ಪಾಕ್‌ ಸಂಘರ್ಷವನ್ನು ಸಮರ್ಥವಾಗಿ ನಿಭಾಯಿಸಲು ಭಾರತದ ಅಧಿಕಾರಿಗಳಿಗೆ ನೆರವಾಗಿದ್ದು ಏನು ಯಾರು?

Published : May 12, 2025, 12:41 PM IST
ಪಾಕ್‌ ಸಂಘರ್ಷವನ್ನು ಸಮರ್ಥವಾಗಿ ನಿಭಾಯಿಸಲು ಭಾರತದ  ಅಧಿಕಾರಿಗಳಿಗೆ ನೆರವಾಗಿದ್ದು ಏನು ಯಾರು?

ಸಾರಾಂಶ

ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಭಾರತದ ಅಧಿಕಾರಿಗಳು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ನೆರವಾಗಿದ್ದು, ರಹಸ್ಯ ಯುದ್ಧ ಕೈಪಿಡಿ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ನವದೆಹಲಿ: ಇತ್ತೀಚಿಗಿನ ಭಾರತ ಪಾಕಿಸ್ತಾನ ನಡುವಣ ಸಂಘರ್ಷದ ಸಮಯದಲ್ಲಿ ಭಾರತದ ಅಧಿಕಾರಿಗಳು ಈ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವುದಕ್ಕೆ ಭಾರತದ ಅತ್ಯಂತ ಗೌಪ್ಯವಾದ ಯುದ್ಧ ಕೈಪಿಡಿ ಕಾರಣ ಎಂದು ಅಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ನೀಲಿ ಬಣ್ಣದ, ಸೀಮಿತ ಆವೃತ್ತಿಯ 200 ಪುಟಗಳ ಈ ಸರ್ಕಾರಿ ಕೈಪಿಡಿ ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ್ ನಂತರದ ಭಾರತ ಪಾಕಿಸ್ತಾನ ಸಂಘರ್ಷವನ್ನು ಸಮರ್ಪಕವಾಗಿ ನಿಭಾಯಿಸಲು ನೆರವಾಯಿತು ಎಂದು ತಿಳಿದು ಬಂದಿದೆ. ಈ ಪುಸ್ತಕವೂ ಎಲ್ಲೂ ಸಾರ್ವಜನಿಕವಾಗಿ ಪ್ರಚಲಿತದಲ್ಲಿ ಇಲ್ಲದ ಸರ್ಕಾರಿ ಪುಸ್ತಕವಾಗಿದ್ದು, ನೀಲಿ ಬಣ್ಣವನ್ನು ಹೊಂದಿದ್ದು, 200 ಪುಟಗಳನ್ನು ಹೊಂದಿರುವ ಸರ್ಕಾರಿ ಮಾರ್ಗದರ್ಶಕ ಕೈಪಿಡಿ ಎಂದು ವರದಿಯಾಗಿದೆ. ಇದು ಸರ್ಕಾರಿ ಅಧಿಕಾರಿಗಳಿಗೆ  ಸಶಸ್ತ್ರ ಸಂಘರ್ಷದ ಸಮಯದಲ್ಲಿ  ಸರ್ಕಾರದ ವಿವಿಧ ಅಂಗಗಳ ಪ್ರತಿಕ್ರಿಯೆ ಮತ್ತು ಕಾರ್ಯಗಳನ್ನು ವಿವರಿಸುವ ಕೈಪಿಡಿಯಾಗಿ ಕಾರ್ಯನಿರ್ವಹಿಸಿದೆ ಎಂದು ವರದಿಯಾಗಿದೆ.

ಯೂನಿಯನ್ ವಾರ್ ಬುಕ್ 2010 ಇದು ಸೀಮಿತ ಆವೃತ್ತಿಯನ್ನು ಹೊಂದಿದ್ದು, ಇದು ಎಷ್ಟು ರಹಸ್ಯ ಪುಸ್ತಕವೆಂದರೆ, ರಕ್ಷಣಾ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ವಾರ್ಷಿಕವಾಗಿ ಅದನ್ನು ತಯಾರಿಸಲು ಮತ್ತು ನವೀಕರಿಸಲು ಸಹಾಯ ಮಾಡಿದ ಕ್ಯಾಬಿನೆಟ್ ಸಚಿವಾಲಯದ ಅಧಿಕಾರಿಗಳು ಅದರ ನಿಜವಾದ ಪಾಲಕರು ಯಾರು ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಕೇಂದ್ರ ಸಚಿವಾಲಯಗಳನ್ನು ಹೊರತುಪಡಿಸಿ ಪ್ರತಿ ರಾಜ್ಯ ಮುಖ್ಯ ಕಾರ್ಯದರ್ಶಿಯೊಂದಿಗೆ ಇದರ ಒಂದು ಪ್ರತಿ ಇದೆ ಎಂದು ಆಂಗ್ಲ ಮಾಧ್ಯಮ ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿದೆ.

ಇದರಲ್ಲಿ ಅಗ್ನಿಶಾಮಕ ಕವಾಯತುಗಳಿಂದ ಹಿಡಿದು ಅಪಾಯಕಾರಿ ಸ್ಥಳದಿಂತ ಜನರನ್ನು ಸ್ಥಳಾಂತರಿಸುವವರೆಗೆ, ಸೈರನ್‌ಗಳು ಸೇರಿದಂತೆ ಸಂಪೂರ್ಣ ತುರ್ತು ಸಂದರ್ಭದಲ್ಲಿ  ಮಾಡಬೇಕಾದ ಕೆಲಸದ ಪಟ್ಟಿಯ ವಿವರವಿದ್ದು, ಈ ಎಲ್ಲಾ ಮಹತ್ವದ ಜವಾಬ್ದಾರಿಯ ಹೊಣೆಯನ್ನು ಹೊತ್ತಿರುವ ಅಧಿಕಾರಿಗಳ ಮೇಜುಗಳ ಮೇಲೆ ಇರುವ ಈ ಪುಸ್ತಕವು ಅವರಿಗೆ ಈ ಬಗ್ಗೆ ಮಾರ್ಗದರ್ಶನ ಮಾಡುತ್ತದೆ.

ಯುದ್ಧದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಏನು ಮಾಡಬೇಕೆಂದು ಇದು ಈ ಪ್ರಮುಖ ಅಧಿಕಾರಿಗಳಿಗೆ ಹೇಳುತ್ತದೆ. ಹೀಗಾಗಿ ಯಾವುದೇ ಗೊಂದಲವಿರುವುದಿಲ್ಲ ಮತ್ತು ಯಾವ ಶಿಷ್ಟಾಚಾರವನ್ನು ಅನುಸರಿಸಬೇಕೆಂಬುದರ ಬಗ್ಗೆ ಎಲ್ಲರಿಗೂ ಸ್ಪಷ್ಟವಾದ ಕಲ್ಪನೆ ಇರುತ್ತದೆ ಎಂದು ಒಬ್ಬ ಹೆಸರು ಹೇಳಲು ಇಚ್ಚಿಸದ ಪ್ರಮುಖ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.


ವಿಶೇಷವೆಂದರೆ ಯುದ್ಧ ಕಾಲದಲ್ಲಿ ಅಗತ್ಯವಾಗಿರುವ ಈ ಪುಸ್ತಕದ ಪರಿಕಲ್ಪನೆಯು ವಸಾಹತುಶಾಹಿ ಕಾಲಕ್ಕೆ ಸೇರಿದೆ. ಆದರೆ ಪ್ರತಿ 15 ವರ್ಷಗಳಿಗೊಮ್ಮೆ ಇದರ ಹೊಸ ಆವೃತ್ತಿಯನ್ನು ಹೊರತರಲಾಗುತ್ತದೆ. 2010 ರಲ್ಲಿ ಭದ್ರತಾ ಅಧಿಕಾರಿಗಳು ಸೇರಿದಂತೆ 174 ಜನರನ್ನು ಬಲಿತೆಗೆದುಕೊಂಡ 26/11 ಭಯೋತ್ಪಾದಕ ದಾಳಿಯ ಎರಡು ವರ್ಷಗಳ ನಂತರ ಈ ಪುಸ್ತಕದ  ಹೊಸ ಆವೃತ್ತಿಯನ್ನು ತರಲಾಯಿತು. ಇದರ ಸಂಕಲನವನ್ನು ಗೃಹ ಕಾರ್ಯದರ್ಶಿ ಜಿಕೆ ಪಿಳ್ಳೈ ಮಾಡಿದ್ದಾರೆ ಎನ್ನಲಾಗಿದ್ದು, ಇದರ ಬಗ್ಗೆ ಅವರಲ್ಲಿ ಕೇಳಿದಾಗ ಯಾವುದೇ ಮಾಹಿತಿ ನೀಡಿಲ್ಲ. 

ಪುಸ್ತಕದ ಯಾವ ವಿಷಯಗಳು ರಹಸ್ಯವಾಗಿದ್ದರೂ, 15 ವರ್ಷಗಳಷ್ಟು ಹಳೆಯದಾದ ಈ ಕೈಪಿಡಿಯನ್ನು ಎಲ್ಲಾ ಅಧಿಕಾರಿಗಳು ಸಾರ್ವಜನಿಕವಾಗಿ ಉಲ್ಲೇಖಿಸುತ್ತಿದ್ದಾರೆ. ಉದಾಹರಣೆಗೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಶುಕ್ರವಾರ ರಾತ್ರಿ ಮುಚ್ಚಿದ ಬಾಗಿಲಿನ ಸಭೆ ನಡೆಸಿದ ನಂತರ, ಸಿಎಂ ಕಚೇರಿಯು ಆ ಸಭೆಯ ಮುಖ್ಯಾಂಶಗಳ ಕುರಿತು ಮರಾಠಿಯಲ್ಲಿ ಒಂದು ಟಿಪ್ಪಣಿಯನ್ನು ಬಿಡುಗಡೆ ಮಾಡಿತು. ಅದರ ಒಂದು ಸಾಲಿನಲ್ಲಿ ಕೇಂದ್ರ ಸರ್ಕಾರದ ಕೇಂದ್ರ ಯುದ್ಧ ಪುಸ್ತಕವನ್ನು ಅಧ್ಯಯನ ಮಾಡಿ ಮತ್ತು ಸಂಬಂಧಪಟ್ಟ ಎಲ್ಲರಿಗೂ ಸೂಚನೆಗಳ ಬಗ್ಗೆ ತಿಳಿಸಿ ಎಂದು ಬರೆಯಲಾಗಿದೆ.

ಆದರೆ 2010 ರ ಆವೃತ್ತಿಯು ಹಳೆಯದಾಗುವುದಿಲ್ಲವೇ? ಅದು ತಪ್ಪು ಮಾಹಿತಿ ಮತ್ತು ತಂತ್ರಜ್ಞಾನದ ಎಲ್ಲಾ ಆಧುನಿಕ ಸಾಧನಗಳ ಬಗ್ಗೆ ತಿಳಿಸುತ್ತವೆಯೇ ಎಂದು ಕೇಳಿದಾಗ ಪ್ರತಿ 15 ವರ್ಷಗಳಿಗೊಮ್ಮೆ ಅಥವಾ ಅದಕ್ಕಿಂತ ಹೆಚ್ಚು ಕಾಲ, ಪ್ರತಿ ವರ್ಷ ಪುಸ್ತಕದ ನವೀಕರಿಸಿದ ಆವೃತ್ತಿಯನ್ನು ಹೊರತರಲಾಗುತ್ತದೆ, ಇದಕ್ಕೆ  ಮೂರು ಸಚಿವಾಲಯಗಳು ಟಿಪ್ಪಣಿಗಳನ್ನು ಕಳುಹಿಸುತ್ತವೆ. ನಂತರ ಅವುಗಳನ್ನು ಪುಸ್ತಕದ ಮೇಲೆ ಅಂಟಿಸಲಾಗುತ್ತದೆ. ತಾಂತ್ರಿಕ ನವೀಕರಣಗಳು ಅದರ ಒಂದು ಭಾಗವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!