ತ್ರಿಬಲ್ ರೈಡಿಂಗ್ ಬೈಕ್‌ನಲ್ಲಿ ಜೋಡಿಯ ಕಿಸ್ಸಿಂಗ್: ಆಕ್ರೋಶ ಹೆಚ್ಚಿಸಿದ ವೈರಲ್ ವಿಡಿಯೋ!

By Chethan Kumar  |  First Published Aug 1, 2024, 4:53 PM IST

ಗೆಳೆಯನ ಬೈಕ್‌ನಲ್ಲಿ ಜೋಡಿಯ ಪ್ರಯಾಣ. ಇಷ್ಟೇ ಆಗಿದ್ದರೆ ತ್ರಿಬಲ್ ರೈಡಿಂಗ್, ಹೆಲ್ಮೆಟ್ ಕೇಸು ಮಾತ್ರ ದಾಖಲಾಗುತ್ತಿತ್ತು. ಆದರೆ ಈ ಜೋಡಿ ರಸ್ತೆಯಲ್ಲಿ ಚುಂಬಿಸುತ್ತಾ ತೆರಳಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ.


ಬೈಕ್‌ನಲ್ಲಿ ಹೆಲ್ಮೆಟ್ ಹಾಕದೇ ತ್ರಿಬಲ್ ರೈಡಿಂಗ್. ಆದರೆ ಈ ಪ್ರಕರಣ ಇಷ್ಟಕ್ಕೆ ಮುಗಿದಿಲ್ಲ. ಗೆಳೆಯನ ಬೈಕ್ ಹಿಂಭಾಗದಲ್ಲಿ ಕುಳಿತ ಯುವಕ ಹಾಗೂ ಯುವತಿ ರಸ್ತೆಯುದ್ದಕ್ಕೂ ಚುಂಬಿಸುತ್ತಾ ಸಾಗಿದ್ದಾರೆ. ಈ ವಿಡಿಯೋ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಚಂಬನ ವಿಡಿಯೋ ಭಾರಿ ವೈರಲ್ ಆಗಿದೆ. ಇದೇ ವೇಳೆ ಜೋಡಿಗಳಿಗೆ ಸಂಕಷ್ಟವೂ ಹೆಚ್ಚಾಗಿದೆ. ಮೋಟಾರು ವಾಹನ ನಿಯಮ ಉಲ್ಲಂಘನೆ ಜೊತೆಗೆ ಸಾರ್ವಜನಿಕ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿರುವುದು ಹಾಗೂ ಚುಂಬನ ಸಾಹಸದ ಮೂಲಕ ರಸ್ತೆಯಲ್ಲಿ ಅಪಾಯಾಕಾರಿ ನಡೆ ಅನುಸರಿಸಿದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ರಾಜಾ ಇನ್‌ಸ್ಟಾ ಅನ್ನೋ ಖಾತೆಯಲ್ಲಿ ಈ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ಗೆಳೆಯ ಬೈಕ್‌ನ ಹಿಂಭಾದಲ್ಲ ಈ ಜೋಡಿ ಕುಳಿತುಕೊಂಡಿದೆ. ಬೈಕ್ ವೇಗವಾಗಿ ಸಾಗುತ್ತಿದ್ದಂತೆ ಈ ಜೋಡಿ ಮೊಬೈಲ್ ಕ್ಯಾಮೆರಾ ಆನ್ ಮಾಡಿ ವಿಡಿಯೋ ರೆಕಾರ್ಡ್ ಆರಂಭಿಸಿದ್ದಾರೆ. ಬಳಿಕ ಕ್ಯಾಮೆರಾ ನೋಡಿಕೊಂಡು ಚುಂಬಿಸಿದ್ದಾರೆ. ಹಲವು ಬಾರಿ ಈ ಜೋಡಿ ರಸ್ತೆಯಲ್ಲಿ ಈ ರೀತಿ ಚುಂಬಿಸುತ್ತಾ ಸಾಗಿದೆ. 

Tap to resize

Latest Videos

undefined

ನಡು ರಸ್ತೆಯಲ್ಲಿ ಜೋಡಿಯ ರೊಮ್ಯಾನ್ಸ್, ಸಿನ್ಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಪಜೀತಿ ದೃಶ್ಯ ಸೆರೆ!

ತಮ್ಮ ಚುಂಬನದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಹೆಮ್ಮೆಯಿಂದ ಚುಂಬನ ಕುರಿತು ಬರೆದುಕೊಂಡಿದ್ದಾರೆ. ಈ ವಿಡಿಯೋ ಕೆಲ ಹೊತ್ತಲ್ಲೇ ಭಾರಿ ವೈರಲ್ ಆಗಿದೆ. ಜೊತೆಗೆ ಅಷ್ಟೇ ಆಕ್ರೋಶಗಳು ವ್ಯಕ್ತವಾಗಿದೆ. ಹಲವರು ಈ ಕುರಿತು ಪೊಲೀಸರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ರೀತಿಯ ಸ್ಟಂಟ್ ಸಾರ್ವಜನಿಕ ರಸ್ತೆಯಲ್ಲಿ ಸಾಗುವ ಬೈಕ್ ಮೇಲೆ ಮಾಡಿದ್ದಾರೆ. ಸಾರ್ವನಿಕ ಪ್ರದೇಶದಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 

 

ಟ್ರಾಫಿಕ್ ನಿಯಮ ಉಲ್ಲಂಘನೆ ಜೊತೆಗೆ ಅಸಭ್ಯ ನಡೆದೆ ಎಲ್ಲಾ ಪ್ರಕರಣ ದಾಖಲಿಸಿ ಈ ಜೋಡಿಗೆ ಪಾಠ ಕಲಿಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಈ ಜೋಡಿಗಳ ಕಿಸ್ಸಿಂಗ್ ಇದೇ ಮೊದಲಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಕಿಸ್ಸಿಂಗ್ ಮೂಲಕವೇ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. 

ವಿವಿಧ ಕಡೆಗಳಲ್ಲಿ, ವಿವಿಧ ಬಗೆಯಲ್ಲಿ ಚುಂಬಿಸಿದ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಪೋಸ್ಟ್ ಮಾಡಿದೆ. ಚುಂಬನ ರೀಲ್ಸ್ ಮೂಲಕವೇ ಈ ಜೋಡಿ ವೈರಲ್ ಆಗಿದೆ. ಇಷ್ಟು ದಿನ ಈ ವಿಡಿಯೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಇದೀಗ ಸಾರ್ವಜನಿಕ ಪ್ರದೇಶದಲ್ಲಿ ಚುಂಬಿಸಿ ವಿವಾದಕ್ಕೆ ಗುರಿಯಾಗಿದೆ.

ಮಳೆಯಲಿ ಜೊತೆಯಾಗಿ ಹೆಜ್ಜೆ ಹಾಕಲು ಬಂದಿದೆ ರೊಮ್ಯಾಂಟಿಕ್ ಜೋಡಿ ಛತ್ರಿ!

 


 

आए दिन रील का जुनून सर चाड के बोल रहा है कि मारूँगा और मारूँगा भी साथ साथ बेशर्मी की हद भी पार करूँगा pic.twitter.com/Mj0mHpnmxJ

— Anurag maurya (@SamratAnurag4)
click me!