
ಲಕ್ನೋ: ಬಾರ್‌ನಲ್ಲಿ ಬಿಜೆಪಿ ನಾಯಕ ಅಲ್ಲಿಯ ಯುವತಿಯರ ಜೊತೆ ಹೆಜ್ಜೆ ಹಾಕಿರುವ ವಿಡಿಯೋಯವನ್ನು ಎಕ್ಸ್ ಖಾತೆಯಲ್ಲಿ ಸಮಾಜವಾದಿ ಪಕ್ಷ ಹಂಚಿಕೊಂಡಿದೆ. ಉತ್ತರ ಪ್ರದೇಶ ರಾಜಕಾರಣದಲ್ಲಿ ಈ ವಿಡಿಯೋ ಸಂಚಲನ ಸೃಷ್ಟಿಸಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಸ್ಥಳೀಯಮಟ್ಟದಲ್ಲಿಯೂ ಜನರ ಮೊಬೈಲ್‌ನಲ್ಲಿ ವಿಡಿಯೋ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಸಮಾಜವಾದಿ ಪಾರ್ಟಿ, ಸಂಸ್ಕಾರ, ಸಂಸ್ಲೃತಿ, ಧರ್ಮ ಮತ್ತು ರಾಷ್ಟ್ರವಾದದ ಪಾಠ ಮಾಡುವ ಬಿಜೆಪಿ ಅತ್ಯಂತ ಕೆಳಮಟ್ಟದಲ್ಲಿದ್ದು, ಅತ್ಯಚಾರಿಗಳಾಗಿದ್ದಾರೆ ಎಂಬ ವಿವಾದಿತ ಸಾಲನ್ನು ಬರೆದುಕೊಂಡಿದೆ. ಈ ಸಾಲುಗಳನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷ, ಸದನದಲ್ಲಿ ಮುಖ್ಯಮಂತ್ರಿಗಳು ದೊಡ್ಡ ದೊಡ್ಡ ಭಾಷಣ ಮಾಡಿ ಜ್ಞಾನ ಹಂಚುವ ಕೆಲಸ ಮಾಡ್ತಾರೆ. ಆದ್ರೆ ಅಪರಾಧಿಗಳು, ಬಲತ್ಕಾರಿಗಳು, ನೀಚರು ಮತ್ತು ಭ್ರಷ್ಟರಿಗೆರ ಸಂಪೂರ್ಣ ಪ್ರೋತ್ಸಾಹವನ್ನು ಮುಖ್ಯಮಂತ್ರಿಗಳು ನೀಡುತ್ತಾರೆ ಎಂದು ಬರೆದು ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬಾರ್ ಗರ್ಲ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವ್ಯಕ್ತಿಯನ್ನು ಬಜರಂಗದಳ ಮತ್ತು ಬಿಜೆಪಿ ನಾಯಕ ಎಂದು ಹೇಳಲಾಗಿದೆ.
ಸಂಸತ್ತಿಗೆ ಬರುವ ಮೊದಲು ರಾಹುಲ್ ಗಾಂಧಿ ಪರೀಕ್ಷೆ ನಡೆಸಿ ಎಂದ ಕಂಗನಾ! ಏನಿದು ಹೊಸ ವರಸೆ?
ಬಿಜೆಪಿ-ಎಸ್‌ಪಿ ನಡುವೆ ವಾರ್
ಈ ವಿಡಿಯೋ ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಒಬ್ಬ ವ್ಯಕ್ತಿಯ ಖಾಸಗಿ ಜೀವನನ್ನು ಇಣುಕಿ ನೋಡುವುದು ಸಮಾಜವಾದಿ ಪಕ್ಷದ ದಾರಿದ್ಯ್ರದ ಮಾನಸಿಕತೆಯಾಗಿದೆ ಎಂದು ವಾಗ್ದಾಳಿ ನಡೆಸಿದೆ. ಈ ವಿಡಿಯೋ ಸಮರ್ಥಿಸಿಕೊಂಡಿರುವ ಕೆಲ ನೆಟ್ಟಿಗರು, ರಾಜಕೀಯದಲ್ಲಿದ್ದ ಮಾತ್ರಕ್ಕೆ ಆತನಿಗೆ ಖಾಸಗಿ ಜೀವನ ಇರಲ್ಲವಾ? ಅದು ಅವನ ವೈಯಕ್ತಿಕ ಜೀವನವಾಗಿದೆ. ಬೇರೆಯವರ ಅಶ್ಲೀಲ ನೃತ್ಯ ನೋಡುವ ನೀವು ನಿಮ್ಮ ನೈತಿಕತೆಯನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಿ ಎಂದು ಎಸ್‌ಪಿ ವಿರುದ್ಧ ಕಿಡಿಕಾರಿದ್ದಾರೆ.
ರಾಷ್ಟ್ರವಾದಿ ಹೆಸರಿನ ಖಾತೆಯಿಂದ ಫೋಟೋ ಕಮೆಂಟ್ ಮಾಡಲಾಗಿ ದೆ. ಅವನು ಬಾರ್ ಗರ್ಲ್ ಜೊತೆ ನಿಂತಿದ್ದಾನೆಯೇ ಹೊರತು ನಿಮ್ಮ ಕುಟುಂಬ ಸದಸ್ಯರೊಂದಿಗೆ ಅಲ್ಲ. ನಿಮ್ಮ ಪಕ್ಷವೇ ಅತ್ಯಾಚಾರಿಗಳ ಪರ ನಿಲ್ಲುತ್ತವೆ, ನೀವು ಬೇರೆಯವರಿಗೆ ಜ್ಞಾನ ಹಂಚುತ್ತೀರಾ ಎಂದು ಕಮೆಂಟ್ ಮಾಡಿದ್ದಾನೆ. ಇದೇ ರೀತಿ ಎಕ್ಸ್ ಖಾತೆಯಲ್ಲಿ ಎರಡೂ ಪಕ್ಷಗಳ ಬೆಂಬಲಿಗರು ಪರಸ್ಪರ ಕೆಸರೆಚುಕೊಳ್ಳುತ್ತಿದ್ದಾರೆ.
ತೆಲಂಗಾಣ ಅಸೆಂಬ್ಲಿಯಲ್ಲಿ ಹೈಡ್ರಾಮಾ: ಕೆಟಿಆರ್ ಕೈಕಾಲು ಹಿಡಿದು ಎತ್ತಿ ಹೊರಹಾಕಿದ ಮಾರ್ಷಲ್ಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ