ಶೀಲಾ ದೀಕ್ಷಿತ್‌ರ ಸಲಹೆ ಪಾಲಿಸಿ, ಸುಗ್ರೀವಾಜ್ಞೆ ವಿವಾದದಲ್ಲಿ ಕೇಜ್ರಿವಾಲ್‌ಗೆ ತಿಳಿ ಹೇಳಿದ ಮಾಕೆನ್‌!

By Santosh NaikFirst Published May 23, 2023, 1:04 PM IST
Highlights

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸುಗ್ರೀವಾಜ್ಞೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೊಸ ಹೋರಾಟಕ್ಕೆ ಅಣಿಯಾಗಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅವರು ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರ ಸಲಹೆಯನ್ನು ಈ ವಿಚಾರದಲ್ಲಿ ಪಾಲಿಸುವಂತೆ ತಿಳಿ ಹೇಳಿದ್ದಾರೆ.

ನವದೆಹಲಿ (ಮೇ.23): ಕೇಂದ್ರ ಸರ್ಕಾರ ಹಾಗೂ ದೆಹಲಿ ಸರ್ಕಾರದ ನಡುವೆ ಸುಗ್ರೀವಾಜ್ಞೆ ವಿವಾದ ಇನ್ನಷ್ಟು ಜೋರಾಗಿದೆ. ಈ ನಡುವೆ ಕಾಂಗ್ರೆಸ್‌ ಪಕ್ಷದ ಬೆಂಬಲವನ್ನು ಈ ವಿಚಾರದಲ್ಲಿ ಪಡೆಯವ ನಿರೀಕ್ಷೆ ಇದ್ದ ಆಮ್‌ ಆದ್ಮಿ ಪಾರ್ಟಿಗೆ ಈಗ ಸೋಲಾಗಿದೆ. ಕಾಂಗ್ರೆಸ್‌ ನಾಯಕ ಅಜಯ್‌ ಮಾಕೆನ್‌ ಅವರು ಭಾನುವಾರ ಟ್ವಿಟರ್‌ನಲ್ಲಿ ದೆಹಲಿಯ ಮಾಜಿ ಸಿಎಂ ದಿವಂಗತ ಶೀಲಾ ದೀಕ್ಷಿತ್‌ ಅವರ ಆಡಳಿತದ ಅವಧಿಯನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳುವ ಮೂಲಕ ಕೇಜ್ರಿವಾಲ್‌ಗೆ ಸಲಹೆ ನೀಡಿದ್ದಾರೆ. ಇದೇ ಸಲಹೆಯನ್ನು ಅವರು ಪಾಲಿಸಿದರೆ ಒಳ್ಳೆಯದು ಎಂದೂ ಹೇಳಿದ್ದಾರೆ. 'ದೆಹಲಿಯ ಅಧಿಕಾರಿಗಳೊಂದಿಗೆ ಗೌರವಯುತವಾಗಿ ತೊಡಗಿಸಿಕೊಳ್ಳಿ, ಉತ್ತಮ ಸಂವಾದಗಳನ್ನು ನಡೆಸಿ, ದೆಹಲಿಯ ಪ್ರಗತಿಗಾಗಿ ಅವರ ಮನವೊಲಿಸಿ' ಎಂದು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ನಿಮ್ಮ ನಿರ್ಧಾರಗಳು ಪ್ರಾಮಾಣಿಕವಾಗಿದ್ದರೆ, ಖಂಡಿತವಾಗಿ ಅಧಿಕಾರಿಗಳು ಕೂಡ ಪ್ರಗತಿಗೆ ಕೈಜೋಡಿಸುತ್ತಾರೆ ಎಂದು ಅವರು ಟ್ವಿಟರ್‌ನಲ್ಲಿ ಬರೆದಿದ್ದಾರೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ಕೇಜ್ರಿವಾಲ್ ಅವರ ವಿವಾದಾತ್ಮಕ ನಡವಳಿಕೆಯನ್ನು ಮಾಕೆನ್ ಮತ್ತಷ್ಟು ಎತ್ತಿ ತೋರಿಸಿದರು. ತಮ್ಮ ಕಳವಳವನ್ನು ವ್ಯಕ್ತಪಡಿಸಿದ ಮಾಕೆನ್‌, ಇಂತಹ ಕ್ರಮಗಳು ನಗರದ ಸಂಕಷ್ಟವನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದ್ದಾರೆ.

ಇದೇ ವಿಚಾರದಲ್ಲಿ ಹಿಂದೆ ಆಗಿದ್ದ ಒಂದು ಘಟನೆಯನ್ನು ಮಾಕೆನ್‌ ಅವರು ವಿವರಿಸಿದ್ದಾರೆ. ತಾವು ದೆಹಲಿಯ ಸಾರಿಗೆ ಸಚಿವರಾಗಿದ್ದ ಸಮಯದಲ್ಲಿ ಸಾರಿಗೆ ಆಯುಕ್ತರನ್ನು ತನಗೆ ಹಾಗೂ ಅಂದಿನ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರ ಅರಿವಿಲ್ಲದೆ ಬದಲಾವಣೆ ಮಾಡಲಾಗಿದೆ ಎಂದು ಬಹಿರಂಗಪಡಿಸಿದರು. ಸಾರಿಗೆ ಆಯುಕ್ತರನ್ನು ಬದಲಾವಣೆ ಮಾಡುವ ನಿರ್ಧಾರವನ್ನು ಅಂದಿನ ಲೆಫ್ಟಿನೆಂಟ್‌ ಗವರ್ನರ್‌ ಮಾಡಿದ್ದರು. ನಮ್ಮ ಮನವಿಯನ್ನೂ ಪುರಸ್ಕರಿಸದೇ ತಮ್ಮ ನಿರ್ಧಾರದಲ್ಲಿ ಅಚಲವಾಗಿದ್ದರು. ನಗರದಲ್ಲಿ ವ್ಯಾಪಕವಾಗಿ ಸಿಎನ್‌ಜಿ ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದ ನಿರ್ಣಾಯಕ ಅವಧಿಯಲ್ಲಿ ವರ್ಗಾವಣೆ ಸಂಭವಿಸಿದ್ದರಿಂದ ಮಾಕೆನ್‌ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು.

ರಾಜಕೀಯ ಪ್ರೇರಿತವಾಗಿದ್ದ ಈ ಅಡಚಣೆಯನ್ನು ಬಹಿರಂಗಪಡಿಸಲು ಪತ್ರಿಕಾಗೋಷ್ಠಿಯನ್ನು ನಡೆಸಲು ಉದ್ದೇಶಿಸಿದಾಗ, ಶೀಲಾ ದೀಕ್ಷಿತ್ ನನ್ನನ್ನು ತಡೆದಿದ್ದರು. ತಮ್ಮ ವಿಫಲ ಪ್ರಯತ್ನವನ್ನು ಬಹಿರಂಗಪಡಿಸದಂತೆ ಸಲಹೆ ನೀಡಿದ್ದರು ಎಂದು ಮಾಕೆನ್‌ ಬಹಿರಂಗಪಡಿಸಿದ್ದಾರೆ. "ನಮ್ಮ ವಿಫಲ ಪ್ರಯತ್ನದ ಬಗ್ಗೆ ಯಾರಿಗೂ ಹೇಳಬೇಡಿ. ನಾವು ಪ್ರಯತ್ನಿಸಿದ್ದೇವೆ ಮತ್ತು ಯಶಸ್ವಿಯಾಗಲಿಲ್ಲ' ಎಂದು ಅಧಿಕಾರಿಗಳು ತಿಳಿಯಬಾರದು.  ಅವರು ಕಂಡುಕೊಂಡರೆ, ಮುಂದೆ ಅವರು ನಮ್ಮನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸಬಹುದು" ಎಂದು ಶೀಲಾ ದೀಕ್ಷಿತ್‌ ತಮಗೆ ಎಚ್ಚರಿಸಿದ್ದರು ಎನ್ನುವುದನ್ನು ಮಾಕೆನ್‌ ನೆನಪಿಸಿಕೊಂಡಿದ್ದಾರೆ.

ಹಾಗಿದ್ದರೆ, ಮುಂದೇನು ಮಾಡಬೇಕು ಎಂದು ನಾನು ಅವರನ್ನೇ ಕೇಳಿದಾಗ, 'ಹೊಸದಾಗಿ ಬಂದಿರುವ ಅಧಿಕಾರಿಗೆ ಕರೆ ಮಾಡಿ. ನಿಮ್ಮ ನೇಮಕದಿಂದ ಮುಖ್ಯಮಂತ್ರಿಯವರಿಗೆ ಬಹಳ ಸಂತೋಷವಾಗಿದೆ ಎಂದು ಹೇಳಿದೆ. ಅದರ ಜೊತೆಯಲ್ಲಿಯೇ ಸಿಎನ್‌ಜಿ ಪರವರ್ತನೆಯ ಮಹತ್ವವನ್ನು ಅವರಿಗೆ ತಿಳಿಸಿ ಹೇಳಿದೆ. ಚಹಾ ಕೂಟ ಅಥವಾ ಪಕೋರಾಗಳಿಗೆ ಆಹ್ವಾನ ನೀಡಿ. ಈ ಅಧಿಕಾರಿಗಳು ಯಾರ ಜೊತೆಗೂ ಇರೋದಿಲ್ಲ. ಅವರನ್ನು ಕೌಶಲ್ಯದಿಂದ ನಿಭಾಯಿಸಿ' ಎಂದು ನನಗೆ ತಿಳಿಸಿದ್ದರು.

Title: "An Examination of Reasons to Not Oppose the Ordinance - Administrative, Political, and Legal Aspects"

The discussion must begin with two critical observations.
First, by backing Kejriwal, we are going against the decisions and wisdom of numerous respected leaders: Baba…

— Ajay Maken (@ajaymaken)

 

Latest Videos

ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೇ ಸೇವಾ ಕಾರ್ಯದರ್ಶಿಯನ್ನು ವಜಾ ಮಾಡಿದ ಕೇಜ್ರಿವಾಲ್‌!

ಇದರ ಬೆನ್ನಲ್ಲಿಯೇ ಆದ ಮಹತ್ತರ ಬದಲಾವಣೆಯ ಬಗ್ಗೆಯೂ ಮಾಕೆನ್‌ ಗಮನನೀಡಿದ್ದಾರೆ. ಹೊಸದಾಗಿ ನೇಮಕಗೊಂಡ ಅಧಿಕಾರಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡರು ಮತ್ತು ಆಡಳಿತದೊಂದಿಗೆ ಸಹಕರಿಸಿದರು. ಅವರ ಒಗ್ಗಟ್ಟಿನ ಪ್ರಯತ್ನಗಳ ಮೂಲಕ ಮತ್ತು ವಿವಿಧ ಅಡೆತಡೆಗಳನ್ನು ನಿವಾರಿಸುವ ಮೂಲಕ, ಸುಪ್ರೀಂ ಕೋರ್ಟ್ ಮತ್ತು ಯುಎಸ್ ಸರ್ಕಾರದಿಂದ ಪುರಸ್ಕಾರಗಳನ್ನು ಗಳಿಸಲಾಯಿತು. "ನಾವು ತನ್ನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ CNG ಗೆ ಪರಿವರ್ತಿಸಿದ ಜಾಗತಿಕವಾಗಿ ಮೊದಲ ನಗರವಾಗಿದೆ." ಎಂದು ಮಾಕೆನ್‌ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಬಡವರ ಪಕ್ಷದ ಸಿಎಂ ಅರವಿಂದ್‌ ಕೇಜ್ರಿವಾಲ್‌ರಿಂದ ಮನೆ ನವೀಕರಣಕ್ಕೆ 171 ಕೋಟಿ ಖರ್ಚು: ಕಾಂಗ್ರೆಸ್‌ ಬಾಂಬ್‌!

click me!