ಮಾನವಸಹಿತ ಗಗನಯಾನ ಮಿಷನ್! ಇಸ್ರೋನಿಂದ ಲ್ಯಾಂಡಿಂಗ್‌ಗೆ ತಾಲೀಮು!

By Kannadaprabha News  |  First Published Jul 23, 2023, 1:22 PM IST

ಮಾನವ ಸಹಿತ ಗಗನಯಾನ ನೌಕೆಯ ರಿಕವರಿ (ಲ್ಯಾಂಡಿಂಗ್‌/ಭೂಸ್ಪರ್ಶ) ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭಾರತೀಯ ನೌಕಾ ಪಡೆ ಜು.20ರಂದು ವಿಶಾಖಪಟ್ಟಣ ಬಂದರಿನಲ್ಲಿ ಜಂಟಿಯಾಗಿ ನಡೆಸಿವೆ.


ಬೆಂಗಳೂರು: ಮಾನವ ಸಹಿತ ಗಗನಯಾನ ನೌಕೆಯ ರಿಕವರಿ (ಲ್ಯಾಂಡಿಂಗ್‌/ಭೂಸ್ಪರ್ಶ) ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಭಾರತೀಯ ನೌಕಾ ಪಡೆ ಜು.20ರಂದು ವಿಶಾಖಪಟ್ಟಣ ಬಂದರಿನಲ್ಲಿ ಜಂಟಿಯಾಗಿ ನಡೆಸಿವೆ. ಮಾನವ ಸಹಿತ ಗಗನಯಾನ ನೌಕೆಯು ತನ್ನ ಕಾರ್ಯಾಚರಣೆ ಮುಗಿಸಿದ ಬಳಿಕ, ಗಗನಯಾನಿಗಳ ಸಮೇತ ಆಗಸದಿಂದ ಭೂಮಿಗೆ ಮರಳಿ ಸಮುದ್ರದಲ್ಲಿ ಇಳಿಯಲಿದೆ. ಈ ಹಂತದ ಸನ್ನದ್ಧ ಸ್ಥಿತಿಯನ್ನು ಪರಿಶೀಲಿಸಲು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಇಸ್ರೋ ಮೊದಲ ಹಂತದಲ್ಲಿ ಮಾನವ ರಹಿತ ಗಗನಯಾನ ಹಮ್ಮಿಕೊಂಡಿದೆ. ಅದರೆ ಫಲಿತಾಂಶ ಆಧರಿಸಿ ಮುಂಬರುವ ವರ್ಷಗಳಲ್ಲಿ ಮೂವರು ಗಗನಯಾತ್ರಿಗಳನ್ನು ಭೂಮಿಯಿಂದ 400 ಕಿ.ಮೀ ಎತ್ತರದ ಕಕ್ಷೆಗೆ ಕಳುಹಿಸಿ ಅಲ್ಲಿ ಮೂರು ದಿನ ಇರಿಸುವ ಕಾರ್ಯಕ್ರಮ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಈ ತಾಲೀಮು ಮಹತ್ವ ಪಡೆದಿದೆ.

Tap to resize

Latest Videos

undefined

ಕಾರ್ಯಾಚರಣೆ ಹೇಗೆ?:

ಮಾಸ್‌ ಮತ್ತು ಶೇಪ್‌ ಸಿಮ್ಯುಲೇಟೆಡ್‌ ಕ್ರ್ಯೂ ಮಾಡ್ಯುಲ್‌ ಮೋಕಪ್‌ ಬಳಸಿ ಆಂಧ್ರಪ್ರದೇಶ ವಿಶಾಖಪಟ್ಟಣದಲ್ಲಿರುವ ನೌಕಾಪಡೆಯ ಪೂರ್ವ ಕಮಾಂಡ್‌ನಲ್ಲಿ ಕಾರ್ಯಾಚರಣೆ ನಡೆಸಲಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ. ಮೋಕಪ್‌ ಅನ್ನುವುದು ಯಾವುದೇ ಪರೀಕ್ಷೆಗಳಲ್ಲಿ ಅತ್ಯಂತ ಮಹತ್ವಪೂರ್ಣ ಹಂತವಾಗಿದ್ದು, ಇಲ್ಲಿ ನಿಯಂತ್ರಿತ ವಾತಾವರಣದಲ್ಲಿ ಎಲ್ಲಾ ಅಗತ್ಯ ಕಾರ್ಯಾಚರಣೆ ನಡೆಸಿದ ಸಾಧನದ ಪರಿಪೂರ್ಣತೆಯನ್ನು ಅಳೆಯಲಾಗುತ್ತದೆ. ಗುರುವಾರ ನಡೆದ ಕಾರ್ಯಾಚರಣೆಯ ವೇಳೆ, ನೌಕೆಗೆ ತೇಲುವ ಸಾಧನ ಅಳವಡಿಕೆ, ನೌಕೆಯನ್ನು ಎಳೆದು ತರುವುದು, ಇಡೀ ಪ್ರಕ್ರಿಯೆ ನಿರ್ವಹಣೆ, ಕ್ರ್ಯೂಮಾಡೆಲ್‌ ಅನ್ನು ಹಡಗಿನ ಮೇಲೆ ತರುವುದು ಮೊದಲಾದ ಕೆಲಸಗಳನ್ನು ನಡೆಸಲಾಯಿತು.

ಚಂದ್ರಯಾನ -3ಕ್ಕೆ ಯಾವ ದೇಶವೂ ನೀಡದ ಆಂಪ್ಲಿಫೈಯರ್ ತಯಾರಿಸಿದ ಕನ್ನಡಿಗ ವಿಜ್ಞಾನಿ ದಾರುಕೇಶ್‌

ಈ ಹಿಂದೆ ಕೊಚ್ಚಿಯಲ್ಲಿನ ಇಸ್ರೋ ಕಚೇರಿಯೊಳಗೆ ನಿರ್ಮಿಸಲಾಗಿರುವ ಸಮುದ್ರದ ರೀತಿಯ ವಾತಾವರಣದಲ್ಲಿ ಅಣಕು ಕಾರಾರ‍ಯಚರಣೆ ನಡೆಸಲಾಗಿತ್ತು. ಆ ಕಾರ್ಯಾಚರಣೆ ವೇಳೆ ಲಭ್ಯವಾದ ಮಾಹಿತಿ ಆಧರಿಸಿ, ಅದರಲ್ಲಿ ಆದ ಲೋಪಗಳನ್ನು ಸರಿಪಡಿಸಿ ಹಾಗೂ ಕೆಲವೊಂದು ಮಾರ್ಪಾಡುಗಳನ್ನು ಮಾಡಿ ಈ ಕಾರ್ಯಾಚರಣೆ ನಡೆಸಲಾಯಿತು ಎಂದು ಇಸ್ರೋ ಮಾಹಿತಿ ನೀಡಿದೆ.

ಬಾಹ್ಯಾಕಾಶಕ್ಕೆ ತೆರಳಿದ ಮೊದಲ ಭಾರತೀಯ, ಇಂದಿಗೂ ಸಿಂಪಲ್‌ ಲೈಫ್‌ ಬದುಕುತ್ತಿರುವ ರಾಕೇಶ್‌ ಶರ್ಮ!

click me!