲಗಳನ್ನು ಕಲುಷಿತಗೊಳಿಸುವುದನ್ನು ತಡೆಯಲು ಇನ್ನೂ ಹೆಚ್ಚಿನ ಕ್ರಮಗಳ ಅಗತ್ಯವಿದೆ, ಏಕೆಂದರೆ ಈ ಪ್ಲಾಸ್ಟಿಕ್‌ಗಳು ಸಿಹಿನೀರು, ಕರಾವಳಿ ಮತ್ತು ಸಮುದ್ರ ಮೀನುಗಳು, ಪಕ್ಷಿಗಳು, ಆಮೆಗಳು ಮತ್ತು ಇನ್ನೂ ಹೆಚ್ಚಿನ ಜೀವಿಗಳ ಉಸಿರುಗಟ್ಟಿಸುತ್ತವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಮಾನವ ವಾಸ್ತವ ಅರಿತುಕೊಂಡು ಪ್ರಜ್ಞಾಪೂರ್ವಕವಾಗಿ ಬದುಕಲು ಪ್ರಾರಂಭಿಸುವ ಸಮಯ ಬಂದಿದೆ. ನಾವು ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಮತ್ತು ಸಾಗರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದನ್ನು ಕಸ ಸುರಿಯುವ ಸ್ಥಳವನ್ನಾಗಿ ಮಾಡಬಾರದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಒಟ್ಟಿನಲ್ಲಿ ಪ್ರತಿ ಮನೆಯಿಂದ ಮನದಿಂದ ಸ್ವ ಇಚ್ಛೆಯಿಂದ ಬದಲಾವಣೆಗೆ ಮುಂದಾಗದ ಹೊರತು ಎಷ್ಟೇ ಕಾನೂನುಗಳು ಬಂದರೂ ಮನುಷ್ಯ ಬದಲಾಗುವುದಿಲ್ಲ. ಸಾರ್ವಜನಿಕ ಸ್ಥಳವನ್ನು ಕೂಡ ನಮ್ಮದೆನ್ನುವ ಭಾವದಿಂದ ನೋಡಿದಾಗ, ಬದಲಾವಣೆ ಒಳಗಿನಿಂದ ಒಳಗಣ್ಣಿನಿಂದ ಆದಾಗ ಮಾತ್ರ ಮುಂದಿನ ತಲೆಮಾರಿಗೆ ನಾವು ಉತ್ತಮ ಪರಿಸರವನ್ನು ಉಳಿಸಲು ಸಾಧ್ಯ ಅಲ್ಲವೇ..!?

We have put up this installation made with plastic waste retrieved from the ocean at Besant Nagar Beach in Chennai to mark the Mega Beach Clean up programme organised today. It not only portrays the sad reality of pollution in our oceans but also raises an alarm about the serious… pic.twitter.com/Vn0a7jhuGj

— Supriya Sahu IAS (@supriyasahuias)

 

click me!