
ಶ್ರೀಹರಿಕೋಟ(ಫೆ.15): ISRO ನ್ಯಾನೋ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ. ಈ ಉಪಗ್ರಹಕ್ಕೆ ದೇಶದ ಬಾಹ್ಯಾಕಾಶ ಪಿತಾಮಹ ಎಂದೇ ಗುರುತಿಸಿಕೊಂಡಿರುವ ಸತೀಶ್ ಧವನ್ ಹೆಸರನ್ನು ಇಡಲಾಗಿದೆ. ಈ ಉಪಗ್ರಹದಲ್ಲಿ ಹಲವು ವಿಶೇಷತೆಗಳಿವೆ. ಈ ಉಪಗ್ರಹ ಭಗವದ್ಗೀತೆಯ ಪ್ರತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಭಾವಚಿತ್ರವನ್ನು ಹೊತ್ತು ನಭೋಮಂಡಲಕ್ಕೆ ಹಾರಲಿದೆ.
ಹೊಸ ವರ್ಷದ ಮೊದಲ ಸಾಹಸಕ್ಕೆ ಇಸ್ರೋ ಸಜ್ಜು
ಭಗವದ್ಗೀತೆ ಹಾಗೂ ಮೋದಿ ಬಾವಚಿತ್ರದ ಜೊತೆ 25,000 ಸಾಧಕರ ಹೆಸರನ್ನು ಈ ನ್ಯಾನೋ ಸ್ಯಾಟಲೈಟ್ ಹೊತ್ತೊಯ್ಯಲಿದೆ. ಸತೀಶ್ ಧವನ್(SD-SAT) ಉಪಗ್ರಹ ಮೂರು ವೈಜ್ಞಾನಿಕ ಪೇಲೋಡ್ ಹೊತ್ತೊಯ್ಯಲಿದೆ. ಬಾಹ್ಯಾಕಾಶ ವಿಕಿರಣ ಅಧ್ಯಯನ, ಮ್ಯಾಗ್ನೋಟೋಸ್ಟಿ ಹಾಗೂ ಸಂವಹನ ಜಾಲ ಪೇಲೋಡ್‌ನ್ನು ಹೊತ್ತೊಯ್ಯಲಿದೆ.
ವಿದ್ಯಾರ್ಥಿಗಳ ಉಪಗ್ರಹ ಉಡಾವಣೆಗೆ ಸಿದ್ಧ; ವೆಚ್ಚ ಎಷ್ಟು ಗೊತ್ತಾ?.
ಅಮೆರಿಕ ಸೇರಿದಂತೆ ಹಲವು ಇತರ ರಾಷ್ಟ್ರಗಳು ಉಪಗ್ರಹದಲ್ಲಿ ಬೈಬಲ್ ಪ್ರತಿ ಕಳುಹಿಸಿದೆ. ಈ ಬಾರಿ ಭಾರತದ ಮೊದಲ ಭಾರಿಗೆ ಹಿಂದೂ ಪವಿತ್ರ ಗ್ರಂಥ ಭವದ್ಗೀತೆ ಹೊತ್ತು ಕಕ್ಷೆಗೆ ಹಾರಲಿದೆ. ಇನ್ನು ಸ್ವದೇಶಿ ನಿರ್ಮಿತ ಸ್ಯಾಟಲೈಟ್ ಆಗಿದ್ದು, ಪ್ರಧಾನಿ ಮೋಧಿ ಭಾವಚಿತ್ರ ಹಾಗೂ ಆತ್ಮನಿರ್ಭರ್ ಭಾರತ್ ಮಿಷನ್ ಪದಗಳನ್ನು ಈ ಉಪಗ್ರಹದಲ್ಲಿ ಅಚ್ಚಡಿಸಲಾಗಿದೆ. ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರನ್ನು ಸೇರಿಸಲಾಗಿದೆ.
ಸ್ಪೇಸ್ ಕಿಡ್ಜ್ ಇಂಡಿಯಾ ಸಂಸ್ಥೆ ನ್ಯಾನೋ ಸ್ಯಾಟಲೈಟ್ ಅಭಿವೃದ್ಧಿ ಪಡಿಸಿದೆ. ಭಾರತೀಯ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆಗೆ ಕೈಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ