
ನವದೆಹಲಿ: ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಆಯೋಜಿಸಲಾಗಿದ್ದ ಜಿ20ಯ ಎಸ್-20 (ವಿಜ್ಞಾನ-20) ಸಭೆಯಲ್ಲಿ ಭಾಗಿಯಾಗಿದ್ದ 100ಕ್ಕೂ ಹೆಚ್ಚು ಗಣ್ಯರು, ಈಶ ಯೋಗ ಕೇಂದ್ರ ಭಾರತದ ಹೊಸ ಗುರುತಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದ್ಗುರು ಅವರು ಇನ್ನರ್ ಎಂಜಿನಿಯರಿಂಗ್ ಟೆಕ್ನಾಲಜೀಸ್ ಫಾರ್ ವೆಲ್ ಬೀಯಿಂಗ್ ವಿಷಯದ ಬಗ್ಗೆ ಸಂವಾದ ನಡೆಸಿದರು.
ನಾವು ಸಂತೋಷದಾಯಕವಾಗಿ ನಮ್ಮನ್ನು ರೂಪಿಸಿಕೊಳ್ಳುವುದು ಮತ್ತು ವೈಜ್ಞಾನಿಕ ಹಾಗೂ ತಾಂತ್ರಿಕ ಪ್ರಗತಿ ನಮ್ಮ ಬದ್ಧತೆಯಾಗಿದೆ. ಇದು ಮಾತ್ರ ಈ ಗ್ರಹದಲ್ಲಿ ನಮ್ಮ ಜೀವನಶೈಲಿಯನ್ನು ಬದಲಾಯಿಸಬಹುದು ಎಂದು ಸದ್ಗುರು ಅವರು ಹೇಳಿದರು. ಈ ಸಮಾವೇಶದಲ್ಲಿ ವಿವಿಧ ದೇಶಗಳ ವಿಜ್ಞಾನಿಗಳು, ಶಿಕ್ಷಣ ತಜ್ಞರು ಸೇರಿದಂತೆ 35 ಮಂದಿ ವಿದೇಶಿ ಗಣ್ಯರು ಹಾಗೂ 65 ಮಂದಿ ಭಾರತೀಯ ಗಣ್ಯರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಹಸಿರು ಇಂಧನ, ಯುನಿವರ್ಸಲ್ ಹೋಲಿಸ್ಟಿಕ್ ಹೆಲ್ತ್, ವಿಜ್ಞಾನವನ್ನು ಸಮಾಜ ಮತ್ತು ಸಂಸ್ಕೃತಿಗೆ ಜೋಡಿಸುವ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಂವಾದದ ಬಳಿಕ ಮಾತನಾಡಿದ ಗಣ್ಯರು, ಹಳೆಯ ವಿಜ್ಞಾನದ ಪರಿಭಾಷೆಗಳು ಈಗ ಅರ್ಥ ಕಳೆದುಕೊಂಡಿವೆ. ಜೀವನಾಧಾರಿತ ವಿಜ್ಞಾನದ ಬಗ್ಗೆ ಚರ್ಚೆ ನಡೆಸಲು ಈಶಾ ಫೌಂಡೇಶನ್ (Isha Foundation) ಅನ್ನು ಆಯ್ಕೆ ಮಾಡಿಕೊಂಡಿರುವುದು ಉತ್ತಮವಾಗಿದೆ. ವಸುಧೈೖವ ಕುಟುಂಬಕಂ ಪರಿಕಲ್ಪನೆಯಲ್ಲಿ ಭಾರತ ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಿರುವುದು ಬಹಳ ಅರ್ಥಪೂರ್ಣವಾಗಿದೆ. ಈ ಕಾರ್ಯಕ್ರಮವನ್ನು ಯಾವುದೇ 5 ಸ್ಟಾರ್ ಹೋಟೆಲ್‌ನಲ್ಲಿ ನಡೆಸಬಹುದಾಗಿತ್ತು. ಆದರೆ ಈಶದಲ್ಲಿ ನಡೆಸುತ್ತಿರುವುದು ನೆನಪಲ್ಲುಳಿಯುತ್ತದೆ ಎಂದರು.
Save Soil: ಮಣ್ಣಿನ ನಿರ್ಣಾಯಕ ಪರಿಸ್ಥಿತಿಯ ಬಗ್ಗೆ 'ಸದ್ಗುರು ಜಗ್ಗಿ ವಾಸುದೇವ್' ಜಾಗತಿಕ ಜಾಗೃತಿ
Sadhguru Exclusive Interview; ಸಾವಯವ ಕೃಷಿ ಎಂಬುದೇ ಇಲ್ಲ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ